Home Bibles ☰ Books ಅಪೋಸ್ತಲರ ಕೃತ್ಯಗಳು 21:34 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 21:34 · ಕನ್ನಡ ಬೈಬಲ್

ಆಗ ಸಮೂಹದಲ್ಲಿ ಕೆಲವರು ಒಂದು ವಿಧವಾಗಿ ಬೇರೆ ಕೆಲವರು ಇನ್ನೊಂದು ವಿಧವಾಗಿ ಕೂಗಿದಾಗ ಆ ಗದ್ದಲದ ನಿಜಸ್ಥಿತಿಯನ್ನು ಅವನು ತಿಳಿಯಲಾರದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಬೇಕೆಂದು ಅಪ್ಪಣೆಕೊಟ್ಟನು.

Cross references

ಅಪೋಸ್ತಲರ ಕೃತ್ಯಗಳು 19:32

ಯಾಕಂದರೆ ಕೆಲವರು ಒಂದು ಬಗೆಯಾಗಿ ಮತ್ತೆ ಕೆಲವರು ಇನ್ನೊಂದು ಬಗೆಯಾಗಿ ಕೂಗುತ್ತಿದ್ದರು. ಸಭೆಯು ಗಲಿಬಿಲಿಯಾಗಿತ್ತು ಮತ್ತು ಹೆಚ್ಚಾದ ಜನರಿಗೆ ತಾವು ಕೂಡಿಬಂದಿದ್ದ ಕಾರಣವು ಗೊತ್ತಿರಲಿಲ್ಲ.

ಅಪೋಸ್ತಲರ ಕೃತ್ಯಗಳು 21:37

ಪೌಲನನ್ನು ಕೋಟೆಯೊಳಗೆ ಕರೆದುಕೊಂಡು ಹೋಗುವದಕ್ಕಿದ್ದಾಗ ಅವನು ಸಹಸ್ರಾಧಿಪತಿಗೆ-- ನಿನ್ನೊಂದಿಗೆ ನಾನು ಮಾತನಾಡಬಹುದೋ ಎಂದು ಕೇಳಿದಾಗ ಅವನು--ನೀನು ಗ್ರೀಕ್‌ ಮಾತನಾಡ ಬಲ್ಲೆಯಾ?

ಅಪೋಸ್ತಲರ ಕೃತ್ಯಗಳು 22:24

ಯಾವದಕ್ಕಾಗಿ ಅವರು ಅವನಿಗೆ ವಿರೋಧವಾಗಿ ಕೂಗಿಕೊಂಡರೆಂಬದನ್ನು ಮುಖ್ಯ ನಾಯಕನು ತಿಳುಕೊಳ್ಳುವಂತೆ ಅವನನ್ನು ಕೋಟೆ ಯೊಳಕ್ಕೆ ತರಬೇಕೆಂದು ಆಜ್ಞಾಪಿಸಿ ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಅಪ್ಪಣೆಕೊಟ್ಟನು;

ಅಪೋಸ್ತಲರ ಕೃತ್ಯಗಳು 22:30

ಅವನ ಮೇಲೆ ಯೆಹೂದ್ಯರು ತಪ್ಪು ಹೊರಿಸಿದ ನಿಜವಾದ ವಿಷಯವನ್ನು ತಿಳಿಯಬೇಕೆಂದು ಅಪೇಕ್ಷಿಸಿ ಮುಖ್ಯ ನಾಯಕನು ಮರುದಿನ ಅವನ ಬೇಡಿಗಳನ್ನು ಬಿಚ್ಚಿ ಪ್ರಧಾನಯಾಜಕರೂ ಆಲೋಚನಾ ಸಭೆಯವ ರೆಲ್ಲರೂ ಸೇರಿಬರಬೇಕೆಂದು ಅಪ್ಪಣೆ ಕೊಟ್ಟ ಪೌಲನನ್ನು ಕರೆದುಕೊಂಡು ಹೋಗಿ ಅವರ ಮುಂದೆ ನಿಲ್ಲಿಸಿದ

ಅಪೋಸ್ತಲರ ಕೃತ್ಯಗಳು 23:10

ಅಲ್ಲಿ ದೊಡ್ಡ ಭೇದ ಉಂಟಾದಾಗ ಅವರು ಪೌಲನನ್ನು ಎಳೆದಾಡಿ ತುಂಡುತುಂಡಾಗಿ ಮಾಡಿ ಯಾರು ಎಂದು ಮುಖ್ಯ ನಾಯಕನು ಭಯಪಟ್ಟು ಅವನನ್ನು ಅವರೊಳಗಿಂದ ಬಲವಂತವಾಗಿ ಕೋಟೆಯೊಳಗೆ ತರಬೇಕೆಂದು ಸೈನಿಕರಿಗೆ ಆಜ್ಞಾಪಿಸಿದನು.

ಅಪೋಸ್ತಲರ ಕೃತ್ಯಗಳು 23:16

ಹೀಗೆ ಅವರು ಹೊಂಚು ಹಾಕಿಕೊಂಡಿರುವದನ್ನು ಪೌಲನ ಸಹೋದರಿಯ ಮಗನು ಕೇಳಿ ಕೋಟೆಯೊಳಗೆ ಪ್ರವೇಶಿಸಿ ಪೌಲನಿಗೆ ತಿಳಿಸಿದನು.

ಅಪೋಸ್ತಲರ ಕೃತ್ಯಗಳು 23:32

ಮರುದಿನ ಕುದುರೆ ಸವಾರರು ಅವನ ಜೊತೆಯಲ್ಲಿ ಹೋಗುವಂತೆ ಬಿಟ್ಟು ತಾವು ಕೋಟೆಗೆ ಹಿಂತಿರುಗಿದರು.

ಅಪೋಸ್ತಲರ ಕೃತ್ಯಗಳು 25:26

ಈ ಮನುಷ್ಯನ ವಿಷಯವಾಗಿ ನನ್ನ ದೊರೆಗೆ ಬರೆಯುವದಕ್ಕಾಗಿ ನಿರ್ದಿಷ್ಟವಾದದ್ದೇನೂ ಇಲ್ಲ; ಆದಕಾರಣ ವಿಚಾರಣೆ ಯಾದನಂತರ ಬರೆಯುವದಕ್ಕೆ ನನಗೆ ಏನಾದರೂ ಸಿಕ್ಕುವದೆಂದು ನಿಮ್ಮ ಮುಂದೆ ವಿಶೇಷವಾಗಿ ಅರಸನಾದ ಓ ಅಗ್ರಿಪ್ಪನೇ, ನಿನ್ನ ಮುಂದೆ ಇವನನ್ನು ನಾನು ತಂದಿದ್ದೇನೆ.ಸೆರೆಯವನಿಗೆ ವಿರೋಧವಾಗಿ ಹೊರಿಸಲ್ಪಟ್ಟ ಅಪರಾಧಗಳನ್ನು ಸೂಚಿಸುವದಕ್ಕೆ ಏನೂ ಇಲ್ಲದೆ ಅವನನ್ನು ಕಳುಹಿಸುವದು ಯುಕ್ತವಲ್ಲ ಎಂಬದಾಗಿ ನನಗೆ ಕಾಣುತ್ತದೆ ಎಂದು ಹೇಳಿದನು.

Interlinear

Choose Theme