Home Bibles ಅಪೋಸ್ತಲರ ಕೃತ್ಯಗಳು 28:14 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 28:14 · ಕನ್ನಡ ಬೈಬಲ್

ಅಲ್ಲಿ ನಾವು ಸಹೋದರರನ್ನು ನೋಡಿದಾಗ ಅವರು ನಮ್ಮನ್ನು ಏಳು ದಿವಸ ತಮ್ಮೊಂದಿಗೆ ಇರಬೇಕೆಂದು ಬೇಡಿಕೊಂಡರು; ಹೀಗೆ ನಾವು ರೋಮ್‌ ಕಡೆಗೆ ಹೊರಟೆವು.

Cross references

ಆದಿಕಾಂಡ 7:4

ಇನ್ನು ಏಳು ದಿವಸಗಳಲ್ಲಿ ಭೂಮಿಯ ಮೇಲೆ ನಾಲ್ವತ್ತು ಹಗಲು ನಾಲ್ವತು ರಾತ್ರಿ ಮಳೆಯು ಬರುವಂತೆ ನಾನು ಮಾಡುವೆನು. ನಾನು ಉಂಟುಮಾಡಿದ ಜೀವರಾಶಿಯನ್ನೆಲ್ಲಾ ಭೂಮುಖದಿಂದ ನಾಶಮಾಡು ತ್ತೇನೆ ಅಂದನು.

ಆದಿಕಾಂಡ 8:10

ಅವನು ಇನ್ನು ಏಳು ದಿನಗಳಾದ ಮೇಲೆ ತಿರಿಗಿ ನಾವೆಯೊಳಗಿಂದ ಪಾರಿವಾಳವನ್ನು ಬಿಟ್ಟನು.

ಕೀರ್ತನೆಗಳು 119:63

ನಿನಗೆ ಭಯಪಡುವವರೆಲ್ಲರಿಗೂ ನಿನ್ನ ಕಟ್ಟಳೆಗ ಳನ್ನು ಕೈಕೊಳ್ಳುವವರಿಗೂ, ನಾನು ಸಂಗಡಿಗನಾಗಿದ್ದೇನೆ.

ಮತ್ತಾಯ 10:11

ನೀವು ಯಾವದಾದರೂ ಪಟ್ಟಣದೊಳ ಗಾಗಲೀ ಊರೊಳಗಾಗಲೀ ಪ್ರವೇಶಿಸುವಾಗ ಅದರಲ್ಲಿ ಯಾರು ಯೋಗ್ಯರಾಗಿದ್ದಾರೆಂದು ವಿಚಾರಿ ಸಿರಿ; ಮತ್ತು ಅಲ್ಲಿಂದ ಹೊರಡುವ ವರೆಗೆ ಅಲ್ಲಿಯೇ ಇಳುಕೊಂಡಿರ್ರಿ;

ಯೋಹಾನ 21:23

ಆಗ ಆ ಶಿಷ್ಯನು ಸಾಯುವದಿ ಲ್ಲವೆಂಬ ಮಾತು ಸಹೋದರರಲ್ಲಿ ಹರಡಿತು. ಆದರೂ--ಅವನು ಸಾಯುವದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ; ಆದರೆ--ನಾನು ಬರುವ ತನಕ ಅವನು ಇರುವದು ನನಗೆ ಮನಸ್ಸಿದ್ದರೆ ಅದು ನಿನಗೇನು ಎಂತಲೇ ಹೇಳಿದನು.

ಅಪೋಸ್ತಲರ ಕೃತ್ಯಗಳು 9:42

ಈ ಸಂಗತಿಯೂ ಯೊಪ್ಪದಲ್ಲೆಲ್ಲಾ ತಿಳಿದುಬಂದು ಅನೇಕರು ಕರ್ತನ ಮೇಲೆ ನಂಬಿಕೆ ಇಟ್ಟರು.ಆಮೇಲೆ ಪೇತ್ರನು ಯೊಪ್ಪದಲ್ಲಿ ಚರ್ಮಕಾರನಾದ ಸೀಮೋನನೆಂಬವನ ಬಳಿಯಲ್ಲಿ ಬಹಳ ದಿವಸಗಳ ವರೆಗೂ ಇದ್ದನು.

ಅಪೋಸ್ತಲರ ಕೃತ್ಯಗಳು 19:1

ಇದಾದ ಮೇಲೆ ಅಪೊಲ್ಲೋಸನು ಕೊರಿಂಥದಲ್ಲಿದ್ದಾಗ ಪೌಲನು ಮೇಲ್ಭಾ ಗದ ತೀರಗಳನ್ನು ದಾಟಿ ಎಫೆಸಕ್ಕೆ ಬಂದು ಕೆಲವು ಮಂದಿ ಶಿಷ್ಯರನ್ನು ಕಂಡನು.

ಅಪೋಸ್ತಲರ ಕೃತ್ಯಗಳು 20:6

ಹುಳಿಯಿಲ್ಲದ ರೊಟ್ಟಿಯ ದಿವಸ ಗಳಾದ ಮೇಲೆ ನಾವು ಫಿಲಿಪ್ಪಿಯಿಂದ ಹೊರಟು ಹಡಗನ್ನು ಹತ್ತಿ ಐದು ದಿವಸಗಳಲ್ಲಿ ತ್ರೋವಕ್ಕೆ ಅವರ ಬಳಿಗೆ ಬಂದೆವು. ಅಲ್ಲಿ ಏಳು ದಿವಸಗಳಿದ್ದೆವು.

ಅಪೋಸ್ತಲರ ಕೃತ್ಯಗಳು 21:4

ಅಲ್ಲಿ ನಾವು ಶಿಷ್ಯರನ್ನು ಕಂಡು ಏಳು ದಿವಸ ಇದ್ದೆವು; ಪೌಲನು ಯೆರೂಸ ಲೇಮಿಗೆ ಹೋಗಬಾರದೆಂದು ಅವರು ಆತ್ಮನ ಮುಖಾಂತರ ಅವನಿಗೆ ಹೇಳಿದರು.

ಅಪೋಸ್ತಲರ ಕೃತ್ಯಗಳು 21:7

ತೂರಿನಿಂದ ಪ್ರಯಾಣವನ್ನು ಮುಗಿಸಿದ ಮೇಲೆ ಪ್ತೊಲೆಮಾಯಕ್ಕೆ ಬಂದು ಅಲ್ಲಿದ್ದ ಸಹೋದರರನ್ನು ವಂದಿಸಿ ಅವರ ಬಳಿಯಲ್ಲಿ ಒಂದು ದಿವಸ ಇದ್ದೆವು.

Interlinear

Choose Theme