ಪೌಲನು ಪ್ರತಿವಾದ ಮಾಡಬೇಕೆಂದಿ ದ್ದಾಗ ಗಲ್ಲಿಯೋನನು ಯೆಹೂದ್ಯರಿಗೆ--ಯೆಹೂ ದ್ಯರೇ, ಅನ್ಯಾಯವು ದುಷ್ಕಾರ್ಯವು ಇಂಥದ್ದೇನಾ ದರೂ ಇದ್ದ ಪಕ್ಷಕ್ಕೆ ನಾನು ನಿಮ್ಮ ಮಾತನ್ನು ಸಹನ ದಿಂದ ಕೇಳುವದು ನ್ಯಾಯವೇ.
Cross references
ಅದಕ್ಕಾತನು--ಓ ನಂಬಿಕೆ ಯಿಲ್ಲದ ಸಂತಾನವೇ, ಎಷ್ಟು ಕಾಲ ನಾನು ನಿಮ್ಮೊಂ ದಿಗೆ ಇರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಎಂದು ಹೇಳಿದನು.
ಆದರೆ ಇವೆಲ್ಲವುಗಳಿಗಿಂತ ಮೊದಲು ಅವರು ನಿಮ್ಮನ್ನು ಹಿಡಿದು ಹಿಂಸಿಸಿ ಸಭಾಮಂದಿರ ಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ ನನ್ನ ಹೆಸರಿನ ನಿಮಿತ್ತ ಅರಸುಗಳ ಮತ್ತು ಅಧಿಕಾರಿಗಳ ಮುಂದೆ ನಿಮ್ಮನ್ನು ತರುವರು.
ಆತನು ಸುಮಾರು ನಾಲ್ವತ್ತು ವರುಷಗಳ ವರೆಗೂ ಅಡವಿಯಲ್ಲಿ ಅವರ ನಡಾವಳಿಯನ್ನು ಸಹಿಸಿ ಕೊಂಡು
ಆದರೆ ಪೌಲನು--ನಾನು ಪ್ರಖ್ಯಾತವಾದ ಕಿಲಿಕ್ಯದ ತಾರ್ಸ ಪಟ್ಟಣದಲ್ಲಿ ನಿವಾಸಿಯಾಗಿರುವ ಯೆಹೂದ್ಯನು; ಈ ಜನರಿಗೆ ಮಾತನಾಡುವಂತೆ ನನಗೆ ಅಪ್ಪಣೆ ಕೊಡು ಎಂದು ನಾನು ನಿನ್ನನ್ನು ಕೇಳಿಕೊಳ್ಳುತ್ತೇನೆ ಅಂದನು.ಅವನು ಅಪ್ಪಣೆ ಕೊಟ್ಟಾಗ ಪೌಲನು ಮೆಟ್ಟಲುಗಳ ಮೇಲೆ ನಿಂತು ಜನರಿಗೆ ಕೈಸನ್ನೆ ಮಾಡಿದನು. ದೊಡ್ಡ ನಿಶ್ಶಬ್ದತೆ ಉಂಟಾದಾಗ ಇಬ್ರಿಯ ಭಾಷೆಯಲ್ಲಿ ಅವರೊಂದಿಗೆ--
ಯೆಹೂದ್ಯರು ಈ ಮನುಷ್ಯ ನನ್ನು ಹಿಡಿದು ಕೊಲ್ಲಬೇಕೆಂದಿದ್ದಾಗ ನಾನು ಸೈನ್ಯ ದೊಂದಿಗೆ ಬಂದು ಅವನು ರೋಮ್‌ನವನೆಂದು ತಿಳಿದುಕೊಂಡು ಅವನನ್ನು ತಪ್ಪಿಸಿದೆನು.
ನಾನು ಅನ್ಯಾಯಮಾಡಿದವ ನಾಗಿದ್ದರೆ ಇಲ್ಲವೆ ಮರಣದಂಡನೆಗೆ ಕಾರಣವಾದ ಯಾವದನ್ನಾದರೂ ನಡಿಸಿದ್ದರೆ ಸಾಯುವದಕ್ಕೆ ನಾನು ಬೇಡವೆನ್ನುವದಿಲ್ಲ; ನನ್ನ ಮೇಲೆ ಅವರು ತಪ್ಪು ಹೊರಿಸುವವುಗಳಲ್ಲಿ ಯಾವದೂ ಇಲ್ಲದೆ ಹೋದರೆ ನನ್ನನ್ನು ಅವರಿಗೆ ಯಾವ ಮನುಷ್ಯನೂ ಒಪ್ಪಿಸಲಾರನು; ನಾನು ಕೈಸರ
ತಪ್ಪುಹೊರಿಸುವವರು ಅವನಿಗೆ ವಿರೋಧ ವಾಗಿ ನಿಂತು ನಾನು ಭಾವಿಸಿದವುಗಳಲ್ಲಿ ಯಾವ ತಪ್ಪನ್ನೂ ಅವನ ಮೇಲೆ ಹೊರಿಸಲಿಲ್ಲ.
ಈ ಮನುಷ್ಯನ ವಿಷಯವಾಗಿ ನನ್ನ ದೊರೆಗೆ ಬರೆಯುವದಕ್ಕಾಗಿ ನಿರ್ದಿಷ್ಟವಾದದ್ದೇನೂ ಇಲ್ಲ; ಆದಕಾರಣ ವಿಚಾರಣೆ ಯಾದನಂತರ ಬರೆಯುವದಕ್ಕೆ ನನಗೆ ಏನಾದರೂ ಸಿಕ್ಕುವದೆಂದು ನಿಮ್ಮ ಮುಂದೆ ವಿಶೇಷವಾಗಿ ಅರಸನಾದ ಓ ಅಗ್ರಿಪ್ಪನೇ, ನಿನ್ನ ಮುಂದೆ ಇವನನ್ನು ನಾನು ತಂದಿದ್ದೇನೆ.ಸೆರೆಯವನಿಗೆ ವಿರೋಧವಾಗಿ ಹೊರಿಸಲ್ಪಟ್ಟ ಅಪರಾಧಗಳನ್ನು ಸೂಚಿಸುವದಕ್ಕೆ ಏನೂ ಇಲ್ಲದೆ ಅವನನ್ನು ಕಳುಹಿಸುವದು ಯುಕ್ತವಲ್ಲ ಎಂಬದಾಗಿ ನನಗೆ ಕಾಣುತ್ತದೆ ಎಂದು ಹೇಳಿದನು.
ಆಗ ಅಗ್ರಿಪ್ಪನು ಪೌಲನಿಗೆ--ನೀನು ನಿನ್ನ ಪಕ್ಷದಲ್ಲಿ ಮಾತನಾಡುವದಕ್ಕೆ ಅಪ್ಪಣೆ ಆಯಿತು ಎಂದು ಹೇಳಿದನು. ಆಗ ಪೌಲನು ಕೈಚಾಚಿ ತನಗಾಗಿ ಪ್ರತಿವಾದಿಸುತ್ತಾ--
ಕೆಟ್ಟಕೆಲಸ ಮಾಡುವವನಿಗೆ ಅಧಿಕಾರಿಗಳ ಭಯವಿರುವದೇ ಹೊರತು ಒಳ್ಳೇಕೆಲಸ ಮಾಡುವವ ನಿಗೆ ಇರುವದಿಲ್ಲ; ನೀನು ಅಧಿಕಾರಿಗೆ ಭಯಪಡದೆ ಇರಬೇಕೆಂದು ಅಪೇಕ್ಷಿಸುತ್ತೀಯೋ? ಒಳ್ಳೆಯದನ್ನು ಮಾಡು; ಆಗ ಆ ಅಧಿಕಾರಿಯಿಂದಲೇ ನಿನಗೆ ಹೊಗ ಳಿಕೆಯುಂಟಾಗುವದು.
ನನ್ನ ಬುದ್ಧಿಹೀನತೆಯನ್ನು ನೀವು ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ; ನಿಜವಾಗಿಯೂ ನನ್ನನ್ನು ಸಹಿಸಿ ಕೊಳ್ಳಿರಿ;
ಯಾಕಂದರೆ ನಾವು ಸಾರದಿದ್ದ ಬೇರೊಬ್ಬ ಯೇಸುವನ್ನು ನಿಮ್ಮ ಬಳಿಗೆ ಬರುವವನು ಪ್ರಕಟಿಸುವಾಗಲೂ ನೀವು ಹೊಂದದೆ ಇದ್ದ ಬೇರೊಂದು ಆತ್ಮವನ್ನು ಹೊಂದುವಾಗಲೂ ಅಂಗೀಕರಿಸದಿದ್ದ ಬೇರೊಂದು ಸುವಾರ್ತೆಯನ್ನು ಸ್ವೀಕರಿಸುವಾಗಲೂ ನೀವು ಚೆನ್ನಾಗಿ ಸಹಿಸಿಕೊಳ್ಳು ತ್ತಿದ್ದೀರಿ.
ತಾನೂ ಬಲಹೀನನಾಗಿರುವದರಿಂದ ಅವನು ಜ್ಞಾನವಿಲ್ಲದವರ ಮೇಲೆಯೂ ಮಾರ್ಗ ತಪ್ಪಿದವರ ಮೇಲೆಯೂ ಕರುಣೆ ತೋರಿಸಬಲ್ಲನು.
ನೀವು ನೀತಿಯ ನಿಮಿತ್ತವೇ ಬಾಧೆಪಟ್ಟರೆ ಸಂತೋಷವುಳ್ಳವರು. ಅವರ ಬೆದರಿಸುವಿಕೆಗೆ ಹೆದರಬೇಡಿರಿ ಮತ್ತು ಕಳವಳ ಪಡಬೇಡಿರಿ.