Home Bibles 2 ಅರಸುಗಳು 20:14 · ಕನ್ನಡ ಬೈಬಲ್
2 ಅರಸುಗಳು 20:14 · ಕನ್ನಡ ಬೈಬಲ್

ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ--ಆ ಮನುಷ್ಯರು ಏನು ಹೇಳಿದರು? ಅವರು ಎಲ್ಲಿಂದ ನಿನ್ನ ಬಳಿಗೆ ಬಂದರು ಅಂದನು. ಹಿಜ್ಕೀಯನು--ಅವರು ದೂರ ದೇಶದಿಂದ ಅಂದರೆ ಬಾಬೆಲಿನಿಂದ ನನ್ನ ಬಳಿಗೆ ಬಂದಿದ್ದಾರೆ ಅಂದನು.

Cross references

ಅಂಕೆಗಳ ಪುಸ್ತಕ 22:9

ದೇವರು ಬಿಳಾಮನ ಬಳಿಗೆ ಬಂದು--ನಿನ್ನ ಸಂಗಡ ಇರುವ ಈ ಮನುಷ್ಯರು ಯಾರು ಅಂದನು.

ದ್ವಿತೀಯೋಪದೇಶಕಾಂಡ 28:49

ಕರ್ತನು ದೂರದಿಂದ ಅಂದರೆ ಭೂಮಿಯ ಅಂತ್ಯದಿಂದ ಹಾರುವ ಹದ್ದಿಗೆ ಸಮಾನವಾದ ಜನಾಂಗ ವನ್ನೂ ನಿನಗೆ ತಿಳಿಯದ ಭಾಷೆಯ ಜನಾಂಗವನ್ನೂ

ಯೆಹೋಶುವ 9:6

ಅವರು ಗಿಲ್ಗಾಲಿನಲ್ಲಿ ಇರುವ ಪಾಳೆಯಕ್ಕೆ ಯೆಹೋಶುವನ ಬಳಿಗೆ ಹೋಗಿ ಅವ ನಿಗೂ ಇಸ್ರಾಯೇಲ್ಯರಿಗೂ--ನಾವು ದೂರ ದೇಶ ದಿಂದ ಬಂದೆವು; ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿರಿ ಅಂದರು.

ಯೆಹೋಶುವ 9:9

ಅವರು ಅವನಿಗೆ--ನಿಮ್ಮ ದೇವರಾದ ಕರ್ತನ ಹೆಸರಿಗೋಸ್ಕರ ನಿನ್ನ ಸೇವಕರಾದ ನಾವು ದೂರದೇಶದಿಂದ ಬಂದೆವು. ಯಾಕಂದರೆ ಆತನ ಕೀರ್ತಿಯನ್ನೂ ಆತನು ಐಗುಪ್ತದಲ್ಲಿ ಮಾಡಿದ ಎಲ್ಲವನ್ನೂ

2 ಸಮುವೇಲ 12:7

ಆಗ ನಾತಾನನು ದಾವೀದನಿಗೆ--ನೀನೇ ಆ ಮನು ಷ್ಯನು. ಇಸ್ರಾಯೇಲಿನ ದೇವರಾದ ಕರ್ತನು--ನಾನು ನಿನ್ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಮಾಡಿ ನಿನ್ನನ್ನು ಸೌಲನ ಕೈಗೆ ತಪ್ಪಿಸಿಬಿಟ್ಟು

2 ಅರಸುಗಳು 5:25

ಆಗ ಇವನು ಒಳಗೆ ಪ್ರವೇಶಿಸಿ ತನ್ನ ಯಜಮಾನನ ಮುಂದೆ ನಿಂತನು. ಎಲೀಷನು ಅವನಿಗೆ--ಗೇಹಜಿಯೇ, ಎಲ್ಲಿಂದ ಬಂದಿ ಅಂದನು. ಅದಕ್ಕವನು--ನಿನ್ನ ಸೇವಕನು ಎಲ್ಲಿಗೂ ಹೋಗಲಿಲ್ಲ ಅಂದನು.

2 ದಿನವೃತ್ತಾಂತ 16:7

ಅದೇ ಕಾಲದಲ್ಲಿ ಪ್ರವಾದಿಯಾದ ಹನಾನಿಯು ಯೆಹೂದದ ಅರಸನಾದ ಆಸನ ಬಳಿಗೆ ಬಂದು ಅವನಿಗೆ -- ನೀನು ನಿನ್ನ ದೇವರಾದ ಕರ್ತನ ಮೇಲೆ ಆತುಕೊಳ್ಳದೆ ಅರಾಮಿನ ಅರಸನ ಮೇಲೆ ಆತು ಕೊಂಡದ್ದರಿಂದ ಅರಾಮಿನ ಅರಸನ ಸೈನ್ಯವು ನಿನ್ನ ಕೈಯಿಂದ ತಪ್ಪಿಸಿಕೊಂಡಿತು.

2 ದಿನವೃತ್ತಾಂತ 25:7

ಆಗ ದೇವರ ಮನುಷ್ಯ ನಾದ ಒಬ್ಬನು ಅವನ ಬಳಿಗೆ ಬಂದು ಅವನಿಗೆಅರಸನೇ, ಇಸ್ರಾಯೇಲಿನ ಸೈನ್ಯವು ನಿನ್ನ ಸಂಗಡ ಹೋಗದೆ ಇರಲಿ; ಯಾಕಂದರೆ ಕರ್ತನು ಇಸ್ರಾಯೇ ಲ್ಯರಾದ ಎಫ್ರಾಯಾಮನ ಸಮಸ್ತ ಮಕ್ಕಳ ಸಂಗಡ ಇರುವದಿಲ್ಲ.

2 ದಿನವೃತ್ತಾಂತ 25:15

ಆದಕಾರಣ ಕರ್ತನ ಕೋಪವು ಅಮಚ್ಯನ ಮೇಲೆ ಹೊತ್ತಿತು; ಆತನು ಅವನ ಬಳಿಗೆ ಪ್ರವಾದಿ ಯನ್ನು ಕಳುಹಿಸಿದನು. ಅವನು ಅವನಿಗೆ--ತಮ್ಮ ಜನ ರನ್ನು ನಿನ್ನ ಕೈಯಿಂದ ತಪ್ಪಿಸಲಾರದ ದೇವರುಗಳನ್ನು ನೀನು ಹುಡುಕುವದೇನು ಅಂದನು.

ಕೀರ್ತನೆಗಳು 141:5

ನೀತಿವಂತನು ನನ್ನನ್ನು ಹೊಡೆಯಲಿ; ಅದು ಕರುಣೆಯೇ; ಅವನು ನನ್ನನ್ನು ಗದರಿಸಲಿ; ಅದು ನನ್ನ ತಲೆಗೆ ಶ್ರೇಷ್ಠ ಎಣ್ಣೆಯೇ. ಅದನ್ನು ನನ್ನ ತಲೆ ಬೇಡವೆನ್ನದಿರಲಿ; ಆದರೆ ಇನ್ನೂ ಅವರ ಕೇಡುಗಳಲ್ಲಿ ನನ್ನ ಪ್ರಾರ್ಥನೆ ಇರುವದು.

ಸಾಮೇತಿಗಳು 25:12

ಕೇಳುವ ಕಿವಿಗೆ ಜ್ಞಾನಿಯ ಗದರಿಕೆಯು ಹೇಗೋ ಹಾಗೇ ಬಂಗಾ ರದ ಕಿವಿಯ ಓಲೆಯು ಚೊಕ್ಕಬಂಗಾರದ ಆಭರಣ ದಂತಿದೆ.

ಯೆಶಾಯ 13:5

ಕರ್ತನೂ ಆತನ ರೋಷಕ್ಕೆ ಆಯುಧಗಳಾದವರೂ ದೂರ ದೇಶದಿಂದ, ಅಂದರೆ ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವದಕ್ಕಾಗಿ ಬರುತ್ತಾರೆ.

ಯೆಶಾಯ 39:3

ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀ ಯನ ಬಳಿಗೆ ಬಂದು ಅವನಿಗೆ--ಈ ಮನುಷ್ಯರು ಎಲ್ಲಿಂದ ನಿನ್ನ ಬಳಿಗೆ ಬಂದರು, ಅವರು ನಿನಗೆ ಏನು ಹೇಳಿದರು ಎಂದು ಕೇಳಲು, ಹಿಜ್ಕೀಯನು--ಅವರು ಬಹುದೂರ ದೇಶವಾದ ಬಾಬೆಲಿನಿಂದ ಬಂದರು ಎಂದು ಹೇಳಿದನು.

ಯೆರೆಮಿಯ 26:18

ಆದರೆ ಅವರು ಪ್ರವಾದಿಗಳಾಗಿದ್ದರೆ, ದೇವರ ವಾಕ್ಯವು ಅವರ ಸಂಗಡ ಇದ್ದರೆ ಕರ್ತನ ಆಲಯದಲ್ಲಿಯೂ ಯೆಹೂ ದದ ಅರಸನ ಮನೆಯಲ್ಲಿಯೂ ಯೆರೂಸಲೇಮಿ ನಲ್ಲಿಯೂ ಉಳಿದ ಪಾತ್ರೆಗಳು ಬಾಬೆಲಿಗೆ ಹೋಗದ ಹಾಗೆ ಅವರು ಸೈನ್ಯಗಳ ಕರ್ತನಿಗೆ ವಿಜ್ಞಾಪನೆ ಮಾಡಲಿ.

ಆಮೋಸ 7:12

ಇನ್ನೂ ಅಮಚ್ಯನು ಆಮೋಸನಿಗೆ ಹೇಳಿದ್ದೇನಂದರೆ--ಓ ದರ್ಶಿಯೇ, ಯೆಹೂದ ದೇಶಕ್ಕೆ ಓಡಿಹೋಗು; ಅಲ್ಲಿ ರೊಟ್ಟಿ ತಿಂದು ಅಲ್ಲಿಯೇ ಪ್ರವಾದಿಸು.

ಮಾರ್ಕ 6:18

ಆದರೆ ಯೋಹಾ ನನು ಹೆರೋದನಿಗೆ--ನಿನ್ನ ಸಹೋದರನ ಹೆಂಡತಿ ಯನ್ನು ಇಟ್ಟುಕೊಂಡಿರುವದು ನ್ಯಾಯವಲ್ಲವೆಂದು ಹೇಳಿ ದ್ದನು.

Interlinear

Choose Theme