ಆಗ ಅವಳ ಸಹೋದರನಾದ ಅಬ್ಷಾಲೋಮನು ಅವಳಿಗೆ --ನಿನ್ನ ಸಹೋದರನಾದ ಅಮ್ನೋನನು ನಿನ್ನ ಸಂಗಡ ಇದ್ದನೋ? ನನ್ನ ಸಹೋದರಿಯೇ, ಈಗ ಮೌನ ವಾಗಿರು; ಅವನು ನಿನ್ನ ಸಹೋದರನು; ಈ ಕಾರ್ಯ ವನ್ನು ನಿನ್ನ ಮನಸ್ಸಿಗೆ ಹಚ್ಚಿಕೊಳ್ಳಬೇಡ ಅಂದನು. ಹಾಗೆಯೇ ತಾಮಾರಳು ತನ್ನ ಸಹೋದರನಾದ ಅಬ್ಷಾಲೋಮನ ಮನೆಯಲ್ಲಿ ಒಂಟಿಗಳಾಗಿದ್ದಳು.
Cross references
ದೇಶದ ಪ್ರಭುವಾಗಿದ್ದ ಹಿವ್ವಿಯನಾದ ಹಮೋರನ ಮಗನಾದ ಶೆಕೆಮನು ಆಕೆಯನ್ನು ನೋಡಿ ತೆಗೆದುಕೊಂಡು ಹೋಗಿ ಕೂಡಿ ಅಶುದ್ಧ ಮಾಡಿದನು.
ಇವರು ಲೇಯಳ ಮಕ್ಕಳು. ಆಕೆಯು ಇವರನ್ನೂ ತನ್ನ ಮಗಳಾದ ದೀನಳನ್ನೂ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹೆತ್ತಳು. ಅವನ ಕುಮಾರರೂ ಕುಮಾರ್ತೆಯರೂ ಎಲ್ಲಾ ಮೂವತ್ತು ಮೂರು ಮಂದಿ.
ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ.
ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ.