Home Bibles 2 ಅರಸುಗಳು 4:7 · ಕನ್ನಡ ಬೈಬಲ್
2 ಅರಸುಗಳು 4:7 · ಕನ್ನಡ ಬೈಬಲ್

ಆಗ ಎಣ್ಣೆಯುಕ್ಕುವದು ನಿಂತು ಹೋಯಿತು. ಆಗ ಅವಳು ಬಂದು ದೇವರ ಮನುಷ್ಯನಿಗೆ ತಿಳಿಸಿದಳು. ಅವನು--ನೀನು ಹೋಗಿ ಆ ಎಣ್ಣೆಯನ್ನು ಮಾರಿ ನಿನ್ನ ಸಾಲವನ್ನು ತೀರಿಸಿ ಮಿಕ್ಕದ್ದರಿಂದ ನೀನೂ ನಿನ್ನ ಮಕ್ಕಳೂ ಜೀವನ ಮಾಡಿರಿ ಅಂದನು.

Cross references

1 ಅರಸುಗಳು 12:22

ಆದರೆ ದೇವರ ವಾಕ್ಯವು ದೇವರ ಮನುಷ್ಯ ನಾಗಿರುವ ಶೆಮಾಯನಿಗೆ ಉಂಟಾಯಿತು; ಏನಂದರೆ

2 ಅರಸುಗಳು 6:7

ಪ್ರವಾದಿಯು ಅವ ನಿಗೆ--ಅದನ್ನು ತೆಗೆದುಕೋ ಅಂದನು. ಹಾಗೆಯೇ ಅವನು ತನ್ನ ಕೈಯನ್ನು ಚಾಚಿ ಅದನ್ನು ತೆಗೆದುಕೊಂಡನು.

ಕೀರ್ತನೆಗಳು 37:21

ದುಷ್ಟನು ಸಾಲಮಾಡಿ ತಿರಿಗಿ ಸಲ್ಲಿಸುವದಿಲ್ಲ; ನೀತಿವಂತನು ದಯಾಳುವಾಗಿ ಕೊಡುತ್ತಾನೆ.

ರೋಮಾಪುರದವರಿಗೆ 12:17

ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವ ವಾದದ್ದೋ ಅದನ್ನೇ ಮಾಡುವವರಾಗಿರ್ರಿ.

ಫಿಲಿಪ್ಪಿಯವರಿಗೆ 4:8

ಕಡೇದಾಗಿ ಸಹೋದರರೇ, ಸತ್ಯವಾದವುಗಳು ಯಾವವೋ ಪ್ರಾಮಾಣಿಕವಾದವುಗಳು ಯಾವವೋ ನ್ಯಾಯವಾದವುಗಳು ಯಾವವೋ ಶುದ್ಧವಾದವುಗಳು ಯಾವವೋ ಪ್ರೀತಿಕರವಾದವುಗಳು ಯಾವವೋ ಮಾನ್ಯವಾದವುಗಳು ಯಾವವೋ ಅವುಗಳನ್ನು ಮತ್ತು ಸದ್ಗುಣವನ್ನೂ ಸ್ತುತ್ಯವಾದದ್ದನ್ನೂ ಯೊ

1 ತೆಸಲೋನಿಕದವರಿಗೆ 2:9

ಸಹೋದ ರರೇ, ನಾವು ನಿಮ್ಮಲ್ಲಿ ಯಾರ ಮೇಲೆಯೂ ಭಾರಹಾಕ ಬಾರದೆಂದು ಹಗಲಿರುಳು ದುಡಿದು ಜೀವನ ಮಾಡಿ ಕೊಳ್ಳುತ್ತಾ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವು; ಆ ನಮ್ಮ ಕಷ್ಟವೂ ಪ್ರಯಾಸವೂ ನಿಮ್ಮ ನೆನಪಿನಲ್ಲಿ ರುವದಷ್ಟೆ.

1 ತೆಸಲೋನಿಕದವರಿಗೆ 4:12

ಹೀಗಿದ್ದರೆ ನೀವು ಹೊರಗಿನವರ ಎದುರಿ ನಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳುವಿರಿ. ನಿಮಗೆ ಯಾವದಕ್ಕೂ ಕೊರತೆಯಿರುವದಿಲ್ಲ.

2 ತೆಸಲೋನಿಕದವರಿಗೆ 3:7

ನೀವು ನಮ್ಮನ್ನು ಅನುಸರಿಸಿ ಹೇಗೆ ನಡೆಯಬೇಕೆಂದು ನೀವೇ ಬಲ್ಲಿರಿ; ನಾವು ನಿಮ್ಮಲ್ಲಿ ಅಕ್ರಮವಾಗಿ ನಡೆಯಲಿಲ್ಲ;

Interlinear

Choose Theme