Home Bibles ಅಪೋಸ್ತಲರ ಕೃತ್ಯಗಳು 16:10 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 16:10 · ಕನ್ನಡ ಬೈಬಲ್

ಅವನು ಆ ದರ್ಶನವನ್ನು ನೋಡಿದ ತರುವಾಯ ಅವರಿಗೆ ಸುವಾರ್ತೆಯನ್ನು ಸಾರುವದಕ್ಕೆ ಕರ್ತನು ನಿಶ್ಚಯವಾಗಿ ನಮ್ಮನ್ನು ಕರೆದಿದ್ದಾನೆಂದು ತಿಳುಕೊಂಡು ಕೂಡಲೆ ಮಕೆದೋನ್ಯಕ್ಕೆ ಹೋಗುವಂತೆ ಪ್ರಯತ್ನಿ ಸಿದೆವು.

Cross references

ಕೀರ್ತನೆಗಳು 119:60

ನಿನ್ನ ಆಜ್ಞೆಗಳನ್ನು ಕೈಕೊಳ್ಳು ವದಕ್ಕೆ ತಡಮಾಡದೆ ತ್ವರೆಪಟ್ಟಿದ್ದೇನೆ.

ಸಾಮೇತಿಗಳು 3:27

ನಿನಗೆ ಸಾಧ್ಯವಿರುವಾಗ ಹೊಂದತಕ್ಕವರಿಗೆ ಒಳ್ಳೆ ಯದು ಮಾಡುವದನ್ನು ತಪ್ಪಿಸಬೇಡ.

ಅಪೋಸ್ತಲರ ಕೃತ್ಯಗಳು 10:29

ಆದಕಾರಣ ನೀವು ನನ್ನನ್ನು ಕರೇಕಳುಹಿಸಿದಾಗ ನಾನು ಯಾವ ಎದುರು ಮಾತನ್ನೂ ಹೇಳದೆ ತಕ್ಷಣ ಬಂದೆನು. ಈಗ ನೀವು ನನ್ನನ್ನು ಕರೆಯಿಸಿದ ಉದ್ದೇಶವೇನು ಎಂದು ನಾನು ಕೇಳುತ್ತೇನೆ ಎಂದು ಹೇಳಿದನು.

ಅಪೋಸ್ತಲರ ಕೃತ್ಯಗಳು 14:7

ಅಲ್ಲಿ ಸುವಾರ್ತೆಯನ್ನು ಸಾರಿದರು.

ಅಪೋಸ್ತಲರ ಕೃತ್ಯಗಳು 16:10

ಅವನು ಆ ದರ್ಶನವನ್ನು ನೋಡಿದ ತರುವಾಯ ಅವರಿಗೆ ಸುವಾರ್ತೆಯನ್ನು ಸಾರುವದಕ್ಕೆ ಕರ್ತನು ನಿಶ್ಚಯವಾಗಿ ನಮ್ಮನ್ನು ಕರೆದಿದ್ದಾನೆಂದು ತಿಳುಕೊಂಡು ಕೂಡಲೆ ಮಕೆದೋನ್ಯಕ್ಕೆ ಹೋಗುವಂತೆ ಪ್ರಯತ್ನಿ ಸಿದೆವು.

ಅಪೋಸ್ತಲರ ಕೃತ್ಯಗಳು 20:5

ಇವರು ಮುಂಚಿತವಾಗಿ ಹೋಗಿ ನಮಗೋಸ್ಕರ ತ್ರೋವದಲ್ಲಿ ಕಾದುಕೊಂಡರು.

ಅಪೋಸ್ತಲರ ಕೃತ್ಯಗಳು 20:13

ನಾವು ಮೊದಲು ಹೋಗಿ ಅಸ್ಸೊಸಿನಲ್ಲಿ ಪೌಲ ನನ್ನು ಹತ್ತಿಸಿಕೊಳ್ಳಬೇಕೆಂದು ಅಲ್ಲಿಗೆ ಸಮುದ್ರ ಪ್ರಯಾಣ ಮಾಡಿದೆವು. ಪೌಲನು ಹಾಗೆಯೇ ನಮಗೆ ಅಪ್ಪಣೆಮಾಡಿ ತಾನು ಕಾಲು ನಡೆಯಾಗಿ ಹೋಗಬೇಕೆಂದು ಮನಸ್ಸು ಮಾಡಿದನು.

ಅಪೋಸ್ತಲರ ಕೃತ್ಯಗಳು 21:1

ಇದಾದ ಮೇಲೆ ನಾವು ಅವರನ್ನು ಬಿಟ್ಟು ಸಮುದ್ರಪ್ರಯಾಣವಾಗಿ ನೆಟ್ಟಗೆ ಕೋಸ್‌ಗೆ ಬಂದೆವು. ಮರುದಿನ ರೋದಕ್ಕೆ ಹೋಗಿ ಅಲ್ಲಿಂದ ಪತರಕ್ಕೆ ಸೇರಿದೆವು.

ಅಪೋಸ್ತಲರ ಕೃತ್ಯಗಳು 26:13

ಓ ರಾಜನೇ, ನಾನು ದಾರಿಯಲ್ಲಿದ್ದಾಗ ಮಧ್ಯಾಹ್ನದಲ್ಲಿ ನನ್ನ ಮತ್ತು ನನ್ನ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದವರ ಸುತ್ತಲೂ ಸೂರ್ಯನ ಪ್ರಕಾಶಕ್ಕಿಂತ ಹೆಚ್ಚಾದ ಬೆಳಕು ಪರಲೋಕ ದಿಂದ ಪ್ರಕಾಶಿಸುತ್ತಿರುವದನ್ನು ನಾನು ಕಂಡೆನು.

ಅಪೋಸ್ತಲರ ಕೃತ್ಯಗಳು 27:1

ನಾವು ಸಮುದ್ರ ಪ್ರಯಾಣ ಮಾಡಿ ಇತಾಲ್ಯಕ್ಕೆ ಹೋಗಬೇಕೆಂದು ನಿಶ್ಚಯ ಮಾಡಿದಾಗ ಔಗುಸ್ತನ ಪಟಾಲಮಿನ ಶತಾಧಿಪತಿಯಾದ ಯೂಲ್ಯ ಎಂಬವನಿಗೆ ಪೌಲನನ್ನೂ ಬೇರೆ ಕೆಲವು ಕೈದಿಗಳನ್ನೂ ಅವರು ಒಪ್ಪಿಸಿದರು.

2 ಕೊರಿಂಥದವರಿಗೆ 2:12

ಇದಲ್ಲದೆ ಕ್ರಿಸ್ತನ ಸುವಾರ್ತೆಯನ್ನು ಸಾರುವ ದಕ್ಕಾಗಿ ನಾನು ತ್ರೋವಕ್ಕೆ ಬಂದಾಗ ಕರ್ತನಿಂದ ನನಗೆ ಬಾಗಲು ತೆರೆಯಲ್ಪಟ್ಟಿತು.

Interlinear

Choose Theme