Home Bibles 2 ಸಮುವೇಲ 23:8 · ಕನ್ನಡ ಬೈಬಲ್
2 ಸಮುವೇಲ 23:8 · ಕನ್ನಡ ಬೈಬಲ್

ದಾವೀದನಿಗೆ ಇದ್ದ ಪರಾಕ್ರಮಶಾಲಿಗಳ ಹೆಸರು ಗಳು ಇವೇ; ಸೈನ್ಯಾಧಿಪತಿಗಳಲ್ಲಿ ಮುಖ್ಯನಾಗಿ ಆಸನದ ಮೇಲೆ ಕೂತವನಾದ ತಹ್ಕೆಮೋನ್ಯನು; ಇವನೇ ಎಚ್ನಿಯನಾದ ಅದೀನೊ. ಇವನು ಎಂಟು ನೂರು ಜನರ ಮೇಲೆ ಬಿದ್ದು ಅವರನ್ನು ಒಂದೇ ಸಾರಿ ಕೊಂದು ಹಾಕಿದನು.

Cross references

ನ್ಯಾಯಾಧಿಪತಿಗಳು 15:15

ಅವನು ಒಂದು ಕತ್ತೆ ದವಡೆಯ ಹೊಸ ಎಲು ಬನ್ನು ಕಂಡುಕೊಂಡು ತನ್ನ ಕೈಯನ್ನು ಚಾಚಿ ಅದನ್ನು ತಕ್ಕೊಂಡು ಅದರಿಂದ ಸಾವಿರ ಜನರನ್ನು ವಧಿಸಿಬಿಟ್ಟನು.

2 ಸಮುವೇಲ 10:7

ದಾವೀದನು ಅದನ್ನು ಕೇಳಿದಾಗ ಅವನು ಯೋವಾಬನನ್ನೂ ಪರಾ ಕ್ರಮಶಾಲಿಗಳಾದ ಸಕಲ ಶೂರಸೈನಿಕರನ್ನು ಕಳುಹಿ ಸಿದನು.

1 ಅರಸುಗಳು 1:8

ಆದರೆ ಯಾಜಕ ನಾದ ಚಾದೋಕನೂ ಯೆಹೋಯಾದಾವನ ಮಗ ನಾದ ಬೆನಾಯನೂ ಪ್ರವಾದಿಯಾದ ನಾತಾನನೂ ಶಿಮ್ಮಿಯೂ ರೇಗಿಯೂ ದಾವೀದನ ಪರಾಕ್ರಮ ಶಾಲಿಗಳೂ ಅದೋನೀಯನ ಸಂಗಡ ಹೋಗಲಿಲ್ಲ.

1 ದಿನವೃತ್ತಾಂತ 11:10

ದಾವೀದನಿಗೆ ಇರುವ ಮುಖ್ಯಸ್ಥರಾದ ಪರಾಕ್ರಮ ಶಾಲಿಗಳು ಇವರೇ; ಇಸ್ರಾಯೇಲನ್ನು ಕುರಿತು ಕರ್ತನು ಹೇಳಿದ ವಾಕ್ಯದ ಪ್ರಕಾರ ಅವನನ್ನು ಅರಸನನ್ನಾಗಿ ಮಾಡುವದಕ್ಕೆ ಅವರು ಸಮಸ್ತ ಇಸ್ರಾಯೇಲಿನ ಸಂಗಡ ಅವನ ರಾಜ್ಯದಲ್ಲಿ ತಮ್ಮನ್ನು ದೃಢಪಡಿಸಿಕೊಂಡರು.

1 ದಿನವೃತ್ತಾಂತ 11:11

ದಾವೀದನ ಸಂಗಡ ಇದ್ದ ಪರಾಕ್ರಮಶಾಲಿಗಳ ಲೆಕ್ಕವೇನಂದರೆ--ಹಕ್ಮೋನಿಯನಾದ ಯಾಷೊಬ್ಬಾ ಮನು ಅಧಿಪತಿಗಳಲ್ಲಿ ಮುಖ್ಯಸ್ಥನಾಗಿದ್ದನು; ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿ ಯನ್ನು ಎತ್ತಿ ಒಂದೇ ಸಾರಿ ಅವರನ್ನು ಕೊಂದು ಹಾಕಿದನು.

1 ದಿನವೃತ್ತಾಂತ 27:1

ಆದರೆ ಇಸ್ರಾಯೇಲ್‌ ಮಕ್ಕಳು ತಮ್ಮ ಲೆಕ್ಕದ ಪ್ರಕಾರವಾಗಿ ಹೀಗೆಯೇ ಇದ್ದರು; ಹೇಗಂದರೆ, ಮುಖ್ಯಸ್ಥರಾದ ಪಿತೃಗಳು ಸಹಸ್ರಗಳಿಗೂ ಶತಗಳಿಗೂ ಅಧಿಪತಿಗಳು. ವರುಷದ ಎಲ್ಲಾ ತಿಂಗಳು ಗಳಲ್ಲಿ ಪ್ರತಿ ತಿಂಗಳು ಒಳಗೆ ಹೋಗಿ ಬರುವ ವರ್ಗ ಗಳ ಕಾರ್ಯಗಳಲ್ಲಿ ಅರಸನನ್ನು ಸೇವಿಸಿದ ಅವರ ಪಾರುಪತ್ಯಗಾರರೂ ಪ್ರತಿ ವರ್ಗಕ್ಕೆ ಇಪ್ಪತ್ತನಾಲ್ಕು ಸಾವಿರ ಮಂದಿಯಾಗಿದ್ದರು.

1 ದಿನವೃತ್ತಾಂತ 27:2

ಮೊದಲನೇ ತಿಂಗಳಿಗೋಸ್ಕರ ಮೊದಲನೇ ವರ್ಗದ ಮೇಲೆ ಜಬ್ದೀಯೇಲನ ಮಗನಾದ ಯಾಷೊ ಬ್ಬಾಮನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.

1 ದಿನವೃತ್ತಾಂತ 27:32

ಇದಲ್ಲದೆ ದಾವೀದನ ಚಿಕ್ಕಪ್ಪನಾದ ಯೋನಾತಾನನು ಗ್ರಹಿಕೆಯುಳ್ಳವನಾಗಿ ಆಲೋಚನೆಯುಳ್ಳ ಲೇಖಕನೂ ಆಗಿದ್ದನು. ಹಕ್ಮೋನನಾದ ಯೆಹೀಯೇ ಲನು ಅರಸನ ಕುಮಾರರ ಸಂಗಡ ಇದ್ದನು.

Interlinear

Choose Theme