Home Bibles ಅಪೋಸ್ತಲರ ಕೃತ್ಯಗಳು 13:20 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 13:20 · ಕನ್ನಡ ಬೈಬಲ್

ಇದಾದ ಮೇಲೆ ಪ್ರವಾದಿಯಾದ ಸಮುವೇಲನ ವರೆಗೆ ಸುಮಾರು ನಾನೂರೈವತ್ತು ವರುಷ ಆತನು ಅವರಿಗೆ ನ್ಯಾಯಸ್ಥಾಪಕರನ್ನು ಕೊಟ್ಟನು.

Cross references

ನ್ಯಾಯಾಧಿಪತಿಗಳು 2:16

ಆದಾಗ್ಯೂ ಕರ್ತನು ಅವರನ್ನು ಕೊಳ್ಳೆ ಹೊಡೆಯುವವರ ಕೈಯೊಳಗಿಂದ ಬಿಡಿಸಿದ ನ್ಯಾಯಾಧಿಪತಿಗಳನ್ನು ಎಬ್ಬಿಸಿದರೂ;

ನ್ಯಾಯಾಧಿಪತಿಗಳು 3:10

ಅವನ ಮೇಲೆ ಕರ್ತನ ಆತ್ಮವು ಬಂದದ್ದರಿಂದ ಅವನು ಇಸ್ರಾಯೇಲ್ಯರಿಗೆ ನ್ಯಾಯತೀರಿಸಿದನು. ಯುದ್ಧಮಾಡು ವದಕ್ಕೆ ಹೊರಟಾಗ ಕರ್ತನು ಅವನ ಕೈಗೆ ಮೆಸೊ ಪೊತಾಮ್ಯದ ಅರಸನಾದ ಕೂಷನ್‌ರಿಷಾತಮನ್ನು ಒಪ್ಪಿಸಿಕೊಟ್ಟನು. ಅವನ ಕೈ ಕೂಷನ್‌ರಿಷಾತಯಿಮಿನ ಮೇಲೆ ಬಲವಾಯಿತು.

ರೂತ 1:1

ನ್ಯಾಯಾಧಿಪತಿಗಳು ಆಳುತ್ತಿದ್ದ ಆ ದಿನಗಳಲ್ಲಿ ದೇಶದೊಳಗೆ ಬರ ಉಂಟಾ ಗಿದ್ದಾಗ ಆದದ್ದೇನಂದರೆ, ಯೆಹೂದದ ಬೇತ್ಲೆ ಹೇಮಿನವನಾದ ಒಬ್ಬ ಮನುಷ್ಯನು ತನ್ನ ಹೆಂಡ ತಿಯ ಮತ್ತು ತನ್ನ ಇಬ್ಬರು ಕುಮಾರರೊಂದಿಗೆ ಮೋವಾಬ್‌ ದೇಶದಲ್ಲಿ ವಾಸಮಾಡಬೇಕೆಂದು ಹೋದನು.

1 ಸಮುವೇಲ 3:20

ಆಗ ಸಮುವೇಲನು ಕರ್ತನ ಪ್ರವಾದಿಯಾಗಿ ಸ್ಥಿರಮಾಡಲ್ಪ ಟ್ಟನೆಂದು ದಾನ್‌ ಊರು ಮೊದಲುಗೊಂಡು ಬೇರ್ಷ ಬದ ವರೆಗೂ ಇದ್ದ ಇಸ್ರಾಯೇಲ್ಯರೆಲ್ಲರು ತಿಳಿದಿದ್ದರು.ಕರ್ತನು ತಿರಿಗಿ ಶೀಲೋವಿನಲ್ಲಿ ಕಾಣಿಸಿಕೊಂಡನು. ಕರ್ತನು ಶೀಲೋವಿನಲ್ಲಿ ತನ್ನ ವಾಕ್ಯದಿಂದ ಸಮು ವೇಲನಿಗೆ ತನ್ನನ್ನು ಪ್ರಕಟಿಸಿಕೊಂಡನು.

1 ಸಮುವೇಲ 12:11

ಆಗ ಕರ್ತನು ಯೆರುಬ್ಬಾಳನನ್ನೂ ಬೆದಾನನನ್ನೂ ಯೆಫ್ತಾಹನನ್ನೂ ಸಮುವೇಲನನ್ನೂ ಕಳುಹಿಸಿ ನಿಮ್ಮನ್ನು ಸಮಸ್ತ ದಿಕ್ಕಿನಲ್ಲಿರುವ ನಿಮ್ಮ ಶತ್ರು ಗಳ ಕೈಯಿಂದ ಬಿಡಿಸಿ ನೀವು ಸುರಕ್ಷಿತವಾಗಿ ವಾಸಿಸು ವಂತೆ ಮಾಡಿದನು.

2 ಸಮುವೇಲ 7:11

ನಿನ್ನನ್ನು ನಿನ್ನ ಎಲ್ಲಾ ಶತ್ರುಗಳಿಗೆ ತಪ್ಪಿಸಿ ನಿನಗೆ ವಿಶ್ರಾಂತಿಯನ್ನು ಉಂಟುಮಾಡಿದೆನು.

2 ಅರಸುಗಳು 23:22

ನಿಶ್ಚಯವಾಗಿ ಇಸ್ರಾಯೇಲಿಗೆ ನ್ಯಾಯ ತೀರಿಸಿದ ನ್ಯಾಯಾಧಿಪತಿಗಳ ದಿವಸಗಳು ಮೊದಲು ಗೊಂಡು ಇಸ್ರಾಯೇಲಿನ ಯೆಹೂದದ ಅರಸುಗಳ ಸಕಲ ದಿವಸಗಳಲ್ಲಿಯೂ ಇಂಥಾ ಪಸ್ಕವು ಆಚರಿಸ ಲ್ಪಟ್ಟಿದ್ದಿಲ್ಲ.

1 ದಿನವೃತ್ತಾಂತ 17:6

ನಾನು ನನ್ನ ಜನರಾದ ಇಸ್ರಾಯೇ ಲ್ಯರನ್ನು ಮೇಯಿಸಲು ಆಜ್ಞಾಪಿಸಿದ ಇಸ್ರಾಯೇಲಿನ ಅಧಿಪತಿಗಳಲ್ಲಿ ಒಬ್ಬನ ಸಂಗಡಲಾದರೂ--ನೀವು ನನಗೆ ದೇವದಾರು ಮನೆಯನ್ನು ಯಾಕೆ ಕಟ್ಟಲಿಲ್ಲ ವೆಂದು ನಾನು ಸಮಸ್ತ ಇಸ್ರಾಯೇಲಿನ ಸಂಗಡ ನಡೆದ ಯಾವ ಸ್ಥಳದಲ್ಲಾದರೂ ಏನಾದರೂ ಹೇಳಿದೆನೋ?

ಅಪೋಸ್ತಲರ ಕೃತ್ಯಗಳು 3:24

ಹೌದು, ಸಮುವೇಲನು ಮೊದಲುಗೊಂಡು ಎಲ್ಲಾ ಪ್ರವಾದಿ ಗಳೂ ತರುವಾಯ ಬಂದು ಮಾತನಾಡಿದವರೆಲ್ಲರೂ ಈ ದಿವಸಗಳ ವಿಷಯವಾಗಿ ಅದರಂತೆಯೇ ಮುಂತಿಳಿ ಸಿದರು.

Interlinear

Choose Theme