ಆಗ ಯೆಹೂದದ ಅರಸನಾದ ಅಮಚ್ಯನು ಆಲೋಚನೆ ಕೇಳಿ, ಇಸ್ರಾಯೇಲಿನ ಅರಸನಾದ ಯೇಹುವಿನ ಮಗನಾದ ಯೆಹೋವಾಹಾಜನ ಮಗ ನಾದ ಯೋವಾಷನಿಗೆ--ನಾವು ಒಬ್ಬರ ಮುಖ ವನ್ನು ಒಬ್ಬರು ನೋಡೋಣ ಬಾ ಎಂದು ಹೇಳಿ ಕಳುಹಿಸಿದನು.
Cross references
ದಾವೀದನು ತನ್ನ ಹೃದಯದಲ್ಲಿ--ನಾನು ಎಂದಿಗಾದರೂ ಒಂದು ದಿನ ಸೌಲನ ಕೈಯಿಂದ ಮಡಿದುಹೋಗುತ್ತೇನೆ. ನಾನು ತ್ವರೆಯಾಗಿ ಫಿಲಿಷ್ಟಿಯರ ದೇಶಕ್ಕೆ ತಪ್ಪಿಸಿಕೊಂಡು ಓಡಿಹೋಗುವ ದಕ್ಕಿಂತ ನನಗೆ ಉತ್ತಮವಾದ ಕಾರ್ಯವಿಲ್ಲ. ಸೌಲನು ನನ್ನನ್ನು ಇಸ್ರಾಯೇಲಿನಲ್ಲಿ ಇನ್ನು ಹುಡುಕಲು ದಿಕ್ಕು ಕಾಣದೆ ಹೋಗುವನು. ಈ ಪ್ರಕಾರ ನಾನು ಅವನ ಕೈಯಿಂದ ತಪ್ಪಿಸಿಕೊಂಡು ಹೋಗುವೆನು ಅಂದು ಕೊಂಡನು.
ಆಗ ಅಬ್ನೇರನು ಯೋವಾಬನಿಗೆ--ಯೌವನಸ್ಥರು ಎದ್ದು ನಮ್ಮ ಮುಂದೆ ಆಡಲಿ ಅಂದನು. ಅದಕ್ಕೆ ಯೋವಾಬನು--ಅವರು ಏಳಲಿ ಅಂದನು.
ಆಗ ಅಮಚ್ಯನು ಇಸ್ರಾಯೇಲ್ಯರ ಅರಸನಾದ ಯೇಹುವಿನ ಮಗನಾಗಿರುವ ಯೆಹೋವಾಹಾಜನ ಮಗನಾದ ಯೋವಾಷನ ಬಳಿಗೆ ಸೇವಕರನ್ನು ಕಳು ಹಿಸಿ--ನಾವು ಒಬ್ಬರ ಮುಖವನ್ನು ಒಬ್ಬರು ನೋಡುವ ಹಾಗೆ ಬಾ ಎಂದು ಹೇಳಿದನು.
ಆದರೆ ಅವರು ತಮ್ಮ ಸಂಗಡ ಯುದ್ಧಕ್ಕೆ ಹೋಗದ ಹಾಗೆ ಅಮಚ್ಯನು ಹಿಂದಕ್ಕೆ ಕಳುಹಿಸಿದ ಗುಂಪಿನವರು ಯೆಹೂದದ ಪಟ್ಟಣಗಳ ಮೇಲೆ ಬಿದ್ದು ಸಮಾರ್ಯ ಮೊದಲುಗೊಂಡು ಬೇತ್ಹೋರೋನಿನ ಮಟ್ಟಿಗೂ ಮೂರು ಸಾವಿರ ಮಂದಿಯನ್ನು ಹೊಡೆದುಬಿಟ್ಟು ಬಹುಕೊಳ್ಳೆಯನ್ನು ತೆಗೆದುಕೊಂಡರು.
ಕಲಹವನ್ನು ತಡೆಯುವವನು ಮಾನಕ್ಕೆ ಯೋಗ್ಯನು; ಪ್ರತಿಯೊಬ್ಬ ಬುದ್ಧಿಹೀನನು ತಲೆಹಾಕು ತ್ತಾನೆ.
ಅವರು ಆ ದಿವಸಗಳನ್ನು ಮುಗಿಸಿ ಕೊಂಡು ಹಿಂದಿರುಗುವಾಗ ಬಾಲಕನಾದ ಯೇಸುವು ಹಿಂದೆ ಯೆರೂಸಲೇಮಿನಲ್ಲಿಯೇ ಉಳಿದನು; ಅದು ಯೋಸೇಫನಿಗೂ ಆತನ ತಾಯಿಗೂ ತಿಳಿದಿರಲಿಲ್ಲ.