Home Bibles ನ್ಯಾಯಾಧಿಪತಿಗಳು 2:9 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 2:9 · ಕನ್ನಡ ಬೈಬಲ್

ಅವನನ್ನು ಎಫ್ರಾಯಾಮಿನ ಬೆಟ್ಟದಲ್ಲಿ ಗಾಷ್‌ ಪರ್ವತದ ಉತ್ತರ ದಿಕ್ಕಿನಲ್ಲಿರುವ ಅವನ ಬಾಧ್ಯತೆಯ ಮೇರೆಯಾದ ತಿಮ್ನತ್‌ಹೆರೆಸ್‌ನಲ್ಲಿ ಹೂಣಿಟ್ಟರು.

Cross references

ಯೆಹೋಶುವ 19:50

ಅವನು ಕೇಳಿದ ಎಫ್ರಾಯಾಮ್‌ ಬೆಟ್ಟದಲ್ಲಿರುವ ತಿಮ್ನತ್‌ಸೆರಹ ಎಂಬ ಪಟ್ಟಣವನ್ನು ಕರ್ತನ ಮಾತಿನ ಪ್ರಕಾರ ಕೊಟ್ಟರು. ಅವನು ಆ ಪಟ್ಟಣವನ್ನು ಕಟ್ಟಿಸಿ ಅದರಲ್ಲಿ ವಾಸವಾಗಿದ್ದನು.ಯಾಜಕನಾದ ಎಲಿಯಾ ಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲಿನ ಮಕ್ಕಳ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ಸಭೆಯ ಗುಡಾರದ ಬಾಗಲ ಬಳಿಯಲ್ಲಿ ಕರ್ತನ ಸಮ್ಮುಖದಲ್ಲಿ ಚೀಟು ಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಭಾಗವಾಗಿ ಹಂಚಿಕೊಂಡು ಪೂರೈಸಿದರು.

ಯೆಹೋಶುವ 24:29

ಇವುಗಳಾದ ತರುವಾಯ ನೂನನ ಮಗನಾದ ಯೆಹೋಶುವನೆಂಬ ಕರ್ತನ ಸೇವಕನು ನೂರ ಹತ್ತು ವರುಷ ವಯಸ್ಸಿನವನಾಗಿ ಸತ್ತನು.

ಯೆಹೋಶುವ 24:30

ಅವ ನನ್ನು ಎಫ್ರಾಯಾಮ್‌ ಪರ್ವತದ ಗಾಷ್‌ ಬೆಟ್ಟದ ಉತ್ತರಕ್ಕಿರುವ ತಿಮ್ನತ್‌ಸೆರಹ ಎಂಬ ಅವನ ಬಾಧ್ಯ ತೆಯ ಮೇರೆಯಲ್ಲಿ ಹೂಣಿಟ್ಟರು.

ನ್ಯಾಯಾಧಿಪತಿಗಳು 1:1

ಯೆಹೋಶುವನು ಸತ್ತ ತರುವಾಯ ಆದದ್ದೇನಂದರೆ, ಇಸ್ರಾಯೇಲ್‌ ಮಕ್ಕಳು ಕರ್ತನಿಗೆ--ಕಾನಾನ್ಯರ ಮೇಲೆ ಮೊದಲು ನಮಗಾಗಿ ಯುದ್ಧಕ್ಕೆ ಹೋಗುವವರು ಯಾರು ಎಂದು ಕೇಳಿದರು.

Interlinear

Choose Theme