ಇಗೋ, ಇಸ್ರಾಯೇಲ್ ಜನರೆಲ್ಲರೂ ಅರಸನ ಬಳಿಗೆ ಬಂದು ಅರಸನಿಗೆ--ನಮ್ಮ ಸಹೋದರರಾದ ಯೆಹೂದ ಜನರು ಕಳ್ಳತನವಾಗಿ ನಿನ್ನನ್ನು ಕರ ತಂದದ್ದೇನು? ಅರಸನನ್ನೂ ಅವನ ಮನೆಯವರನ್ನೂ ಅವನ ಸಂಗಡ ಇರುವ ದಾವೀದನ ಎಲ್ಲಾ ಜನರನ್ನೂ ಯೊರ್ದನನ್ನು ದಾಟಿಸಿದ್ದೇನು ಅಂದರು.
Cross references
ಲಾಬಾನನು ಯಾಕೋಬನಿಗೆ--ನೀನು ಏನು ಮಾಡಿದಿ? ನನಗೆ ತಿಳಿಸದೆ ನೀನು ಕಳ್ಳನ ಹಾಗೆ ಓಡಿಬಂದಿಯಲ್ಲಾ. ನನ್ನ ಕುಮಾರ್ತೆಯರನ್ನು ಕತ್ತಿಯಿಂದ ಸೆರೆಹಿಡಿದವರ ಹಾಗೆ ತೆಗೆದುಕೊಂಡು ಬಂದಿಯಲ್ಲಾ.
ಆಗ ಎಫ್ರಾಯಾಮನ ಮನುಷ್ಯರು ಅವನಿಗೆ--ನೀನು ಮಿದ್ಯಾನ್ಯರ ಮೇಲೆ ಯುದ್ಧ ಮಾಡುವದಕ್ಕೆ ಹೋಗುವಾಗ ನಮ್ಮನ್ನು ಕರೆ ಯದೆ ಹೋದದ್ದೇನೆಂದು ಹೇಳಿ ಅವನ ಸಂಗಡ ತೀಕ್ಷ್ಣವಾಗಿ ವಿವಾದ ಮಾಡಿದರು.
ಎಫ್ರಾಯಾಮಿನ ಜನರು ಕೂಡಿಕೊಂಡು ಉತ್ತರಕ್ಕೆ ಹೋಗಿ ಯೆಪ್ತಾಹನಿಗೆ--ನೀನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡುವದಕ್ಕೆ ಹೋದಾಗ ನಮ್ಮನ್ನು ಯಾಕೆ ನಿನ್ನ ಸಂಗಡ ಹೋಗಲು ಕರೇಕಳುಹಿಸಲಿಲ್ಲ? ನಾವು ನಿನ್ನನ್ನೂ ನಿನ್ನ ಮನೆಯನ್ನೂ ಬೆಂಕಿಯಿಂದ ಸುಟ್ಟು ಬಿಡುವೆವು ಅಂದರು.
ಆದ ದರಿಂದ ಜನರು ಯುದ್ಧದಲ್ಲಿ ಓಡಿಹೋಗಿ ಅವಮಾನ ಪಟ್ಟು ಕಳ್ಳತನವಾಗಿ ಬರುವ ಹಾಗೆ ಆ ದಿನದಲ್ಲಿ ಕಳ್ಳತನವಾಗಿ ಪಟ್ಟಣದೊಳಗೆ ಬಂದರು.
ಯಾಕಂದರೆ ಆತನ ಸಹೋದರರು ಸಹ ಆತನ ಮೇಲೆ ನಂಬಿಕೆ ಇಟ್ಟಿರಲಿಲ್ಲ.