Home Bibles 2 ಸಮುವೇಲ 17:8 · ಕನ್ನಡ ಬೈಬಲ್
2 ಸಮುವೇಲ 17:8 · ಕನ್ನಡ ಬೈಬಲ್

ನಿನ್ನ ತಂದೆಯೂ ಅವನ ಜನರೂ ಪರಾಕ್ರಮಶಾಲಿಗಳು; ಅವರು ಅಡವಿಯಲ್ಲಿ ಮರಿಗಳನ್ನು ಕಳಕೊಂಡ ಕರಡಿಯ ಹಾಗೆ ರೋಷ ವುಳ್ಳವರಾಗಿದ್ದಾರೆಂದು ನೀನು ಬಲ್ಲೆ. ಇದಲ್ಲದೆ ನಿನ್ನ ತಂದೆಯು ಶೂರನು; ಅವನು ರಾತ್ರಿಯಲ್ಲಿ ಜನರ ಸಂಗಡ ತಂಗುವದಿಲ್ಲ.

Cross references

ನ್ಯಾಯಾಧಿಪತಿಗಳು 18:25

ಆದರೆ ದಾನ್ಯರು ಅವ ನಿಗೆ--ಕೋಪಿಷ್ಠರು ನಿನ್ನ ಮೇಲೆ ಬೀಳದ ಹಾಗೆ, ನೀನು ನಿನ್ನ ಪ್ರಾಣವನ್ನೂ ನಿನ್ನ ಮನೆಯವರ ಪ್ರಾಣ ವನ್ನೂ ಕಳಕೊಳ್ಳದ ಹಾಗೆ, ನಿನ್ನ ಸ್ವರ ನಮ್ಮಲ್ಲಿ ಕೇಳಿ ಸದೆ ಇರಲಿ ಅಂದರು.

1 ಸಮುವೇಲ 16:18

ಆಗ ಸೇವಕರಲ್ಲಿ ಒಬ್ಬನು ಅವನಿಗೆ ಪ್ರತ್ಯುತ್ತರವಾಗಿ--ಇಗೋ, ಬಾರಿಸಲು ನಿಪುಣನಾ ದಂಥ ಬೇತ್ಲೆಹೇಮಿನವನಾದ ಇಷಯನ ಮಗನನ್ನು ನೋಡಿದೆನು. ಅವನು ಧೈರ್ಯಸ್ಥನೂ ಪರಾಕ್ರಮ ಶಾಲಿಯೂ ರಣಶೂರನಾಗಿಯೂ ಕಾರ್ಯಗಳಲ್ಲಿ ಬುದ್ಧಿವಂತನಾಗಿಯೂ ಚೆಲುವಿಕೆಯುಳ್ಳವನಾಗಿಯೂ ಇದ್ದಾನೆ. ಇದಲ್ಲದೆ ಕರ್ತನು ಅವನ ಸಂಗಡ ಇದ್ದಾನೆ ಅಂದನು.

1 ಸಮುವೇಲ 17:34

ದಾವೀದನು ಸೌಲನಿಗೆ--ನಿನ್ನ ಸೇವಕನು ತನ್ನ ತಂದೆಯ ಕುರಿಗಳನ್ನು ಮೇಯಿಸಿಕೊಂಡಿರುವಾಗ ಸಿಂಹವೂ ಕರಡಿಯೂ ಬಂದು ಮಂದೆಯಲ್ಲಿ ಇರುವ ಕುರಿಮರಿಯನ್ನು ಹಿಡಿದವು.

1 ಸಮುವೇಲ 17:50

ಹೀಗೆಯೇ ದಾವೀದನು ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನ ಮೇಲೆ ಬಲಗೊಂಡು ಫಿಲಿಷ್ಟಿಯನನ್ನು ಹೊಡೆದು ಅವನನ್ನು ಕೊಂದುಹಾಕಿದನು.

1 ಸಮುವೇಲ 23:23

ಅವನು ಬಹು ಉಪಾಯದಿಂದ ಪ್ರವರ್ತಿಸುತ್ತಾ ನೆಂದು ನನಗೆ ಹೇಳುತ್ತಾರೆ. ಅವನು ಅಡಗಿಕೊಂಡಿರುವ ಎಲ್ಲಾ ರಹಸ್ಯ ಸ್ಥಳಗಳನ್ನು ನೋಡಿ ತಿಳುಕೊಂಡು ನಿಜವಾದ ವರ್ತಮಾನವನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ; ಆಗ ನಾನು ನಿಮ್ಮ ಸಂಗಡ ಬಂದು ಅವನು ದೇಶದಲ್ಲಿದ್ದರೆ ಯೆಹೂದದ ಸಹಸ್ರಗಳಲ್ಲಿ ಅವನನ್ನು ಹುಡುಕ ಹೋಗುವೆನು ಅಂದನು.

2 ಸಮುವೇಲ 15:18

ಅವನ ಎಲ್ಲಾ ಸೇವಕರೂ ಕೆರೇತ್ಯರೂ ಪೆಲೇತ್ಯರೂ ಅವನ ಹಿಂದೆ ಗತ್‌ ಊರಿನಿಂದ ಅವನ ಸಂಗಡ ಬಂದ ಗಿತ್ತಿಯರಾದ ಆರುನೂರು ಮಂದಿಯೂ ಅರಸನ ಮುಂದೆ ನಡೆದರು.

2 ಸಮುವೇಲ 21:18

ತರುವಾಯ ತಿರಿಗಿ ಫಿಲಿಷ್ಟಿಯರ ಸಂಗಡ ಗೋಬಿ ನಲ್ಲಿ ಯುದ್ಧ ಉಂಟಾಯಿತು. ಆಗ ಹುಷಾತನಾದ ಸಿಬ್ಬೆಕೈನು ಮಹಾಶರೀರದವನ ಮಕ್ಕಳಲ್ಲಿ ಸಫ್‌ ಎಂಬವನನ್ನು ಕೊಂದನು.

2 ಸಮುವೇಲ 23:8

ದಾವೀದನಿಗೆ ಇದ್ದ ಪರಾಕ್ರಮಶಾಲಿಗಳ ಹೆಸರು ಗಳು ಇವೇ; ಸೈನ್ಯಾಧಿಪತಿಗಳಲ್ಲಿ ಮುಖ್ಯನಾಗಿ ಆಸನದ ಮೇಲೆ ಕೂತವನಾದ ತಹ್ಕೆಮೋನ್ಯನು; ಇವನೇ ಎಚ್ನಿಯನಾದ ಅದೀನೊ. ಇವನು ಎಂಟು ನೂರು ಜನರ ಮೇಲೆ ಬಿದ್ದು ಅವರನ್ನು ಒಂದೇ ಸಾರಿ ಕೊಂದು ಹಾಕಿದನು.

2 ಸಮುವೇಲ 23:16

ಆಗ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿ ಯರ ದಂಡನ್ನು ಭೇದಿಸಿ ಹೊರಟು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತಕ್ಕೊಂಡು ಬಂದರು. ಆದರೆ ಅವನು ಅದನ್ನು ಕುಡಿಯಲ್ಲೊಲ್ಲದೆ ಕರ್ತನಿಗಾಗಿ ಹೊಯಿ ದನು.

2 ಸಮುವೇಲ 23:18

ಯೋವಾಬನ ಸಹೋದರನಾದ ಚೆರೂಯಳ ಮಗನಾಗಿರುವ ಅಬೀಷೈಯು ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ತನ್ನ ಈಟಿಯನ್ನು ಎತ್ತಿ ಮುನ್ನೂರು ಜನರನ್ನು ಸಂಹರಿಸಿದ್ದರಿಂದ ಮೂವ ರೊಳಗೆ ಹೆಸರುಗೊಂಡನು.

2 ಸಮುವೇಲ 23:20

ಕಬ್ಜಯೇಲಿನಲ್ಲಿದ್ದ ಪರಾಕ್ರಮಶಾಲಿಯ ಮಗನಾದ ಯೆಹೋಯಾದಾ ವನ ಮಗನಾಗಿರುವ ಬೆನಾಯನು ಅನೇಕ ಶೂರ ಕೃತ್ಯಗಳನ್ನು ಮಾಡಿದ್ದನು. ಅವನು ಸಿಂಹದಹಾಗಿರುವ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದುಬಿಟ್ಟನು. ಇದಲ್ಲದೆ ಹಿಮಕಾಲದಲ್ಲಿ ಕುಣಿಯೊಳಗೆ ಇಳಿದು ಒಂದು ಸಿಂಹವನ್ನು ಕೊಂದುಬಿಟ್ಟನು.

2 ಅರಸುಗಳು 2:24

ಅವನು ಹಿಂದಿರುಗಿ ಅವರನ್ನು ನೋಡಿ--ಕರ್ತನ ಹೆಸರಿನಲ್ಲಿ ಅವರನ್ನು ಶಪಿಸಿದನು. ಆಗ ಅಡವಿಯೊಳಗಿಂದ ಎರಡು ಹೆಣ್ಣು ಕರಡಿಗಳು ಹೊರಟು ಅವರಲ್ಲಿ ನಾಲ್ವತ್ತೆರಡು ಹುಡುಗ ರನ್ನು ಸೀಳಿಬಿಟ್ಟವು.ಅವನು ಆ ಸ್ಥಳವನ್ನು ಬಿಟ್ಟು ಕರ್ಮೆಲು ಬೆಟ್ಟಕ್ಕೆ ಹೋದನು; ಅಲ್ಲಿಂದ ಸಮಾರ್ಯಕ್ಕೆ ಹಿಂತಿರುಗಿದನು.

1 ದಿನವೃತ್ತಾಂತ 11:25

ಇಗೋ, ಅವನು ಮೂವತ್ತು ಮಂದಿಯಲ್ಲಿ ಘನವುಳ್ಳವನಾಗಿದ್ದನು; ಆದರೆ ಮೂವರ ಕೂಡ ಸೇರದೆ ಇದ್ದನು. ದಾವೀದನು ಅವನನ್ನು ತನ್ನ ಕಾವಲಿ ನವರ ಮೇಲೆ ಇಟ್ಟನು.

ಸಾಮೇತಿಗಳು 17:12

ಮೂರ್ಖತನದಲ್ಲಿ ಮುಳುಗಿ ರುವ ಮೂಢನಿಗೆ ಎದುರಾಗುವದಕ್ಕಿಂತಲೂ ಮರಿಗ ಳನ್ನು ಕಳೆದುಕೊಂಡ ಕರಡಿಗೆ ಎದುರಾಗುವದು ಲೇಸು.

ಸಾಮೇತಿಗಳು 28:15

ಗರ್ಜಿಸುವ ಸಿಂಹದಂತೆಯೂ ಅಲೆದಾಡುವ ಕರಡಿಯಂತೆಯೂ ಬಡವರಾದ ಜನರನ್ನು ಆಳುವ ದುಷ್ಟನು ಇರುತ್ತಾನೆ.

ದಾನಿಯೇಲ 7:5

ಇದಲ್ಲದೆ ಇಗೋ, ಇನ್ನೊಂದು ಎರಡ ನೆಯ ಮೃಗವು ಕರಡಿಯ ಹಾಗಿರುವಂಥದ್ದು. ಇದಕ್ಕೆ ಒಂದು ಪಕ್ಕದಲ್ಲಿ ಒಂದು ಹೆಗಲನ್ನು ಮೇಲಕ್ಕೆ ಎತ್ತಿ ಕೊಂಡಿತ್ತು. ಇದರ ಬಾಯಿಯ ಹಲ್ಲುಗಳ ಮಧ್ಯದಲ್ಲಿ ಮೂರು ಪಕ್ಕೆಲುಬುಗಳು ಇದ್ದವು. ಅದಕ್ಕೆ ಅವರು --ಎದ್ದೇಳು ಹೆಚ್ಚು ಮಾಂಸವನ್ನು ತಿನ್ನು ಎಂದು ಹೇಳಿ ದರು.

ಹೊಶೇಯ 13:8

ಮರಿಗಳನ್ನು ಕಳೆದುಕೊಂಡ ಕರಡಿಯಂತೆ ನಾನು ಅವರನ್ನು ಎದುರುಗೊಳ್ಳುವೆನು; ಅವರ ಹೃದಯದ ಪೊರೆಯನ್ನು ಹರಿದುಬಿಡುವೆನು. ಅಲ್ಲಿ ನಾನು ಸಿಂಹದ ಹಾಗೆ ಅವರನ್ನು ನುಂಗುವೆನು; ಕಾಡುಮೃಗವು ಅವರನ್ನು ಸೀಳಿಹಾಕುವದು.

ಹೆಬ್ರಿಯರಿಗೆ 11:32

ಇನ್ನೂ ಏನು ಹೇಳಬೇಕು? ಗಿಡಿಯೋನ್‌ ಬಾರಾಕ್‌ ಸಂಸೋನ್‌ ಎಫ್‌ಥ ದಾವೀದ್‌ ಸಮುವೇಲ್‌ ಮತ್ತು ಪ್ರವಾದಿಗಳ ವಿಷಯವಾಗಿ ಹೇಳುವದಕ್ಕೆ ನನಗೆ ಸಮಯ ಸಾಲದು.

Interlinear

Choose Theme