Home Bibles ಅಪೋಸ್ತಲರ ಕೃತ್ಯಗಳು 7:45 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 7:45 · ಕನ್ನಡ ಬೈಬಲ್

ತರುವಾಯ ಬಂದ ನಮ್ಮ ಪಿತೃಗಳು ಸಹ ತಮ್ಮ ಮುಂದೆ ದೇವರು ಹೊರಡಿಸಿದ ಅನ್ಯಜನಗಳ ಸ್ವಾಸ್ತ್ಯವನ್ನು ಸ್ವಾಧೀನ ಮಾಡಿಕೊಂಡಾಗ ಯೆಹೋಶುವನ ಕೂಡ ಆ ಗುಡಾರವನ್ನು ತಂದರು. ಅದು ದಾವೀದನ ಕಾಲದ ವರೆಗೂ ಅಲ್ಲೇ ಇತ್ತು.

Cross references

ದ್ವಿತೀಯೋಪದೇಶಕಾಂಡ 32:49

ಈ ಅಬಾರೀಮ್‌ ಪರ್ವತದ ಮೇಲೆ ಮೋವಾಬ್‌ ದೇಶದ ಲ್ಲಿಯೂ ಯೆರಿಕೋವಿಗೆ ಎದುರಾಗಿಯೂ ಇರುವ ನೆಬೋ ಬೆಟ್ಟದ ಮೇಲೆ ಏರಿಹೋಗು; ನಾನು ಇಸ್ರಾ ಯೇಲ್‌ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಡುವ ಕಾನಾನ್‌ ದೇಶವನ್ನು ನೋಡು,

ಯೆಹೋಶುವ 3:6

ಆಗ ಯೆಹೋಶುವನು ಯಾಜಕರಿಗೆ--ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಹಾದುಹೋಗಿರಿ ಅಂದನು. ಹಾಗೆಯೇ ಅವರು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಹೋದರು.

ಯೆಹೋಶುವ 3:11

ಇಗೋ, ಸಮಸ್ತ ಭೂಮಿಗೆ ಕರ್ತನ ಒಡಂಬಡಿಕೆಯ ಮಂಜೂಷವು ನಿಮ್ಮ ಮುಂದೆ ಯೊರ್ದನನ್ನು ದಾಟಿಹೋಗುವದು.

ಯೆಹೋಶುವ 18:1

ಇಸ್ರಾಯೇಲ್‌ ಮಕ್ಕಳ ಸಭೆಯೆಲ್ಲಾ ಶೀಲೋವಿನಲ್ಲಿ ಒಟ್ಟುಗೂಡಿ ಅಲ್ಲಿ ಸಭೆಯ ಗುಡಾರವನ್ನು ನಿಲ್ಲಿಸಿದರು. ದೇಶವು ಅವರ ವಶವಾಯಿತು.

ಯೆಹೋಶುವ 23:9

ಕರ್ತನು ನಿಮ್ಮ ಮುಂದೆ ಬಲವಾದ ದೊಡ್ಡ ಜನಾಂಗಗಳನ್ನು ಹೊರಡಿಸಿಬಿಟ್ಟನು. ಆದರೆ ನಿಮ್ಮ ಮುಂದೆ ಈ ವರೆಗೂ ಒಬ್ಬರಾದರೂ ನಿಲ್ಲಲಾರದೆ ಹೋದರು.

ಯೆಹೋಶುವ 24:18

ಇದಲ್ಲದೆ ದೇಶದಲ್ಲಿ ವಾಸವಾಗಿದ್ದ ಅಮೋರಿಯರ ಸಕಲ ಜನಗಳನ್ನು ಕರ್ತನು ನಮ್ಮ ಮುಂದೆ ಹೊರಡಿಸಿ ಬಿಟ್ಟನು. ಆದದರಿಂದ ನಾವು ಕರ್ತನನ್ನೇ ಸೇವಿಸುವೆವು; ಆತನು ನಮ್ಮ ದೇವರು ಅಂದರು.

ನ್ಯಾಯಾಧಿಪತಿಗಳು 18:31

ದೇವರ ಮನೆ ಶಿಲೋವಿ ನಲ್ಲಿ ಇರುವ ಮಟ್ಟಿಗೂ ವಿಾಕನು ಮಾಡಿದ ವಿಗ್ರಹ ವನ್ನು ಅವರು ಇಟ್ಟುಕೊಂಡಿದ್ದರು.

1 ಸಮುವೇಲ 4:4

ಹಾಗೆಯೇ ಜನರನ್ನು ಕೆರೂಬಿಗಳ ಮಧ್ಯ ದಲ್ಲಿರುವ ಸೈನ್ಯಗಳ ಕರ್ತನ ಒಡಂಬಡಿಕೆಯ ಮಂಜೂ ಷವನ್ನು ತಕ್ಕೊಂಡು ಬರುವಂತೆ ಶೀಲೋವಿಗೆ ಕಳು ಹಿಸಿದರು. ಅಲ್ಲಿ ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ ಫೀನೆಹಾಸನೂ ದೇವರ ಒಡಂಬಡಿಕೆಯ ಮಂಜೂಷದ ಬಳಿಯಲ್ಲಿದ್ದರು;

2 ಸಮುವೇಲ 6:1

ದಾವೀದನು ಇಸ್ರಾಯೇಲಿನಲ್ಲಿ ಆಯಲ್ಪಟ್ಟ ಮೂವತ್ತು ಸಾವಿರ ಜನರನ್ನು ಕೂಡಿಸಿ ಕೊಂಡು ಎದ್ದು ತನ್ನ ಸಂಗಡ ಇದ್ದ ಎಲ್ಲಾ ಜನರನ್ನು ಕರಕೊಂಡು

1 ಅರಸುಗಳು 8:4

ಯಾಜಕರೂ ಲೇವಿಯರೂ ಇವುಗಳನ್ನು ತಂದರು.

1 ದಿನವೃತ್ತಾಂತ 7:27

ಇವನ ಮಗನು ನೋನನು, ಇವನ ಮಗನು ಯೆಹೋಷುವನು.

1 ದಿನವೃತ್ತಾಂತ 15:1

ಇದಲ್ಲದೆ ದಾವೀದನ ಪಟ್ಟಣದಲ್ಲಿ ದಾವೀದನು ತನಗೆ ಮನೆಗಳನ್ನು ಕಟ್ಟಿಸಿ ಕೊಂಡು ದೇವರ ಮಂಜೂಷಕ್ಕೋಸ್ಕರ ಸ್ಥಳವನ್ನು ಸಿದ್ಧಮಾಡಿ ಅದರ ನಿಮಿತ್ತ ಗುಡಾರ ಹಾಕಿಸಿದನು.

1 ದಿನವೃತ್ತಾಂತ 16:39

ಯಾವಾಗಲೂ ಉದಯ ಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ದಹನಬಲಿ ಪೀಠದ ಮೇಲೆ ಕರ್ತನಿಗೆ ದಹನಬಲಿಗಳನ್ನು ಅರ್ಪಿಸು ವದಕ್ಕೂ ಕರ್ತನು ಇಸ್ರಾಯೇಲಿಗೆ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದ ಎಲ್ಲಾದರ ಪ್ರಕಾರ ಮಾಡು ವದಕ್ಕೂ

1 ದಿನವೃತ್ತಾಂತ 21:29

ಅರಣ್ಯ ದಲ್ಲಿ ಮೋಶೆಯು ಮಾಡಿದ ಕರ್ತನ ಗುಡಾರವೂ ದಹನಬಲಿಪೀಠವೂ ಆ ಕಾಲದಲ್ಲಿ ಗಿಬ್ಯೋನಿನ ಉನ್ನತ ಸ್ಥಳದಲ್ಲಿ ಇದ್ದವು.ಆದರೆ ದಾವೀದನು ದೇವರ ಹತ್ತಿರ ವಿಚಾರಿಸಲು ಅದರ ಬಳಿಗೆ ಹೋಗ ಲಾರದೆ ಇದ್ದನು; ಯಾಕಂದರೆ ಅವನು ಕರ್ತನ ದೂತನ ಕತ್ತಿಯ ನಿಮಿತ್ತ ಹೆದರಿದನು.

ನೆಹೆಮ್ಯ 9:24

ಹೀಗೆ ಮಕ್ಕಳು ಪ್ರವೇಶಿಸಿ ದೇಶವನ್ನು ಸ್ವಾಧೀನಮಾಡಿಕೊಂಡರು. ನೀನು ಅವರ ಮುಂದೆ ದೇಶದ ನಿವಾಸಿಗಳಾದ ಕಾನಾನ್ಯರನ್ನು ಕುಗ್ಗಿಸಿ ಅವರಿಗೆ ತಮ್ಮ ಇಚ್ಛೆಯ ಪ್ರಕಾರ ಮಾಡುವದಕ್ಕೆ ಅವರನ್ನೂ ಅವರ ಅರಸುಗಳನ್ನೂ ದೇಶದ ಜನರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟಿ.

ಕೀರ್ತನೆಗಳು 44:2

ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ.

ಕೀರ್ತನೆಗಳು 78:55

ಅನ್ಯಜನಾಂಗವನ್ನು ಅವರ ಮುಂದೆ ಹೊರಗೆ ಹಾಕಿ, ಅವರ ಬಾಧ್ಯತೆಯನ್ನು ಅಳತೆಮಾಡಿ, ಹಂಚಿ, ಅವರ ಗುಡಾರಗಳಲ್ಲಿ ಇಸ್ರಾಯೇಲಿನ ಗೋತ್ರ ಗಳು ವಾಸಿಸುವಂತೆ ಮಾಡಿದನು.

ಅಪೋಸ್ತಲರ ಕೃತ್ಯಗಳು 13:19

ಕಾನಾನ್‌ ದೇಶದಲ್ಲಿದ್ದ ಏಳು ಜನಾಂಗ ಗಳನ್ನು ನಿರ್ಮೂಲ ಮಾಡಿದ ಮೇಲೆ ಚೀಟು ಹಾಕಿ ಆ ದೇಶವನ್ನು ಅವರಿಗೆ ಹಂಚಿಕೊಟ್ಟನು.

ಹೆಬ್ರಿಯರಿಗೆ 4:8

ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ ತರುವಾಯ ಮತ್ತೊಂದು ದಿವಸವನ್ನು ಕುರಿತು ಹೇಳೋಣವಾಗುತ್ತಿರಲಿಲ್ಲ.

Interlinear

Choose Theme