Home Bibles ☰ Books 2 ಸಮುವೇಲ 19:42 · ಕನ್ನಡ ಬೈಬಲ್
2 ಸಮುವೇಲ 19:42 · ಕನ್ನಡ ಬೈಬಲ್

ಆಗ ಯೆಹೂದ ಜನರೆಲ್ಲರೂ ಇಸ್ರಾಯೇಲ್‌ ಜನರಿಗೆ ಪ್ರತ್ಯುತ್ತರವಾಗಿ--ಅರಸನು ನಮಗೆ ಸವಿಾಪ ಬಂಧು ವಾದದರಿಂದ; ಈ ಕಾರ್ಯಕ್ಕೋಸ್ಕರ ನೀವು ಕೋಪ ವಾಗಿರುವದೇನು? ನಾವು ಅರಸನ ಖರ್ಚಿನಿಂದ ಏನಾದರೂ ಊಟ ಮಾಡಿದೆವೋ? ಅವನು ನಮಗೆ ಏನಾದರೂ ಕೊಟ್ಟನೋ ಅಂದರು.ಆದರೆ ಇಸ್ರಾ ಯೇಲ್‌ ಜನರು ಯೆಹೂದ ಜನರಿಗೆ ಪ್ರತ್ಯುತ್ತರ ವಾಗಿ--ಅರಸನಲ್ಲಿ ನಮಗೆ ಹತ್ತು ಪಾಲುಂಟು; ನಿಮಗಿಂತ ನಮಗೆ ದಾವೀದನ ಬಾಧ್ಯತೆಯು ಅಧಿಕವಾಗಿದೆ. ನಮ್ಮ ಅರಸನನ್ನು ತಿರಿಗಿ ಕರಕೊಂಡು ಬರುವದರ ವಿಷಯದಲ್ಲಿ ಮೊದಲು ಮಾತನಾಡಿ ದವರು ನಾವಲ್ಲವೋ? ಹಾಗಾದರೆ ನಮ್ಮನ್ನು ಯಾಕೆ ಅಲ್ಪವಾಗಿ ಎಣಿಸಿದಿರಿ ಅಂದರು. ಆದರೆ ಇಸ್ರಾಯೇಲ್‌ ಜನರ ಮಾತುಗಳಿಗಿಂತ ಯೆಹೂದ ಜನರ ಮಾತುಗಳು ಕಠಿಣವಾಗಿದ್ದವು.

Cross references

ನ್ಯಾಯಾಧಿಪತಿಗಳು 8:1

ಆಗ ಎಫ್ರಾಯಾಮನ ಮನುಷ್ಯರು ಅವನಿಗೆ--ನೀನು ಮಿದ್ಯಾನ್ಯರ ಮೇಲೆ ಯುದ್ಧ ಮಾಡುವದಕ್ಕೆ ಹೋಗುವಾಗ ನಮ್ಮನ್ನು ಕರೆ ಯದೆ ಹೋದದ್ದೇನೆಂದು ಹೇಳಿ ಅವನ ಸಂಗಡ ತೀಕ್ಷ್ಣವಾಗಿ ವಿವಾದ ಮಾಡಿದರು.

2 ಸಮುವೇಲ 2:4

ಆಗ ಯೆಹೂದ ಜನರು ಬಂದು ಅಲ್ಲಿ ದಾವೀದನನ್ನು ಯೆಹೂದನ ಮನೆಯವರ ಮೇಲೆ ಅರಸನನ್ನಾಗಿ ಅಭಿಷೇಕಿಸಿದರು.

2 ಸಮುವೇಲ 5:1

ಇದಾದ ಮೇಲೆ ಇಸ್ರಾಯೇಲ್‌ ಗೋತ್ರ ಗಳೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು--ಇಗೋ, ನಾವು ನಿನ್ನ ಎಲುಬೂ ನಿನ್ನ ಮಾಂಸವೂ ಆಗಿದ್ದೇವೆ.

2 ಸಮುವೇಲ 19:12

ಹಾಗಾದರೆ ಅರಸನನ್ನು ತಿರಿಗಿ ಬರಮಾಡುವಂತೆ ನೀವು ಹಿಂಜರಿದದ್ದೇನು?

1 ದಿನವೃತ್ತಾಂತ 2:3

ಯೆಹೂದನ ಮಕ್ಕಳು -- ಏರನು, ಓನಾನನು, ಶೇಲಾಹನು ಈ ಮೂವರು ಅವನಿಗೆ ಶೂನನ ಮಗ ಳಾದ ಕಾನಾನ್‌ ದೇಶದವಳಿಂದ ಹುಟ್ಟಿದರು. ಆದರೆ ಯೆಹೂದನ ಚೊಚ್ಚಲ ಮಗನಾದ ಏರನು ಕರ್ತನ ಸಮ್ಮುಖದಲ್ಲಿ ಕೆಟ್ಟವನಾದದರಿಂದ ಆತನು ಅವನನ್ನು ಕೊಂದುಹಾಕಿದನು.

Interlinear

Choose Theme