Home Bibles ☰ Books ಅಪೋಸ್ತಲರ ಕೃತ್ಯಗಳು 19:32 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 19:32 · ಕನ್ನಡ ಬೈಬಲ್

ಯಾಕಂದರೆ ಕೆಲವರು ಒಂದು ಬಗೆಯಾಗಿ ಮತ್ತೆ ಕೆಲವರು ಇನ್ನೊಂದು ಬಗೆಯಾಗಿ ಕೂಗುತ್ತಿದ್ದರು. ಸಭೆಯು ಗಲಿಬಿಲಿಯಾಗಿತ್ತು ಮತ್ತು ಹೆಚ್ಚಾದ ಜನರಿಗೆ ತಾವು ಕೂಡಿಬಂದಿದ್ದ ಕಾರಣವು ಗೊತ್ತಿರಲಿಲ್ಲ.

Cross references

ಮತ್ತಾಯ 11:7

ಅವರು ಹೊರಟುಹೋಗುತ್ತಿದ್ದಾಗ ಯೇಸು ಯೋಹಾನನ ಕುರಿತಾಗಿ ಜನಸಮೂಹಗಳೊಂ ದಿಗೆ -- ಏನು ನೋಡುವದಕ್ಕಾಗಿ ನೀವು ಅಡವಿಗೆ ಹೋದಿರಿ? ಗಾಳಿಯಿಂದ ಅಲ್ಲಾಡುವದಂಟನ್ನೋ?

ಲೂಕ 7:24

ಯೋಹಾನನ ದೂತರು ಹೊರಟು ಹೋದ ಮೇಲೆ ಆತನು ಯೋಹಾನನ ವಿಷಯವಾಗಿ ಮಾತನಾಡಲಾರಂಭಿಸಿ ಜನರಿಗೆ--ನೀವು ಯಾವದನ್ನು ನೋಡುವದಕ್ಕಾಗಿ ಅಡವಿಗೆ ಹೋದಿರಿ? ಗಾಳಿಯಿಂದ ಅಲ್ಲಾಡುವದಂಟನ್ನೋ?

ಅಪೋಸ್ತಲರ ಕೃತ್ಯಗಳು 19:29

ಆಗ ಊರೆಲ್ಲಾ ಗಲಿಬಿಲಿಯಾಯಿತು; ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನು ಅರಿಸ್ತಾರ್ಕನನ್ನು ಜನರು ಹಿಡಿದುಕೊಂಡು ಒಗ್ಗಟ್ಟಾಗಿ ನಾಟಕ ಶಾಲೆಯೊಳಗೆ ನುಗ್ಗಿದರು.

ಅಪೋಸ್ತಲರ ಕೃತ್ಯಗಳು 19:40

ಯಾಕಂ ದರೆ ಈ ಜನಸಂದಣಿಯನ್ನು ಕುರಿತಾಗಿ ಸಮಾಧಾನ ಹೇಳುವದಕ್ಕೆ ಯಾವ ಕಾರಣವೂ ಇಲ್ಲದಿರುವದರಿಂದ ಈ ದಿನದ ದಂಗೆಯ ವಿಷಯವಾಗಿ ನ್ಯಾಯವಿಚಾರಣೆಗೆ ಗುರಿಯಾಗುವವರಾಗಿದ್ದೇವೆ ಎಂದು ಹೇಳಿಅವನು ಆ ಗುಂಪನ್ನು ಹಾಗೆ ಕಳುಹಿಸಿಬಿಟ್ಟನು.

ಅಪೋಸ್ತಲರ ಕೃತ್ಯಗಳು 21:34

ಆಗ ಸಮೂಹದಲ್ಲಿ ಕೆಲವರು ಒಂದು ವಿಧವಾಗಿ ಬೇರೆ ಕೆಲವರು ಇನ್ನೊಂದು ವಿಧವಾಗಿ ಕೂಗಿದಾಗ ಆ ಗದ್ದಲದ ನಿಜಸ್ಥಿತಿಯನ್ನು ಅವನು ತಿಳಿಯಲಾರದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಬೇಕೆಂದು ಅಪ್ಪಣೆಕೊಟ್ಟನು.

Interlinear

Choose Theme