Home Bibles ☰ Books ಹೆಬ್ರಿಯರಿಗೆ 5:14 · ಕನ್ನಡ ಬೈಬಲ್
ಹೆಬ್ರಿಯರಿಗೆ 5:14 · ಕನ್ನಡ ಬೈಬಲ್

ಆದರೆ ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೊಸ್ಕರ ಅಂದರೆ ತಮ್ಮ ಜ್ಞಾನೇಂದ್ರಿ ಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿದವರಿಗೋಸ್ಕರವಾಗಿದೆ.

Cross references

ಆದಿಕಾಂಡ 3:5

ನೀವು ಅದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯ ಲ್ಪಡುವವೆಂದೂ ನೀವು ಒಳ್ಳೇದರ ಕೆಟ್ಟದರ ಭೇದವನ್ನು ಅರಿತವರಾಗಿ ದೇವರುಗಳ ಹಾಗೆ ಇರುವಿರೆಂದೂ ದೇವರಿಗೆ ತಿಳಿದಿದೆ ಎಂದು ಹೇಳಿತು.

2 ಸಮುವೇಲ 14:17

ಆಗ ನಿನ್ನ ದಾಸಿಯು--ಅರಸ ನಾದ ನನ್ನ ಒಡೆಯನ ಮಾತು ಆದರಣೆಯಾಗಿರಲಿ; ಒಳ್ಳೇದನ್ನೂ ಕೆಟ್ಟದ್ದನ್ನೂ ವಿವೇಚಿಸುವ ಹಾಗೆ ಅರಸ ನಾದ ನನ್ನ ಒಡೆಯನು ದೇವದೂತನ ಹಾಗೆ ಇದ್ದಾನೆ; ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ ಅಂದಳು.

1 ಅರಸುಗಳು 3:9

ಆದದರಿಂದ ನಿನ್ನ ಜನರಿಗೆ ನ್ಯಾಯ ವಿಚಾ ರಿಸಲು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ನಿನ್ನ ಸೇವಕನಿಗೆ ಜ್ಞಾನವುಳ್ಳ ಹೃದಯವನ್ನು ಕೊಡ ಬೇಕು. ಈ ನಿನ್ನ ಬಹು ಗುಂಪಾದ ಜನರ ನ್ಯಾಯ ವಿಚಾರಿಸಲು ಸಾಮರ್ಥ್ಯವುಳ್ಳವನು ಯಾವನು ಅಂದನು.

1 ಅರಸುಗಳು 3:11

ಆದದರಿಂದ ದೇವರು ಅವನಿಗೆ--ನೀನು ನಿನಗೋಸ್ಕರ ಹೆಚ್ಚಾದ ದಿವಸಗಳನ್ನು ಕೇಳದೆ ನಿನಗೋಸ್ಕರ ಐಶ್ವರ್ಯವನ್ನು ಕೇಳದೆ ನಿನ್ನ ಶತ್ರುಗಳ ಪ್ರಾಣವನ್ನು ಕೇಳದೆ ನ್ಯಾಯವನ್ನು ತಿಳಿಯಲು ನಿನಗೋಸ್ಕರ ಜ್ಞಾನವನ್ನು ಕೇಳಿದ್ದ ರಿಂದ

ಯೋಬ 6:30

ನನ್ನ ನಾಲಿಗೆಯಲ್ಲಿ ಅನ್ಯಾಯ ಉಂಟೋ? ನನ್ನ ಅಂಗಳವು ಕೇಡನ್ನು ರುಚಿ ನೋಡುವದಿಲ್ಲವೋ?

ಯೋಬ 12:11

ಕಿವಿಯು ನುಡಿಗಳನ್ನು ಶೋಧಿಸುವದಿಲ್ಲವೇ? ಬಾಯಿಯು ಆಹಾರವನ್ನು ರುಚಿನೋಡುವದಿಲ್ಲವೇ?

ಯೋಬ 34:3

ಆಹಾರವನ್ನು ಬಾಯಿ ರುಚಿನೋಡುವಂತೆ, ಕಿವಿಯು ನುಡಿಗಳನ್ನು ಪರಿಶೋಧಿಸುತ್ತದೆ.

ಕೀರ್ತನೆಗಳು 119:103

ನಿನ್ನ ಮಾತುಗಳು ನನ್ನ ರುಚಿಗೆ ಎಷ್ಟೋ ಸಿಹಿ ಯಾಗಿವೆ, ಅವು ನನ್ನ ಬಾಯಿಗೆ ಜೇನಿಗಿಂತ ಸಿಹಿ ಯಾಗಿವೆ.

ಪರಮಗೀತ 1:3

ನಿನ್ನ ಒಳ್ಳೇ ತೈಲಗಳ ಪರಿಮಳದಂತೆ ನಿನ್ನ ಹೆಸರು ಹೊಯ್ಯಲ್ಪಟ್ಟ ತೈಲವಾಗಿದೆ; ಆದದರಿಂದ ಕನ್ನಿಕೆಯರು ನಿನ್ನನ್ನು ಪ್ರೀತಿಮಾಡುತ್ತಾರೆ.

ಪರಮಗೀತ 2:3

ಅಡವಿಯ ಗಿಡಗಳಲ್ಲಿ ಸೇಬು ಮರ ಹೇಗೋ ಕುಮಾರರಲ್ಲಿ ನನ್ನ ಪ್ರಿಯನು ಹಾಗೆಯೇ. ನಾನು ಅವನ ನೆರಳಿನಲ್ಲಿ ಬಹು ಆನಂದವಾಗಿ ಕುಳಿತು ಕೊಂಡೆನು; ಅವನ ಫಲವು ನನ್ನ ರುಚಿಗೆ ಮಧುರ ವಾಗಿತ್ತು.

ಯೆಶಾಯ 7:15

ಆತನು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವಷ್ಟು ತಿಳುವ ಳಿಕೆಯು ಬರುವ ತನಕ ಬೆಣ್ಣೆ ಮತ್ತು ಜೇನನ್ನು ತಿನ್ನುವನು.

ಮತ್ತಾಯ 5:48

ಆದದರಿಂದ ಪರಲೋಕ ದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣ ನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರ್ರಿ.

ಮತ್ತಾಯ 6:22

ಕಣ್ಣು ಶರೀರದ ದೀಪವಾಗಿದೆ. ಆದಕಾರಣ ನಿನ್ನ ಕಣ್ಣು ಶುದ್ಧವಾಗಿದ್ದರೆ ನಿನ್ನ ಶರೀರವೆಲ್ಲಾ ಬೆಳಕಾಗಿರುವದು.

Interlinear

Choose Theme