Home Bibles 2 ಅರಸುಗಳು 13:12 · ಕನ್ನಡ ಬೈಬಲ್
2 ಅರಸುಗಳು 13:12 · ಕನ್ನಡ ಬೈಬಲ್

ಯೆಹೋವಾಷನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಅವನು ಯೆಹೂದದ ಅರಸನಾದ ಅಮಚ್ಯನ ಸಂಗಡ ಯುದ್ಧಮಾಡಿದ ಅವನ ಪರಾ ಕ್ರಮವೂ ಇಸ್ರಾಯೇಲಿನ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?

Cross references

1 ಅರಸುಗಳು 14:19

ಯಾರೊಬ್ಬಾಮನ ಮಿಕ್ಕಾದ ಕ್ರಿಯೆಗಳೂ ಅವನು ಯುದ್ಧ ಮಾಡಿದ್ದೂ ಆಳಿದ್ದೂ--ಇಗೋ, ಇವು ಇಸ್ರಾಯೇಲ್ಯರ ಅರಸುಗಳ ವೃತಾಂತಗಳ ಪುಸ್ತಕ ದಲ್ಲಿ ಬರೆಯಲ್ಪಟ್ಟಿವೆ.

2 ಅರಸುಗಳು 1:18

ಅಹಜ್ಯನು ಮಾಡಿದ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?

2 ಅರಸುಗಳು 13:14

ಆಗ ಎಲೀಷನು ಮರಣಕರವಾದ ವ್ಯಾಧಿ ಯಿಂದ ಬಿದ್ದು ಸತ್ತಾಗ ಇಸ್ರಾಯೇಲಿನ ಅರಸನಾದ ಯೋವಾಷನು ಅವನ ಬಳಿಗೆ ಬಂದು ಅವನ ಮುಂದೆ ಬಿದ್ದು ಅತ್ತು ಅವನಿಗೆ--ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲಿನ ರಥವೂ ಅದರ ಕುದುರೆ ರಾಹುತನೂ ಆದವನೇ ಅಂದನು.

2 ಅರಸುಗಳು 14:8

ಆಗ ಅಮಚ್ಯನು ಇಸ್ರಾಯೇಲ್ಯರ ಅರಸನಾದ ಯೇಹುವಿನ ಮಗನಾಗಿರುವ ಯೆಹೋವಾಹಾಜನ ಮಗನಾದ ಯೋವಾಷನ ಬಳಿಗೆ ಸೇವಕರನ್ನು ಕಳು ಹಿಸಿ--ನಾವು ಒಬ್ಬರ ಮುಖವನ್ನು ಒಬ್ಬರು ನೋಡುವ ಹಾಗೆ ಬಾ ಎಂದು ಹೇಳಿದನು.

2 ಅರಸುಗಳು 14:11

ಆದದರಿಂದ ಇಸ್ರಾಯೇಲ್ಯರ ಅರಸನಾದ ಯೋವಾಷನು ಹೊರ ಟನು. ಅವನೂ ಯೆಹೂದದ ಅರಸನಾದ ಅಮ ಚ್ಯನೂ ಯೆಹೂದಕ್ಕೆ ಸೇರಿದ ಬೇತ್ಷೆಮೆಷಿನ ಬಳಿಯಲ್ಲಿ ಒಬ್ಬರಿಗೊಬ್ಬರು ಎದುರುಗೊಂಡರು.

2 ಅರಸುಗಳು 14:15

ಯೋವಾಷನು ಮಾಡಿದ ಇತರ ಕ್ರಿಯೆ ಗಳೂ ಅವನ ಪರಾಕ್ರಮವೂ ಅವನು ಯೆಹೂದ ಅರಸನಾದ ಅಮಚ್ಯನ ಸಂಗಡ ಯುದ್ಧಮಾಡಿದ್ದೂ ಇಸ್ರಾಯೇಲ್ಯರ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?

2 ಅರಸುಗಳು 14:16

ಯೋವಾಷನು ತನ್ನ ಪಿತೃ ಗಳ ಸಂಗಡ ನಿದ್ರಿಸಿದನು; ಅವನನ್ನು ಸಮಾರ್ಯ ದಲ್ಲಿ ಇಸ್ರಾಯೇಲಿನ ಅರಸುಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು; ಅವನ ಮಗನಾದ ಯಾರೊಬ್ಬಾಮನು ಅವನಿಗೆ ಬದಲಾಗಿ ಅರಸನಾದನು.

2 ಅರಸುಗಳು 14:25

ಇದ ಲ್ಲದೆ ಇಸ್ರಾಯೇಲಿನ ದೇವರಾದ ಕರ್ತನು ಗತ್‌ಹೇಫೆ ರಿನವನಾದ ಪ್ರವಾದಿಯಾಗಿರುವ ಅಮಿತ್ತೈನ ಮಗ ನಾದ ಯೋನನೆಂಬ ತನ್ನ ಸೇವಕನ ಮುಖಾಂತರ ಹೇಳಿದ ವಾಕ್ಯದ ಪ್ರಕಾರವೇ ಅವನು ಹಮಾತಿನ ಪ್ರವೇಶ ಮೊದಲುಗೊಂಡು ಬಯಲಿನ ಸಮುದ್ರದ ವರೆಗೂ ಇರುವ ಇಸ್ರಾಯೇಲಿನ ಮೇರೆಯನ್ನು ತಿರಿಗಿ ತಕ್ಕೊಂಡನು.

2 ದಿನವೃತ್ತಾಂತ 25:17

ಆಗ ಯೆಹೂದದ ಅರಸನಾದ ಅಮಚ್ಯನು ಆಲೋಚನೆ ಕೇಳಿ, ಇಸ್ರಾಯೇಲಿನ ಅರಸನಾದ ಯೇಹುವಿನ ಮಗನಾದ ಯೆಹೋವಾಹಾಜನ ಮಗ ನಾದ ಯೋವಾಷನಿಗೆ--ನಾವು ಒಬ್ಬರ ಮುಖ ವನ್ನು ಒಬ್ಬರು ನೋಡೋಣ ಬಾ ಎಂದು ಹೇಳಿ ಕಳುಹಿಸಿದನು.

2 ದಿನವೃತ್ತಾಂತ 25:21

ಹಾಗೆಯೇ ಇಸ್ರಾಯೇಲಿನ ಅರಸನಾದ ಯೋವಾಷನು ಹೊರಟು ಹೋದನು; ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದಕ್ಕೆ ಸೇರಿದ ಬೇತ್ಷೆಮೆಷಿನ ಬಳಿಯಲ್ಲಿ ಅವರು ಒಬ್ಬನ ಮುಖವನ್ನು ಒಬ್ಬನು ನೋಡಿದನು.

2 ದಿನವೃತ್ತಾಂತ 25:22

ಯೆಹೂದದ ವರು ಇಸ್ರಾಯೇಲಿನವರ ಮುಂದೆ ಸೋತು ತಮ್ಮತಮ್ಮ ಗುಡಾರಕ್ಕೆ ಓಡಿಹೋದರು.

Interlinear

Choose Theme