ಅಪೋಸ್ತಲರ ಕೃತ್ಯಗಳು 2:15 · ಕನ್ನಡ ಬೈಬಲ್
ನೀವು ಭಾವಿಸಿದಂತೆ ಇವರು ಕುಡಿದು ಅಮಲೇರಿ ದವರಲ್ಲ; ಯಾಕಂದರೆ ಈಗ ಹಗಲು ಮೂರು (ಒಂಭತ್ತು) ಗಂಟೆಯಾಗಿದೆಯಷ್ಟೆ.
Cross references
1 ಸಮುವೇಲ 1:15
ಅದಕ್ಕೆ ಹನ್ನಳು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆನನ್ನ ಒಡೆಯನೇ, ಹಾಗಲ್ಲ, ನಾನು ದುಃಖದ ಆತ್ಮವುಳ್ಳ ಸ್ತ್ರೀಯಾಗಿದ್ದೇನೆ; ನಾನು ದ್ರಾಕ್ಷಾರಸವನ್ನಾದರೂ ಮದ್ಯ ಪಾನವನ್ನಾದರೂ ಕುಡಿದವಳಲ್ಲ. ನಾನು ಕರ್ತನ ಮುಂದೆ ನನ್ನ ಮನೋವೇದನೆಯನ್ನೆಲ್ಲಾ ಹೊಯಿದು ಬಿಟ್ಟೆನು.
ಮತ್ತಾಯ 20:3
ಮತ್ತು ಅವನು ಸುಮಾರು ಮೂರನೆಯ ತಾಸಿನಲ್ಲಿ ಹೊರಗೆಹೋಗಿ ಇನ್ನು ಕೆಲವರು ಸಂತೆಯ ಸ್ಥಳದಲ್ಲಿ ಕೆಲಸವಿಲ್ಲದೆ ನಿಂತಿರುವದನ್ನು ಕಂಡು
1 ತೆಸಲೋನಿಕದವರಿಗೆ 5:5
ನೀವೆಲ್ಲರೂ ಬೆಳಕಿನ ಮಕ್ಕಳೂ ಹಗಲಿನ ಮಕ್ಕಳೂ ಆಗಿದ್ದೀರಷ್ಟೆ; ನಾವು ರಾತ್ರಿಯವರೂ ಅಲ್ಲ, ಕತ್ತಲೆ ಯವರೂ ಅಲ್ಲ.