Home Bibles 2 ಸಮುವೇಲ 7:19 · ಕನ್ನಡ ಬೈಬಲ್
2 ಸಮುವೇಲ 7:19 · ಕನ್ನಡ ಬೈಬಲ್

ಓ ಕರ್ತ ನಾದ ದೇವರೇ, ಇದು ನಿನ್ನ ದೃಷ್ಟಿಯಲ್ಲಿ ಅಲ್ಪವೆಂದು ಕಾಣಿಸಿದಾಗ್ಯೂ ಮುಂದೆ ಬರುವ ಬಹು ಕಾಲದ ವರೆಗೆ ನಿನ್ನ ದಾಸನ ಮನೆಯನ್ನು ಕುರಿತು ಹೇಳಿದಿ. ಓ ಕರ್ತನಾದ ದೇವರೇ, ಇದು ಮನುಷ್ಯನ ಕ್ರಮವೋ?

Cross references

ಅಂಕೆಗಳ ಪುಸ್ತಕ 16:9

ಕರ್ತನ ಗುಡಾರದ ಸೇವೆಯನ್ನು ಮಾಡುವದಕ್ಕೂ ಸಭೆಯ ಮುಂದೆ ಇರುವ ಆತನ ಸೇವೆಯಲ್ಲಿ ನಿಲ್ಲುವದಕ್ಕೂ ಇಸ್ರಾಯೇಲ್‌ ದೇವರು ನಿಮ್ಮನ್ನು ಹತ್ತಿರ ಬರಮಾಡಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲ್ಯರ ಸಭೆಯೊಳಗಿಂದ ನಿಮ್ಮನ್ನು ಪ್ರತ್ಯೇಕಿ ಸಿದ್ದು ನಿಮಗೆ ಅಲ್ಪವಾಗಿದೆಯೋ?

ಅಂಕೆಗಳ ಪುಸ್ತಕ 16:13

ನೀನು ಅರಣ್ಯ ದಲ್ಲಿ ನಮ್ಮನ್ನು ಸಾಯಿಸುವದಕ್ಕೆ ಹಾಲೂ ಜೇನೂ ಹರಿಯುವ ದೇಶದೊಳಗಿಂದ ನಮ್ಮನ್ನು ಕರೆದುಕೊಂಡು ಬಂದದ್ದು ನಿನಗೆ ಅಲ್ಪವಾಯಿತೋ? ಮತ್ತು ನೀನು ಅರಸನಾಗಿ ನಮ್ಮನ್ನು ಆಳಬೇಕೋ?

ಯೆಹೋಶುವ 5:14

ಅದಕ್ಕೆ ಅವನು--ಅಲ್ಲ; ನಾನು ಈಗ ಕರ್ತನ ಸೈನ್ಯದ ಅಧಿಪತಿ ಯಾಗಿ ಬಂದಿದ್ದೇನೆ ಅಂದನು; ಆಗ ಯೆಹೋಶುವನು ಬೋರಲು ಬಿದ್ದು ಆತನನ್ನು ಆರಾಧಿಸಿ ಆತನಿಗೆನನ್ನ ಒಡೆಯನು ತನ್ನ ಸೇವಕನಿಗೆ ಏನು ಹೇಳುತ್ತಾನೆ ಅಂದನು.ಅದಕ್ಕೆ ಕರ್ತನ ಸೈನ್ಯದ ಅಧಿಪತಿಯು ಯೆಹೋಶುವನಿಗೆ--ನಿನ್ನ ಕಾಲಿನಿಂದ ಕೆರಗಳನ್ನು ತೆಗೆದುಹಾಕು; ನೀನು ನಿಂತಿರುವ ಸ್ಥಳವು ಪರಿಶುದ್ಧ ವಾದದ್ದು ಅಂದನು. ಹಾಗೆಯೇ ಯೆಹೋಶುವನು ಮಾಡಿದನು.

2 ಸಮುವೇಲ 7:11

ನಿನ್ನನ್ನು ನಿನ್ನ ಎಲ್ಲಾ ಶತ್ರುಗಳಿಗೆ ತಪ್ಪಿಸಿ ನಿನಗೆ ವಿಶ್ರಾಂತಿಯನ್ನು ಉಂಟುಮಾಡಿದೆನು.

2 ಸಮುವೇಲ 12:8

ನಿನ್ನ ಯಜಮಾನನ ಮನೆಯನ್ನೂ ನಿನ್ನ ಯಜಮಾನನ ಹೆಂಡತಿಯರನ್ನೂ ನಿನ್ನ ಎದೆಗೆ ಕೊಟ್ಟು ಇಸ್ರಾಯೇಲಿನ ಮನೆಯನ್ನೂ ಯೆಹೂದದ ಮನೆಯನ್ನೂ ನಿನಗೆ ಕೊಟ್ಟೆನು.

2 ಅರಸುಗಳು 3:18

ಇದಲ್ಲದೆ ಇದು ಕರ್ತನ ದೃಷ್ಟಿಗೆ ಅಲ್ಪವಾಗಿರುವದು; ಆತನು ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿ ಕೊಡುವನು.

1 ದಿನವೃತ್ತಾಂತ 17:17

ಆದರೂ ಓ ದೇವರೇ, ಇದು ನಿನ್ನ ಕಣ್ಣುಗಳಿಗೆ ಅಲ್ಪಕಾರ್ಯವಾಗಿತ್ತು; ಓ ಕರ್ತನಾದ ದೇವರೇ, ನೀನು ನಿನ್ನ ಸೇವಕನ ಮನೆಯನ್ನು ಕುರಿತು ಬಹುಕಾಲದ ಮಾತು ಹೇಳಿದಿ; ಘನವುಳ್ಳ ಮನುಷ್ಯನ ಸ್ಥಿತಿಯ ಪ್ರಕಾರ ನನ್ನನ್ನು ಗೌರವಿಸಿದಿ.

ಕೀರ್ತನೆಗಳು 36:7

ಓ ದೇವರೇ, ನಿನ್ನ ಪ್ರೀತಿ ಕರುಣೆಯು ಎಷ್ಟೋ ಶ್ರೇಷ್ಠ ವಾದದ್ದು! ಮನುಷ್ಯನ ಮಕ್ಕಳು ನಿನ್ನ ರೆಕ್ಕೆಗಳ ನೆರಳಿನಲ್ಲಿ ಭರವಸೆ ಇಡುತ್ತಾರೆ.

ಯೆಶಾಯ 55:8

ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ; ಇಲ್ಲವೆ ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ ಎಂದು ಕರ್ತನು ಹೇಳುತ್ತಾನೆ.

ಎಫೆಸದವರಿಗೆ 2:7

ಹೀಗೆ ಕ್ರಿಸ್ತ ಯೇಸುವಿನ ಲ್ಲಿರುವ ಕರುಣೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು ಮುಂದಣ ಯುಗಗಳಲ್ಲಿ ನಮಗೆ ತೋರಿಸಬೇಕೆಂದಿದ್ದನು.

ಎಫೆಸದವರಿಗೆ 3:19

ಜ್ಞಾನಕ್ಕೆ ವಿಾರುವ ಕ್ರಿಸ್ತನ ಪ್ರೀತಿ ಯನ್ನು ತಿಳಿದುಕೊಂಡು ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆಯೂ ನಿಮಗೆ ದಯ ಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.

Interlinear

Choose Theme