ನಿಶ್ಚಯವಾಗಿ ಇಸ್ರಾಯೇಲಿಗೆ ನ್ಯಾಯ ತೀರಿಸಿದ ನ್ಯಾಯಾಧಿಪತಿಗಳ ದಿವಸಗಳು ಮೊದಲು ಗೊಂಡು ಇಸ್ರಾಯೇಲಿನ ಯೆಹೂದದ ಅರಸುಗಳ ಸಕಲ ದಿವಸಗಳಲ್ಲಿಯೂ ಇಂಥಾ ಪಸ್ಕವು ಆಚರಿಸ ಲ್ಪಟ್ಟಿದ್ದಿಲ್ಲ.
Cross references
ಆಗ ಅವರು ಇಸ್ರಾಯೇಲಿನ ದೇವರಾದ ಕರ್ತನ ಪಸ್ಕವನ್ನು ಆಚರಿಸಲು ಯೆರೂ ಸಲೇಮಿನಲ್ಲಿ ಕರ್ತನ ಆಲಯಕ್ಕೆ ಬರುವ ಹಾಗೆ ಹಿಜ್ಕೀಯನು ಸಮಸ್ತ ಇಸ್ರಾಯೇಲಿಗೂ ಯೆಹೂದಕ್ಕೂ ಹೇಳಿ ಕಳುಹಿಸಿ, ಎಫ್ರಾಯಾಮ್ಯರಿಗೂ ಮನಸ್ಸೆಯ ವರಿಗೂ ಪತ್ರಗಳನ್ನು ಬರೆದನು.
ಯೆರೂಸಲೇಮಿ ನಲ್ಲಿರುವ ಅರಸನೂ ಅವನ ಪ್ರಧಾನರೂ ಸಮಸ್ತ ಸಭೆಯೂ ಎರಡನೇ ತಿಂಗಳಲ್ಲಿ ಪಸ್ಕವನ್ನು ಆಚರಿ ಸಲು ಯೋಚಿಸಿಕೊಂಡರು.
ಆದದರಿಂದ ಎರಡನೇ ತಿಂಗಳಲ್ಲಿ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸುವದಕ್ಕೆ ಯೆರೂಸಲೇಮಿನಲ್ಲಿ ಬಹಳ ಜನರು ಕೂಡಿ ಕೊಂಡು ಮಹಾದೊಡ್ಡ ಸಭೆಯಾಯಿತು.
ಸಮಸ್ತ ಇಸ್ರಾಯೇಲ್ಯರಿಗೆ ಬೋಧಿಸತಕ್ಕ ವರೂ ಕರ್ತನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆಪರಿಶುದ್ಧವಾದ ಮಂಜೂಷವು ನಿಮ್ಮ ಭುಜಗಳ ಮೇಲೆ ಭಾರವಿಲ್ಲದ ಹಾಗೆ ನೀವು ಅದನ್ನು ಇಸ್ರಾ ಯೇಲಿನ ಅರಸನಾಗಿರುವ ದಾವೀದನ ಮಗನಾದ ಸೊಲೊಮೋನನು ಕಟ್ಟಿಸಿದ ಮನೆಯಲ್ಲಿ ಇರಿಸಿ ನಿಮ್ಮ ದೇವರಾದ ಕರ್ತನನ್ನೂ ಆತನ ಜನವಾದ ಇಸ್ರಾಯೇಲ್ಯರನ್ನೂ ಸೇವಿಸಿರಿ.