ಆದರೆ ನಂಬದೆಹೋದ ಯೆಹೂದ್ಯರು ಅನ್ಯಜನರ ಮನಸ್ಸನ್ನು ಸಹೋದರರಿಗೆ ವಿರುದ್ಧವಾಗಿ ರೇಗಿಸಿ ಕೆಡಿಸಿದರು.
Cross references
ಯಾಕಂದರೆ ಪ್ರಧಾನಯಾಜಕರು ಹೊಟ್ಟೇಕಿಚ್ಚಿನಿಂದ ಆತನನ್ನು ಒಪ್ಪಿಸಿಕೊಟ್ಟಿದ್ದರೆಂದು ಅವನಿಗೆ ತಿಳಿದಿತ್ತು.
ಮಗನ ಮೇಲೆ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಯಾವನು ಮಗನನ್ನು ನಂಬುವದಿಲ್ಲವೋ ಅವನು ಜೀವವನ್ನು ಕಾಣುವದಿಲ್ಲ; ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿದೆ ಅಂದನು.
ಆದರೆ ಯೆಹೂದ್ಯರು ಜನ ಸಮೂಹಗಳನ್ನು ನೋಡಿ ಹೊಟ್ಟೇಕಿಚ್ಚಿನಿಂದ ತುಂಬಿ ದವರಾಗಿ ಪೌಲನು ಹೇಳಿದವುಗಳನ್ನು ವಿರೋಧಿಸಿ ದೇವದೂಷಣೆ ಮಾಡುತ್ತಾ ಎದುರು ಮಾತನಾಡಿದರು.
ಆದರೆ ಭಕ್ತಿಯುಳ್ಳ ಮತ್ತು ಗೌರವವುಳ್ಳ ಸ್ತ್ರೀಯರನ್ನೂ ಪಟ್ಟಣದ ಪ್ರಮುಖರನ್ನೂ ಯೆಹೂದ್ಯರು ಪ್ರೇರಿಸಿ ಪೌಲ ಬಾರ್ನಬರಿಗೆ ವಿರೋಧವಾಗಿ ಹಿಂಸೆ ಯನ್ನೆಬ್ಬಿಸಿ ತಮ್ಮ ಮೇರೆಗಳಿಂದ ಅವರನ್ನು ಅಟ್ಟಿಬಿಟ್ಟರು.
ತರುವಾಯ ಅಂತಿಯೋಕ್ಯದಿಂದಲೂ ಇಕೋನ್ಯ ದಿಂದಲೂ ಕೆಲವು ಯೆಹೂದ್ಯರು ಅಲ್ಲಿಗೆ ಬಂದು ಜನರನ್ನು ಪ್ರೇರೇಪಿಸಿ ಪೌಲನ ಮೇಲೆ ಕಲ್ಲೆಸೆದು ಅವನು ಸತ್ತನೆಂದು ಭಾವಿಸಿ ಪಟ್ಟಣದ ಹೊರಕ್ಕೆ ಎಳೆದುಬಿಟ್ಟರು.
ನಂಬದಿರುವ ಯೆಹೂ ದ್ಯರು ಹೊಟ್ಟೇಕಿಚ್ಚುಪಟ್ಟು ನೀಚರಾದ ಕೆಲವು ದುಷ್ಟ ರನ್ನು ಕರೆದುಕೊಂಡು ಬಂದು ಗುಂಪು ಕೂಡಿಸಿಕೊಂಡು ಪಟ್ಟಣದಲ್ಲೆಲ್ಲಾ ಗದ್ದಲವನ್ನೆಬ್ಬಿಸಿ ಪೌಲ ಸೀಲರನ್ನು ಜನರೆದುರಿಗೆ ತರಬೇಕೆಂದು ಅವರನ್ನು ಹುಡುಕುತ್ತಾ ಯಾಸೋನನ ಮನೆಯ ಮೇಲೆ ಬಿದ್ದರು.
ಆದರೆ ಪೌಲನು ಬೆರೋಯದಲ್ಲಿಯೂ ದೇವರ ವಾಕ್ಯವನ್ನು ಸಾರುತ್ತಾನೆಂದು ಥೆಸಲೊನೀಕದ ಯೆಹೂ ದ್ಯರಿಗೆ ತಿಳಿದಾಗ ಅವರು ಅಲ್ಲಿಗೂ ಬಂದು ಜನರ ಗುಂಪುಗಳನ್ನು ರೇಗಿಸಿದರು.
ಗಲ್ಲಿಯೋನನು ಅಖಾಯದ ಪ್ರತಿನಿಧಿ ಯಾಗಿದ್ದಾಗ ಯೆಹೂದ್ಯರು ಒಮ್ಮನಸ್ಸಿನಿಂದ ಪೌಲನಿಗೆ ವಿರೋಧವಾಗಿ ಧಂಗೆ ಎಬ್ಬಿಸಿ ನ್ಯಾಯಸ್ಥಾನದ ಮುಂದೆ ಹಿಡುಕೊಂಡು ಬಂದು--
ಆ ಏಳು ದಿವಸಗಳು ತುಂಬುತ್ತಿರುವಾಗ ಆಸ್ಯ ದಿಂದ ಬಂದಿದ್ದ ಯೆಹೂದ್ಯರು ಅವನನ್ನು ದೇವಾಲ ಯದಲ್ಲಿ ಕಂಡು ಜನರೆಲ್ಲರನ್ನು ಉದ್ರೇಕಿಸಿ ಅವನನ್ನು ಹಿಡಿದು--
ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು ತಮ್ಮ ಸ್ವಂತ ಪ್ರವಾದಿಗಳನ್ನು ಕೊಂದರು; ನಮ್ಮನ್ನು ಹಿಂಸಿಸಿದರು; ಅವರು ದೇವರನ್ನು ಮೆಚ್ಚಿಸುವವರಲ್ಲ, ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ.