Home Bibles ಆದಿಕಾಂಡ 46:15 · ಕನ್ನಡ ಬೈಬಲ್
ಆದಿಕಾಂಡ 46:15 · ಕನ್ನಡ ಬೈಬಲ್

ಇವರು ಲೇಯಳ ಮಕ್ಕಳು. ಆಕೆಯು ಇವರನ್ನೂ ತನ್ನ ಮಗಳಾದ ದೀನಳನ್ನೂ ಪದ್ದನ್‌ ಅರಾಮಿನಲ್ಲಿ ಯಾಕೋಬನಿಗೆ ಹೆತ್ತಳು. ಅವನ ಕುಮಾರರೂ ಕುಮಾರ್ತೆಯರೂ ಎಲ್ಲಾ ಮೂವತ್ತು ಮೂರು ಮಂದಿ.

Cross references

ಆದಿಕಾಂಡ 25:20

ಇಸಾಕನು ನಾಲ್ವತ್ತು ವರುಷದವನಾಗಿದ್ದಾಗ ಪದ್ದನ್‌ ಅರಾಮಿನಿಂದ ಅರಾಮ್ಯನಾದ ಬೆತೂವೇಲನ ಮಗಳೂ ಲಾಬಾನನ ಸಹೋದರಿಯೂ ಆದ ರೆಬೆಕ್ಕಳನ್ನು ಹೆಂಡತಿಯಾಗಿ ತಕ್ಕೊಂಡನು.

ಆದಿಕಾಂಡ 29:16

ಲಾಬಾನನಿಗೆ ಇಬ್ಬರು ಕುಮಾರ್ತೆಯರಿದ್ದರು. ಹಿರಿಯಳ ಹೆಸರು ಲೇಯಳು, ಕಿರಿಯಳ ಹೆಸರು ರಾಹೇಲಳು.

ಆದಿಕಾಂಡ 29:32

ಲೇಯಳು ಗರ್ಭಿಣಿ ಯಾಗಿ ಮಗನನ್ನು ಹೆತ್ತು--ನಿಜವಾಗಿಯೂ ಕರ್ತನು ನನ್ನ ಬಾಧೆಯನ್ನು ನೋಡಿದ್ದಾನೆ; ಆದದರಿಂದ ನನ್ನ ಗಂಡನು ನನ್ನನ್ನು ಪ್ರೀತಿಮಾಡುವನೆಂದು ಹೇಳಿ (ಮಗುವಿಗೆ) ರೂಬೇನ್‌ ಎಂದು ಹೆಸರಿಟ್ಟಳು.

ಆದಿಕಾಂಡ 30:17

ಆಗ ದೇವರು ಲೇಯಳನ್ನು ಆಲೈಸಿದ್ದರಿಂದ ಆಕೆಯು ಗರ್ಭಿಣಿಯಾಗಿ ಯಾಕೋಬನಿಗೆ ಐದನೆಯ ಮಗನನ್ನು ಹೆತ್ತಳು.

ಆದಿಕಾಂಡ 30:21

ತರುವಾಯ ಆಕೆಯು ಒಬ್ಬ ಮಗಳನ್ನು ಹೆತ್ತು ಆಕೆಗೆ ದೀನಾ ಎಂದು ಹೆಸರಿಟ್ಟಳು.

ಆದಿಕಾಂಡ 34:1

ಲೇಯಳು ಯಾಕೋಬನಿಗೆ ಹೆತ್ತ ಮಗಳಾದ ದೀನಳು ದೇಶದ ಸ್ತ್ರೀಯರನ್ನು ನೋಡುವ ದಕ್ಕಾಗಿ ಹೊರಗೆ ಹೋದಳು.

ಆದಿಕಾಂಡ 35:23

ಅವರಲ್ಲಿ ಲೇಯಳ ಕುಮಾರರು: ಯಾಕೋಬನ ಚೊಚ್ಚಲ ಮಗನಾದ ರೂಬೇನನು ಸಿಮೆಯೋನನು ಲೇವಿಯು ಯೆಹೂದನು ಇಸ್ಸಾಕಾರನು ಮತ್ತು ಜೆಬೂಲೂನನು.

ಆದಿಕಾಂಡ 49:3

ರೂಬೇನನೇ, ನೀನು ನನ್ನ ಚೊಚ್ಚಲ ಮಗನು, ನನ್ನ ಶಕ್ತಿಯೂ ನನ್ನ ಬಲದ ಆರಂಭವೂ ಔನ್ಯತ್ಯಾತಿ ಶಯವೂ ಬಲಾತಿಶಯವೂ ನೀನೇ.

ನಿರ್ಗಮಕಾಂಡ 1:2

ರೂಬೇನ್‌ ಸಿಮೆಯೋನ್‌ ಲೇವಿ ಯೆಹೂದ

ಅಂಕೆಗಳ ಪುಸ್ತಕ 1:1

ಅವರು ಐಗುಪ್ತದೇಶದಿಂದ ಹೊರಟ ಎರಡನೆಯ ವರುಷದ ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಕರ್ತನು ಸೀನಾಯಿ ಅರಣ್ಯದಲ್ಲಿ ಸಭೆಯ ಗುಡಾರದೊಳಗೆ ಮೋಶೆಯ ಸಂಗಡ ಮಾತನಾಡಿ--

ಅಂಕೆಗಳ ಪುಸ್ತಕ 10:1

ಕರ್ತನು ಮೋಶೆಗೆ ಹೇಳಿದ್ದೇನೆಂದರೆ

ಅಂಕೆಗಳ ಪುಸ್ತಕ 26:1

ಆದರೆ ವ್ಯಾಧಿಯ ತರುವಾಯ ಕರ್ತನು ಮೋಶೆಯ ಸಂಗಡಲೂ ಆರೋನನ ಮಗನೂ ಯಾಜಕನೂ ಆಗಿರುವ ಎಲ್ಲಾಜಾರನ ಸಂಗಡಲೂ ಮಾತನಾಡಿ--

1 ದಿನವೃತ್ತಾಂತ 2:1

ಇಸ್ರಾಯೇಲನ ಮಕ್ಕಳು -- ರೂಬೇನನು, ಸಿಮೆಯೋನನು, ಲೇವಿಯು,

Interlinear

Choose Theme