Home Bibles 2 ಅರಸುಗಳು 9:21 · ಕನ್ನಡ ಬೈಬಲ್
2 ಅರಸುಗಳು 9:21 · ಕನ್ನಡ ಬೈಬಲ್

ಯೋರಾಮನು ರಥಹೂಡಬೇಕೆಂದು ಹೇಳಿದನು. ಅವನ ರಥವು ಸಿದ್ಧವಾಯಿತು. ಆಗ ಇಸ್ರಾಯೇಲಿನ ಅರಸನಾದ ಯೋರಾಮನೂ ಯೆಹೂ ದದ ಅರಸನಾದ ಅಹಜ್ಯನೂ ಹೊರಟು ಅವನವನು ತನ್ನ ತನ್ನ ರಥದಲ್ಲಿ ಏರಿ ಯೇಹುವಿಗೆ ಎದುರಾಗಿ ಹೊರಟು ಇಜ್ರೇಲ್ಯನಾದ ನಾಬೋತನ ಹೊಲದಲ್ಲಿ ಅವನನ್ನು ಸಂಧಿಸಿದರು.

Cross references

ಅಂಕೆಗಳ ಪುಸ್ತಕ 20:14

ಇದಲ್ಲದೆ ಮೋಶೆಯು ಕಾದೇಶಿನಿಂದ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ--ನಿನ್ನ ಸಹೋದರನಾದ ಇಸ್ರಾಯೇ ಲನು ಹೇಳುವದೇನಂದರೆ--ನಮಗೆ ಉಂಟಾದ ಸಕಲ ಆಯಾಸವನ್ನು ನೀನು ಅರಿತಿದ್ದೀ.

1 ಅರಸುಗಳು 20:14

ಅಹಾಬನು--ಯಾರ ಕೈ ಯಿಂದ ಅಂದನು. ಅದಕ್ಕವನು ಪ್ರಾಂತ್ಯಗಳ ಪ್ರಧಾ ನರ ಯೌವನಸ್ಥರಿಂದಲೇ ಎಂದು ಕರ್ತನು ಹೇಳು ತ್ತಾನೆ ಅಂದನು. ಆಗ ಅವನು--ಯುದ್ಧ ನಡಿಸುವವನು ಯಾರು ಅಂದನು. ಅದಕ್ಕವನು--ನೀನೇ ಅಂದನು.

1 ಅರಸುಗಳು 21:1

ಇವುಗಳ ತರುವಾಯ ಏನಾಯಿತಂದರೆ, ಇಜ್ರೆಲಲ್ಲಿ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಬಳಿಯಲ್ಲಿ ಇಜ್ರೆಲ್ಯನಾದ ನಾಬೋತನಿಗೆ ಒಂದು ದ್ರಾಕ್ಷೇ ತೋಟವಿತ್ತು.

1 ಅರಸುಗಳು 21:15

ನಾಬೋ ತನು ಕಲ್ಲೆಸೆಯಲ್ಪಟ್ಟು ಸತ್ತಿದ್ದಾನೆಂದು ಈಜೆಬೆಲಳು ಕೇಳಿದಾಗ ಅವಳು ಅಹಾಬನಿಗೆ--ನೀನೆದ್ದು ಇಜ್ರೇಲ್ಯ ನಾದ ನಾಬೋತನು ಬೆಲೆಗೆ ಕೊಡಲು ಸಮ್ಮತಿಸ ದಿದ್ದ ದ್ರಾಕ್ಷೇ ತೋಟವನ್ನು ಸ್ವಾಧೀನ ಮಾಡಿಕೋ; ಯಾಕಂದರೆ ನಾಬೋತನು ಜೀವದಿಂದ ಇಲ್ಲ, ಸತ್ತಿ ದ್ದಾನೆ ಅಂದಳು.

1 ಅರಸುಗಳು 21:16

ನಾಬೋತನು ಸತ್ತನೆಂದು ಅಹಾ ಬನು ಕೇಳಿದಾಗ ಅವನೆದ್ದು ಇಜ್ರೇಲ್ಯನಾದ ನಾಬೋ ತನ ದ್ರಾಕ್ಷೇ ತೋಟವನ್ನು ಸ್ವಾಧೀನಮಾಡಿಕೊಳ್ಳಲು ಹೋದನು.

2 ಅರಸುಗಳು 9:25

ಆಗ ಯೇಹುವು ತನ್ನ ಅಧಿಪತಿ ಯಾದ ಬಿದ್ಕರನಿಗೆ--ನೀನು ಅವನನ್ನು ತೆಗೆದುಕೊಂಡು ಹೋಗಿ ಇಜ್ರೇಲ್ಯನಾದ ನಾಬೋತನ ಪಾಲಾಗಿರುವ ಹೊಲದಲ್ಲಿ ಹಾಕಿಬಿಡು.

2 ದಿನವೃತ್ತಾಂತ 22:7

ಯೆಹೋರಾಮನ ಬಳಿಗೆ ಅವನು ಬಂದದ್ದರಿಂದ ಅಹಜ್ಯನಿಗೆ ಉಂಟಾದ ನಷ್ಟವು ದೇವರಿಂದ ಆಯಿತು. ಹೇಗಂದರೆ ಅವನು ಬಂದ ತರುವಾಯ ಕರ್ತನು ಅಹಾಬನ ಮನೆಯನ್ನು ಕಡಿದು ಬಿಡಲು ಅಭಿಷೇಕಿಸಿದ ನಿಂಷಿಯ ಮಗನಾದ ಯೇಹುವಿಗೆ ವಿರೋಧವಾಗಿ ಯೆಹೋರಾಮನ ಸಂಗಡ ಹೊರಟನು.

ಮೀಕ 1:13

ಲಾಕೀಷಿನ ನಿವಾಸಿಯೇ, ವೇಗವುಳ್ಳ ಕುದುರೆಗೆ ರಥವನ್ನು ಕಟ್ಟು, ಇದೇ ಚೀಯೋನಿನ ಮಗಳ ಪಾಪದ ಆರಂಭವು; ಇಸ್ರಾಯೇಲಿನ ಅಪರಾಧಗಳು ನಿನ್ನಲ್ಲಿ ಕಂಡುಬಂದವು.

Interlinear

Choose Theme