Home Bibles ಅಪೋಸ್ತಲರ ಕೃತ್ಯಗಳು 2:13 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 2:13 · ಕನ್ನಡ ಬೈಬಲ್

ಕೆಲವರು--ಈ ಮನುಷ್ಯರು ಹೊಸ ಮದ್ಯಪಾನ ಮಾಡಿ ಮತ್ತರಾಗಿದ್ದಾರೆ ಎಂದು ಹೇಳಿ ಹಾಸ್ಯ ಮಾಡಿದರು.

Cross references

1 ಸಮುವೇಲ 1:14

ಏಲಿಯು ಅವಳಿಗೆ--ಎಷ್ಟರ ವರೆಗೆ ಅಮಲೇರಿದವಳಾಗಿರುವಿ? ದ್ರಾಕ್ಷಾರಸದ ಮತ್ತು ನಿನ್ನನ್ನು ಬಿಟ್ಟು ಹೋಗಲಿ ಅಂದನು.

ಯೋಬ 32:19

ಇಗೋ, ನನ್ನ ಹೊಟ್ಟೆಯು ತೆರೆಯಲ್ಪಡದ ದ್ರಾಕ್ಷಾರಸದ ಹಾಗೆಯೂ ಒಡೆದು ಹೋಗುವ ಹೊಸ ಬುದ್ದಲಿಗಳ ಹಾಗೆಯೂ ಅದೆ.

ಪರಮಗೀತ 7:9

ನಿನ್ನ ಬಾಯಿಯ ಅಂಗಳವು ನನ್ನ ಪ್ರಿಯನ ಉತ್ತಮವಾದ ದ್ರಾಕ್ಷಾರಸದ ಹಾಗಿರುವದು. ಅದು ಸಿಹಿಯಾಗಿ ಹೋಗುವಂಥದ್ದು, ನಿದ್ರೆಮಾಡುವವರ ತುಟಿಗಳನ್ನು ಮಾತಾಡಿಸುವಂಥದ್ದು.

ಯೆಶಾಯ 25:6

ಸೈನ್ಯಗಳ ಕರ್ತನು ಈ ಪರ್ವತದಲ್ಲಿ ಎಲ್ಲಾ ಜನಗಳಿಗೆ ಸಾರವತ್ತಾದ (ಕೊಬ್ಬಿದ) ಔತಣವನ್ನೂ ಮಡ್ಡಿಗಟ್ಟಿದ ದ್ರಾಕ್ಷಾರಸದ ಔತಣವನ್ನೂ ಮೂಳೆ ಕೊಬ್ಬನ್ನೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾ ರಸವನ್ನು ಸಿದ್ದಮಾಡುವನು.

ಜೆಕರ್ಯ 9:15

ಸೈನ್ಯಗಳ ಕರ್ತನು ಅವರನ್ನು ಕಾಪಾಡುವನು; ಅವರು ನುಂಗಿ ಕವಣೆ ಕಲ್ಲುಗಳನ್ನು ಸ್ವಾಧೀನಮಾಡಿ ಕೊಳ್ಳುವರು; ಕುಡಿದು ದ್ರಾಕ್ಷಾರಸದಿಂದಾದ ಹಾಗೆ ಓಲಾಡುವರು, ಪಾತ್ರೆಯ ಹಾಗೆಯೂ ಬಲಿಪೀಠದ ಮೂಲೆಗಳ ಹಾಗೆಯೂ ತುಂಬಿರುವರು.

ಜೆಕರ್ಯ 9:17

ಆತನ ಒಳ್ಳೇತನವು ಎಷ್ಟೋ ದೊಡ್ಡದು; ಆತನ ಸೌಂದರ್ಯವು ಎಷ್ಟು ಮಹತ್ತಾ ದದ್ದು! ಧಾನ್ಯವು ಯೌವನಸ್ಥರನ್ನೂ ದ್ರಾಕ್ಷಾರಸವು ಯುವತಿಯರನ್ನೂ ಹರ್ಷಗೊಳಿಸುವವು.

ಜೆಕರ್ಯ 10:7

ಎಫ್ರಾಯಾಮಿನವರು ಶೂರನಂತೆ ಇರುವರು; ಅವರ ಹೃದಯವು ದ್ರಾಕ್ಷಾರಸದಿಂದಾದ ಹಾಗೆ ಸಂತೋಷಪಡುವದು; ಹೌದು, ಅವರ ಮಕ್ಕಳು ನೋಡಿ ಸಂತೋಷಿಸುವರು; ಅವರ ಹೃದಯವು ಕರ್ತ ನಲ್ಲಿ ಉಲ್ಲಾಸಪಡುವದು.

ಅಪೋಸ್ತಲರ ಕೃತ್ಯಗಳು 2:15

ನೀವು ಭಾವಿಸಿದಂತೆ ಇವರು ಕುಡಿದು ಅಮಲೇರಿ ದವರಲ್ಲ; ಯಾಕಂದರೆ ಈಗ ಹಗಲು ಮೂರು (ಒಂಭತ್ತು) ಗಂಟೆಯಾಗಿದೆಯಷ್ಟೆ.

1 ಕೊರಿಂಥದವರಿಗೆ 14:23

ಆದ ಕಾರಣ ಸಭೆಯೆಲ್ಲವೂ ಒಂದು ಸ್ಥಳದಲ್ಲಿ ಕೂಡಿ ಬಂದಾಗ ಎಲ್ಲರೂ ಭಾಷೆಗಳನ್ನಾಡುವದಾದರೆ ತಿಳುವಳಿಕೆ ಯಿಲ್ಲದವರು ಇಲ್ಲವೆ ಅವಿಶ್ವಾಸಿಗಳು ಒಳಗೆ ಬಂದು ನೀವು ಹುಚ್ಚರಾಗಿದ್ದೀರೆಂದು ಹೇಳುವದಿಲ್ಲವೇ?

ಎಫೆಸದವರಿಗೆ 5:18

ಮದ್ಯಪಾನ ಮಾಡಿ ಮತ್ತರಾಗಬೇಡಿರಿ, ಯಾಕಂದರೆ ಅದರಿಂದ ಪಟಿಂಗತನವು ಹುಟ್ಟುತ್ತದೆ. ಪವಿತ್ರಾತ್ಮನಿಂದ ತುಂಬಿದವರಾಗಿರ್ರಿ.

Interlinear

Choose Theme