ಆಗ ಅರಸ ನಾದ ದಾವೀದನು ಒಳಗೆ ಪ್ರವೇಶಿಸಿ ಕರ್ತನ ಸನ್ನಿಧಿ ಯಲ್ಲಿ ಕೂತುಕೊಂಡು--ಓ ಕರ್ತನಾದ ದೇವರೇ, ನನ್ನನ್ನು ನೀನು ಇಷ್ಟರ ಮಟ್ಟಿಗೆ ತಂದದ್ದಕ್ಕೆ ನಾನು ಎಷ್ಟರವನು? ನನ್ನ ಮನೆ ಎಷ್ಟರದು?
Cross references
ನೀನು ನಿನ್ನ ದಾಸನಿಗೆ ತೋರಿಸಿದ ಎಲ್ಲಾ ಕರುಣೆಗಳಿಗೂ ಎಲ್ಲಾ ಸತ್ಯಕ್ಕೂ ಅಯೋಗ್ಯನಾಗಿದ್ದೇನೆ. ಯಾಕಂದರೆ ನಾನು ಮೊದಲು ಈ ಯೊರ್ದನ್ ಹೊಳೆಯನ್ನು ದಾಟಿದಾಗ ನನಗೆ ಕೋಲು ಮಾತ್ರವೇ ಇತ್ತು; ಈಗ ಎರಡು ಗುಂಪುಗಳುಳ್ಳವನಾದೆನು.
ಈಗ ನನ್ನ ಸಹೋದರನಾದ ಏಸಾವನ ಕೈಯಿಂದ ನನ್ನನ್ನು ತಪ್ಪಿಸು. ಅವನು ಬಂದು ನನ್ನನ್ನು ಮಕ್ಕಳ ಸಂಗಡ ತಾಯಿಯನ್ನು ಕೊಲ್ಲುವನೇನೋ ಎಂದು ನಾನು ಅವನಿಗೆ ಭಯಪಡುತ್ತೇನೆ.
ಆಗ ಮೋಶೆಯು ದೇವರಿಗೆ--ಫರೋಹನ ಬಳಿಗೆ ಹೋಗುವ ಹಾಗೆಯೂ ಇಸ್ರಾಯೇಲ್ ಮಕ್ಕಳನ್ನು ಐಗುಪ್ತದೊಳಗಿಂದ ಹೊರಗೆ ಬರಮಾಡು ವಂತೆಯೂ ನಾನು ಎಷ್ಟರವನು ಅಂದನು.
ಅದಕ್ಕವನು ಆತನಿಗೆ--ನನ್ನ ಕರ್ತನೇ, ನಾನು ಇಸ್ರಾಯೇಲನ್ನು ಹೇಗೆ ರಕ್ಷಿಸಲಿ? ಮನಸ್ಸೆಯಲ್ಲಿ ನನ್ನ ಕುಟುಂಬವು ಬಡತನದ್ದು; ನನ್ನ ತಂದೆಯ ಮನೆಯಲ್ಲಿ ನಾನು ಅಲ್ಪನು ಅಂದನು.
ಆಗ ಅವಳು ಸಾಷ್ಟಾಂಗ ಬಿದ್ದು ವಂದಿಸಿ ಅವನಿಗೆ ನಾನು ಅನ್ಯಳಾಗಿರುವಾಗ ನೀನು ನನ್ನನ್ನು ತಿಳುಕೊಂಡು ನನ್ನ ಮೇಲೆ ನಿನ್ನ ಕೃಪೆ ಯನ್ನು ತೋರಿಸಿದ್ದು ಹೇಗೆ ಅಂದಳು.
ಅದಕ್ಕೆ ಸೌಲನು ಅವನಿಗೆ ಪ್ರತ್ಯುತ್ತರ ವಾಗಿ--ನಾನು ಇಸ್ರಾಯೇಲ್ಯರ ಗೋತ್ರಗಳಲ್ಲೆಲ್ಲಾ ಚಿಕ್ಕದಾದ ಬೆನ್ಯಾವಿಾನನ ಗೋತ್ರದವನಲ್ಲವೇ? ಇದ ಲ್ಲದೆ ಬೆನ್ಯಾವಿಾನನ ಗೋತ್ರವು ಸಮಸ್ತ ಗೋತ್ರಗಳಲ್ಲಿ ನನ್ನ ಗೋತ್ರವು ಚಿಕ್ಕದಾದದ್ದಲ್ಲವೇ? ನೀನು ಯಾಕೆ ಹೀಗೆ ನನ್ನ ಸಂಗಡ ಮಾತನಾಡುತ್ತೀ ಅಂದನು.
ಸಮುವೇಲನು--ನೀನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ಇಸ್ರಾಯೇಲ್ ಗೋತ್ರಗಳ ಮೇಲೆ ಯಜಮಾನನಾಗಿ ಮಾಡಲ್ಪಟ್ಟಿಯಲ್ಲವೋ? ಕರ್ತನು ನಿನ್ನನ್ನು ಇಸ್ರಾಯೇಲ್ಯರ ಮೇಲೆ ಅರಸನಾಗಿ ಅಭಿಷೇಕಿಸಿ ದನಲ್ಲವೋ?
ದಾವೀದನು ಸೌಲನಿಗೆ--ಅರಸನಿಗೆ ಅಳಿಯನಾಗಿ ರುವದಕ್ಕೆ ನಾನೆಷ್ಟರವನು? ನನ್ನ ಜೀವನ ಏನು? ಇಸ್ರಾಯೇಲಿನಲ್ಲಿ ನನ್ನ ತಂದೆಯ ಗೋತ್ರವು ಎಷ್ಟು ಮಾತ್ರ ಅಂದನು.
ನನ್ನ ಮನೆ ದೇವರ ಸಮ್ಮುಖದಲ್ಲಿ ಹಾಗೆಯೇ ಅಲ್ಲದಿದ್ದರೂ ನನ್ನ ಸಂಗಡ ನಿತ್ಯವಾದ ಒಡಂಬಡಿಕೆ ಯನ್ನು ಮಾಡಿದ್ದಾನೆ; ಎಲ್ಲಾದರ ವಿಷಯ ಸಿದ್ಧವಾದ ದ್ದಾಗಿಯೂ ಸ್ಥಿರವಾದದ್ದಾಗಿಯೂ ಅದೆ. ಆತನು ಅದನ್ನು ಬೆಳೆಯದೆ ಇದ್ದರೂ ನನ್ನ ಎಲ್ಲಾ ರಕ್ಷಣೆಯೂ ನನ್ನ ಎಲ್ಲಾ ಅಭಿಲಾಷೆಯೂ ಅದೇ.
ಆಗ ಅರಸನಾದ ದಾವೀದನು ಬಂದು ಕರ್ತನ ಮುಂದೆ ಕೂತುಕೊಂಡು ಹೇಳಿದ್ದೇನಂದರೆ--ಕರ್ತ ನಾದ ದೇವರೇ, ನನ್ನನ್ನು ನೀನು ಇಷ್ಟರ ವರೆಗೆ ತಂದ ದ್ದಕ್ಕೆ ನಾನು ಎಷ್ಟರವನು? ನನ್ನ ಮನೆಯು ಎಷ್ಟರದು?
ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಯಾಕಂದರೆ ಸಮಸ್ತವೂ ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಅರ್ಪಿಸಿದೆವು.
ಮನುಷ್ಯನನ್ನು ನೆನಸುವ ಹಾಗೆ ಅವನು ಎಷ್ಟರವನು? ಅವನನ್ನು ದರ್ಶಿಸುವ ಹಾಗೆ ಮನುಷ್ಯನ ಮಗನು ಎಷ್ಟರವನು?
ಹಿಜ್ಕೀಯನು ಆ ಸೇವಕರ ಕೈಯಿಂದ ಪತ್ರವನ್ನು ತೆಗೆದುಕೊಂಡು ಅದನ್ನು ಓದಿದನು; ಹಿಜ್ಕೀಯನು ಕರ್ತನ ಆಲಯಕ್ಕೆ ಹೋಗಿ ಅದನ್ನು ಕರ್ತನ ಮುಂದೆ ತೆರೆದಿಟ್ಟು,
ಕ್ರಿಸ್ತನ ಶೋಧಿಸಲ ಶಕ್ಯವಾದ ಐಶ್ವರ್ಯದ ವಿಷಯವಾಗಿ ಅನ್ಯಜನರಿಗೆ ನಾನು ಸಾರುವ ಹಾಗೆ ಪರಿಶುದ್ಧರೊಳಗೆ ಅತ್ಯಲ್ಪ ನಾದ ನನಗೆ ಅನುಗ್ರಹಿಸೋಣವಾಯಿತು.