Home Bibles 2 ತೆಸಲೋನಿಕದವರಿಗೆ 3:7 · ಕನ್ನಡ ಬೈಬಲ್
2 ತೆಸಲೋನಿಕದವರಿಗೆ 3:7 · ಕನ್ನಡ ಬೈಬಲ್

ನೀವು ನಮ್ಮನ್ನು ಅನುಸರಿಸಿ ಹೇಗೆ ನಡೆಯಬೇಕೆಂದು ನೀವೇ ಬಲ್ಲಿರಿ; ನಾವು ನಿಮ್ಮಲ್ಲಿ ಅಕ್ರಮವಾಗಿ ನಡೆಯಲಿಲ್ಲ;

Cross references

ಸಾಮೇತಿಗಳು 31:18

ತನ್ನ ವ್ಯಾಪಾರದ ಸರಕು ಒಳ್ಳೇದೆಂದು ಆಕೆಯು ತಿಳು ಕೊಳ್ಳುತ್ತಾಳೆ; ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು.

1 ಕೊರಿಂಥದವರಿಗೆ 4:16

ಆದದರಿಂದ ನನ್ನನ್ನು ಹಿಂಬಾಲಿಸ ಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

1 ಕೊರಿಂಥದವರಿಗೆ 11:1

ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವೂ ನನ್ನನ್ನು ಅನುಸರಿಸುವವರಾಗಿರ್ರಿ.

ಫಿಲಿಪ್ಪಿಯವರಿಗೆ 3:17

ಸಹೋದರರೇ, ನೀವೆಲ್ಲರೂ ನನ್ನನ್ನು ಅನುಸರಿ ಸುವವರಾಗಿರ್ರಿ; ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಗುರುತಿ ಸಿರಿ.

ಫಿಲಿಪ್ಪಿಯವರಿಗೆ 4:9

ನೀವು ಯಾವದನ್ನು ನನ್ನಿಂದ ಕಲಿತು ಹೊಂದಿದಿರೋ ಮತ್ತು ಯಾವದನ್ನು ನನ್ನಲ್ಲಿ ಕೇಳಿಕಂಡಿರೋ ಅದನ್ನೇ ಮಾಡುತ್ತಾ ಬನ್ನಿರಿ. ಆಗ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.

1 ತೆಸಲೋನಿಕದವರಿಗೆ 1:6

ಇದಲ್ಲದೆ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ವಾಕ್ಯವನ್ನು ಅಂಗೀಕರಿಸಿ ನಮ್ಮನ್ನೂ ಕರ್ತನನ್ನೂ ಅನುಸರಿಸುವವರಾದಿರಿ.

1 ತೆಸಲೋನಿಕದವರಿಗೆ 2:10

ನಂಬುವವರಾದ ನಿಮ್ಮ ವಿಷಯದಲ್ಲಿ ನಾವು ಎಷ್ಟೋ ಶುದ್ಧರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬದಕ್ಕೆ ನೀವು ಸಾಕ್ಷಿಗಳು. ದೇವರೂ ಸಾಕ್ಷಿ.

2 ತೆಸಲೋನಿಕದವರಿಗೆ 3:6

ಸಹೋದರರೇ, ನಮ್ಮಿಂದ ಹೊಂದಿದ ಬೋಧನೆ ಯನ್ನು ಅನುಸರಿಸದೆ ಅಕ್ರಮವಾಗಿ ನಡೆಯುವ ಪ್ರತಿ ಸಹೋದರನಿಗೆ ನೀವು ದೂರವಾಗಿರಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾವು ನಿಮಗೆ ಆಜ್ಞಾಪಿಸುತ್ತೇವೆ.

2 ತೆಸಲೋನಿಕದವರಿಗೆ 3:9

ನಿಮ್ಮಿಂದ ಪೋಷಣೆ ಹೊಂದು ವದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ. ನೀವು ನಮ್ಮನ್ನು ಅನುಸರಿಸುವದಕ್ಕಾಗಿ ನಿಮಗೆ ಮಾದರಿ ಯಾಗಿರೋಣವೆಂದೇ ಮಾಡಿದೆವು;

1 ತಿಮೋಥೆಯ 4:12

ಯೌವನಸ್ಥನೆಂದು ನಿನ್ನನ್ನು ಅಸಡ್ಡೆ ಮಾಡುವದಕ್ಕೆ ಯಾರಿಗೂ ಅವಕಾಶಕೊಡದೆ ನಂಬು ವವರಿಗೆ ನಡೆ ನುಡಿ ಪ್ರೀತಿ ಆತ್ಮ ನಂಬಿಕೆ ಶುದ್ಧತ್ವದಲ್ಲಿ ನೀನೇ ಮಾದರಿಯಾಗಿರು.

ತೀತ 2:7

ಎಲ್ಲಾ ವಿಷಯಗಳಲ್ಲಿ ನಿನ್ನನ್ನು ಸತ್ಕಾರ್ಯಗಳ ಮಾದರಿಯಾಗಿ ತೋರಿಸಿಕೊಂಡು ಬೋಧನೆಯಲ್ಲಿ ನಿರ್ಮಲತ್ವವನ್ನೂ ಗೌರವವನ್ನೂ ಯಥಾರ್ಥತೆಯನ್ನೂ ಖಂಡಿಸಲಾಗದಂಥ ಸ್ವಸ್ಥವಾದ ಮಾತನ್ನೂ ತೋರಿಸು;

1 ಪೇತ್ರ 5:3

ದೇವರ ಸ್ವಾಸ್ಥ್ಯದ ಮೇಲೆ ದೊರೆತನಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ.

Interlinear

Choose Theme