Home Bibles 2 ಸಮುವೇಲ 19:35 · ಕನ್ನಡ ಬೈಬಲ್
2 ಸಮುವೇಲ 19:35 · ಕನ್ನಡ ಬೈಬಲ್

ನಾನು ಈಹೊತ್ತು ಎಂಭತ್ತು ವರುಷದವನು; ಇನ್ನು ಒಳ್ಳೇದು ಕೆಟ್ಟದ್ದು ಎಂಬ ಭೇದ ತಿಳಿಯುವೆನೋ? ತಿನ್ನುವದೂ ಕುಡಿಯುವದೂ ನಿನ್ನ ಸೇವಕನಿಗೆ ರುಚಿಕರ ವಾಗಿರುವದೋ? ಸಂಗೀತಗಾರರ ಸಂಗೀತಗಾರ್ತಿ ಯರ ಶಬ್ದವನ್ನು ಇನ್ನು ಕೇಳುವೆನೋ? ಹಾಗಾದರೆ ನಿನ್ನ ಸೇವಕನು ಅರಸನಾದ ನನ್ನ ಒಡೆಯನಿಗೆ ಯಾಕೆ ಇನ್ನು ಭಾರವಾಗಿರಬೇಕು?

Cross references

ನಿರ್ಗಮಕಾಂಡ 2:8

ಫರೋಹನ ಮಗಳು ಅವಳಿಗೆ-ಹೋಗು ಅಂದಳು. ಆಗ ಆ ಹುಡುಗಿಯು ಹೋಗಿ ಕೂಸಿನ ತಾಯಿಯನ್ನು ಕರೆದಳು.

ನಿರ್ಗಮಕಾಂಡ 12:4

ಒಂದು ಕುರಿಮರಿಯನ್ನು ತಿನ್ನುವದಕ್ಕೆ ಕುಟುಂಬವು ಚಿಕ್ಕದಾಗಿದ್ದರೆ ಅವನೂ ತನ್ನ ಮನೆಗೆ ಸವಿಾಪವಾಗಿರುವ ತನ್ನ ನೆರೆಯವನೂ ವ್ಯಕ್ತಿಗಳ ಲೆಕ್ಕದ ಪ್ರಕಾರ ಒಂದನ್ನು ತಕ್ಕೊಳ್ಳಲಿ; ಒಬ್ಬೊಬ್ಬನು ತಾನು ತಿನ್ನುವ ಅಳತೆಯ ಪ್ರಕಾರ ಕುರಿಮರಿಯನ್ನು ತಕ್ಕೊಳ್ಳಲಿ.

2 ಸಮುವೇಲ 13:25

ಅದಕ್ಕೆ ಅರಸನು ಅಬ್ಷಾಲೋಮ ನಿಗೆ--ಹಾಗಲ್ಲ; ನನ್ನ ಮಗನೇ, ನಾವು ನಿನಗೆ ಭಾರವಾಗಿರದ ಹಾಗೆ ನಾವೆಲ್ಲರು ಈಗ ಬರುವದಿಲ್ಲ ಅಂದನು. ಅವನು ರಾಜನನ್ನು ಬಲವಂತ ಮಾಡಿದನು; ಆದರೆ ಅವನು ಹೋಗಲೊಲ್ಲದೆ ಅವನನ್ನು ಆಶೀ ರ್ವದಿಸಿದನು.

2 ಸಮುವೇಲ 15:33

ಆಗ ದಾವೀದನು ಅವನಿಗೆ--ನೀನು ನನ್ನ ಸಂಗಡ ಬಂದರೆ ನನಗೆ ಭಾರವಾಗಿರುವಿ; ನೀನು ಪಟ್ಟಣಕ್ಕೆ ತಿರಿಗಿ ಹೋಗಿ ಅಬ್ಷಾಲೋಮನಿಗೆ--ಅರಸನೇ, ನಾನು ನಿನ್ನ ಸೇವಕ ನಾಗಿರುವೆನು.

ಎಜ್ರಾ 2:65

ಅವರ ಹೊರತು ಅವರ ದಾಸರೂ ದಾಸಿಗಳೂ ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ ಇದ್ದರು. ಮತ್ತು ಅವರಿಗೆ ಹಾಡುಗಾರರೂ ಹಾಡುಗಾರ್ತಿಯರೂ ಇನ್ನೂರು ಮಂದಿ ಇದ್ದರು.

ನೆಹೆಮ್ಯ 7:67

ಇವರ ಹೊರತಾಗಿ ಇವರ ದಾಸರೂ ದಾಸಿಗಳೂ ಏಳು ಸಾವಿ ರದ ಮುನ್ನೂರ ಮೂವತ್ತೇಳು ಮಂದಿಯೂ ಇವರ ಹಾಡುಗಾರರೂ ಹಾಡುಗಾರ್ತಿಯರೂ ಇನ್ನೂರ ನಾಲ್ವತ್ತೈದು ಮಂದಿಯೂ ಇದ್ದರು.

ಯೋಬ 6:30

ನನ್ನ ನಾಲಿಗೆಯಲ್ಲಿ ಅನ್ಯಾಯ ಉಂಟೋ? ನನ್ನ ಅಂಗಳವು ಕೇಡನ್ನು ರುಚಿ ನೋಡುವದಿಲ್ಲವೋ?

ಯೋಬ 12:11

ಕಿವಿಯು ನುಡಿಗಳನ್ನು ಶೋಧಿಸುವದಿಲ್ಲವೇ? ಬಾಯಿಯು ಆಹಾರವನ್ನು ರುಚಿನೋಡುವದಿಲ್ಲವೇ?

ಕೀರ್ತನೆಗಳು 90:10

ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ, ಬಲದಿಂದಿದ್ದರೆ ಎಂಭತ್ತು ವರುಷ; ಆದಾಗ್ಯೂ ಅವು ಗಳ ಬಲವು ಪ್ರಯಾಸವೂ ದುಃಖವೂ ಆಗಿವೆ; ಅದು ಬೇಗ ಕೊಯಿದು ಹಾಕಲ್ಪಡುತ್ತದೆ; ನಾವು ಹಾರಿ ಹೋಗುತ್ತೇವೆ.

ಸಭಾಪ್ರಸಂಗಿ 2:8

ನಾನು ಬೆಳ್ಳಿ ಬಂಗಾರಗಳನ್ನು ಅರಸರ ಮತ್ತು ಪ್ರಾಂತ್ಯಗಳ ವಿಶೇಷವಾದ ಸಂಪತ್ತನ್ನು ಸಂಗ್ರಹಿಸಿ ಕೊಂಡೆನು; ಗಾಯಕ ಗಾಯಕಿಯರನ್ನು ಮತ್ತು ಮನುಷ್ಯ ಪುತ್ರರಿಗೆ ಆನಂದಕರವಾದ ಸಂಗೀತ ವಾದ್ಯ ಗಳನ್ನು ಅವುಗಳಿಗೆ ಸಂಭವಿಸಿದವುಗಳನ್ನು ಸಂಪಾದಿಸಿ ಕೊಂಡೆನು.

ಸಭಾಪ್ರಸಂಗಿ 12:1

ಕಷ್ಟದ ದಿನಗಳು ಬರುವದಕ್ಕೆ ಮೊದಲು, ಇವುಗಳಲ್ಲಿ ನನಗೆ ಸಂತೋಷವಿಲ್ಲವೆಂದು ನೀನು ಹೇಳುವ ವರ್ಷಗಳು ಸವಿಾಪಿಸುವದಕ್ಕೆ ಮೊದಲು ಈಗ ನಿನ್ನ ಯೌವನದ ದಿನಗಳಲ್ಲಿ ಸೃಷ್ಟಿಕರ್ತ ನನ್ನು ಸ್ಮರಿಸಿಕೋ.

ಯೆಶಾಯ 5:11

ಮದ್ಯಪಾನವನ್ನು ಅತಿಯಾಗಿ ಕುಡಿಯಲು ಬೆಳ ಗಿನ ಜಾವದಲ್ಲಿ ಎದ್ದು ರಾತ್ರಿಯ ವರೆಗೂ ದ್ರಾಕ್ಷಾ ರಸದಿಂದ ಅಮಲೇರಿದವರಾಗಿ ಕಾಲ ಕಳೆಯುವವರಿಗೆ ಅಯ್ಯೋ!

ಹೆಬ್ರಿಯರಿಗೆ 5:14

ಆದರೆ ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೊಸ್ಕರ ಅಂದರೆ ತಮ್ಮ ಜ್ಞಾನೇಂದ್ರಿ ಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿದವರಿಗೋಸ್ಕರವಾಗಿದೆ.

1 ಪೇತ್ರ 2:3

ಕರ್ತನು ಕೃಪಾಳುವೆಂದು ನೀವು ರುಚಿ ನೋಡಿದ್ದೀರಲ್ಲಾ.

Interlinear

Choose Theme