ಇವುಗಳ ತರುವಾಯ ಏನಾಯಿತಂದರೆ, ಇಜ್ರೆಲಲ್ಲಿ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಬಳಿಯಲ್ಲಿ ಇಜ್ರೆಲ್ಯನಾದ ನಾಬೋತನಿಗೆ ಒಂದು ದ್ರಾಕ್ಷೇ ತೋಟವಿತ್ತು.
Cross references
ಅವರ ಮೇರೆಯು ಇಜ್ರೇಲಿಗೆ ಎದುರಾದ ಕೆಸುಲ್ಲೋತ್, ಶೂನೇಮ್,
ಮಿದ್ಯಾನ್ಯರೂ ಅಮಾಲೇಕ್ಯರೂ ಮೂಡಣದ ಮಕ್ಕಳೆಲ್ಲರೂ ಏಕವಾಗಿ ಕೂಡಿ ದಾಟಿಬಂದು ಇಜ್ರೇ ಲಿನ ತಗ್ಗಿನಲ್ಲಿ ದಂಡಿಳಿದರು.
ಆದರೆ ಫಿಲಿಷ್ಟಿಯರು ತಮ್ಮ ಎಲ್ಲಾ ಸೈನ್ಯಗಳನ್ನು ಅಫೇಕದಲ್ಲಿ ಕೂಡಿಸಿ ಕೊಂಡರು. ಹಾಗೆಯೇ ಇಸ್ರಾಯೇಲ್ಯರು ಇಜ್ರೇಲ್ ನಲ್ಲಿರುವ ಬುಗ್ಗೆಯ ಬಳಿಯಲ್ಲಿ ದಂಡಿಳಿದರು.
ಆಗ ಇದ್ದ ಕ್ಕಿದ್ದ ಹಾಗೆ ಆಕಾಶವು ಮೇಘಗಳಿಂದಲೂ ಗಾಳಿ ಯಿಂದಲೂ ಕಪ್ಪಾಗಿ ದೊಡ್ಡ ಮಳೆಯು ಉಂಟಾಯಿತು. ಆದರೆ ಅಹಾಬನು ರಥದಲ್ಲಿ ಏರಿ ಇಜ್ರೇಲಿಗೆ ಹೋದನು.ಆದರೆ ಕರ್ತನ ಕೈ ಎಲೀಯನ ಮೇಲೆ ಇದ್ದದರಿಂದ ಅವನು ತನ್ನ ನಡುವನ್ನು ಕಟ್ಟಿಕೊಂಡು ಇಜ್ರೇಲಿನ ವರೆಗೂ ಅಹಾಬನಿಗೆ ಮುಂದಾಗಿ ಓಡಿದನು.
ಆದರೆ ಪ್ರವಾದಿಗಳ ಮಕ್ಕಳಲ್ಲಿ ಒಬ್ಬನು ಕರ್ತನ ಮಾತಿನಿಂದ ತನ್ನ ಜೊತೆಗಾರನಿಗೆ--ನೀನು ದಯ ಮಾಡಿ ನನ್ನನ್ನು ಹೊಡೆ ಅಂದನು.
ಇದಲ್ಲದೆ ಅರಸನಾದ ಆಹಾಜನು ತನ್ನ ಇಕ್ಕಟ್ಟಿನ ಕಾಲದಲ್ಲಿ ಮತ್ತಷ್ಟು ಕರ್ತನಿಗೆ ವಿರೋಧ ವಾಗಿ ಅಪರಾಧ ಮಾಡಿದನು.
ನಮ್ಮ ದುಷ್ಕರ್ಮಗಳಿಗೋಸ್ಕರವೂ ನಮ್ಮ ಮಹಾ ಅಪರಾಧಕ್ಕೋಸ್ಕರವೂ ನಮ್ಮ ಮೇಲೆ ಬಂದದ್ದೆಲ್ಲ ಬಂದ ತರುವಾಯ ನಮ್ಮ ದೇವರಾಗಿರುವ ನೀನು ನಮ್ಮ ಅಕ್ರಮಗಳಿಗೆ ತಕ್ಕಹಾಗೆ ನಮ್ಮನ್ನು ಶಿಕ್ಷಿಸದೆ ಈಗ ಇರುವ ಪ್ರಕಾರ ನಮಗೆ ವಿಮೋಚನೆಯನ್ನು ಕೊಟ್ಟ ತರುವಾಯ
ಹೀಗಿದ್ದಾಗ್ಯೂ ಆ ಜನರು ತಮ್ಮನ್ನು ಹೊಡೆ ದಾತನ ಕಡೆಗೆ ತಿರುಗದೆಯೂ ಇಲ್ಲವೆ ಸೈನ್ಯಗಳ ಕರ್ತನನ್ನು ಹುಡುಕದೆಯೂ ಇದ್ದಾರೆ.
ಅವಳ ಬಳಿಗೆ ಕುರುಬರು ತಮ್ಮ ಮಂದೆಗಳ ಸಂಗಡ ಬರುವರು; ಅವಳ ಸುತ್ತಲು ತಮ್ಮ ಗುಡಾರಗಳನ್ನು ಹಾಕುವರು; ತಮ್ಮ ತಮ್ಮ ಸ್ಥಳಗಳಲ್ಲಿ ಮೇಯಿಸುವರು.
ಆಗ ಕರ್ತನು ಅವನಿಗೆ--ಅವನನ್ನು ಇಜ್ರೇಲ್ ಎಂಬ ಹೆಸರಿನಿಂದ ಕರೆ. ಇನ್ನೂ ಸ್ವಲ್ಪಕಾಲದಲ್ಲಿಯೇ ನಾನು ಇಜ್ರೇಲಿನ ರಕ್ತವನ್ನು ಯೆಹೂವಿನ ಮನೆತನದವರ ಮೇಲೆ ಸೇಡು ತೀರಿಸಿಕೊಳ್ಳುವೆನು; ಇಸ್ರಾಯೇಲಿನ ಮನೆತನದ ರಾಜ್ಯವು ನಿಂತುಹೋಗುವಂತೆ ಮಾಡು ವೆನು.