ಯೆಹೂ ದದ ಅರಸನಾದ ಅಹಜ್ಯನ ಸಹೋದರರನ್ನು ಕಂಡು ಅವರಿಗೆ--ನೀವು ಯಾರು ಅಂದನು. ಅದಕ್ಕವರು--ನಾವು ಅಹಜ್ಯನ ಸಹೋದರರು; ಅರಸನ ಮಕ್ಕ ಳನ್ನೂ ರಾಣಿಯ ಮಕ್ಕಳನ್ನೂ ವಂದಿಸಲು ಹೋಗುತ್ತೇವೆ ಅಂದರು.
Cross references
ಯೆಹೋರಾಮನು ತನ್ನ ಪಿತೃಗಳ ಬಳಿಯಲ್ಲಿ ದಾವೀದನ ಪಟ್ಟಣದಲ್ಲಿ ಹೂಣಿಡಲ್ಪಟ್ಟನು; ಅವನ ಮಗನಾದ ಅಹಜ್ಯನು ಅವನಿಗೆ ಬದಲಾಗಿ ಅರಸನಾದನು.
ಅರಸನಾದ ಯೋರಾಮನು ಅರಾಮ್ಯರ ದೇಶದ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಿದಾಗ ರಾಮೋ ತಿನಲ್ಲಿ ಅರಾಮ್ಯರು ತನ್ನನ್ನು ಹೊಡೆದ ಗಾಯಗಳನ್ನು ಗುಣಮಾಡಿಕೊಳ್ಳುವದಕ್ಕೆ ಇಜ್ರೇಲಿಗೆ ತಿರುಗಿ ಹೋದನು. ಆಗ ಅಹಾಬನ ಮಗನಾದ ಯೋರಾ ಮನು ಇಜ್ರೇಲಿನಲ್ಲಿ ಅಸ್ವಸ್ಥನಾಗಿರುವದರಿಂದ ಯೆಹೂದದ ಅರಸನಾಗಿರುವ ಯೆಹೋರಾಮನ ಮಗನಾದ ಅಹಜ್ಯನು ಅವನನ್ನು ನೋಡಲು ಅಲ್ಲಿಗೆ ಹೋದನು.
ಯೋರಾಮನು ರಥಹೂಡಬೇಕೆಂದು ಹೇಳಿದನು. ಅವನ ರಥವು ಸಿದ್ಧವಾಯಿತು. ಆಗ ಇಸ್ರಾಯೇಲಿನ ಅರಸನಾದ ಯೋರಾಮನೂ ಯೆಹೂ ದದ ಅರಸನಾದ ಅಹಜ್ಯನೂ ಹೊರಟು ಅವನವನು ತನ್ನ ತನ್ನ ರಥದಲ್ಲಿ ಏರಿ ಯೇಹುವಿಗೆ ಎದುರಾಗಿ ಹೊರಟು ಇಜ್ರೇಲ್ಯನಾದ ನಾಬೋತನ ಹೊಲದಲ್ಲಿ ಅವನನ್ನು ಸಂಧಿಸಿದರು.
ಆಗ ಅವರು ಯೆಹೂದದ ಮೇಲೆ ಬಂದು ಅದರಲ್ಲಿ ಹೊಕ್ಕು ಅರಸನ ಮನೆಯಲ್ಲಿ ಸಿಕ್ಕಿದ ಸಮಸ್ತ ಆಸ್ತಿಯನ್ನೂ ಅವನ ಕುಮಾರರನ್ನೂ ಹೆಂಡತಿಯರನ್ನೂ ತಕ್ಕೊಂಡು ಹೋದರು. ಆದದರಿಂದ ಅವನ ಕುಮಾರರಲ್ಲಿ ಚಿಕ್ಕವ ನಾದ ಯೆಹೋವಾಹಾಜನು ಹೊರತು ಅವನಿಗೆ ಕುಮಾರರು ಯಾರೂ ಬಿಡಲ್ಪಡಲಿಲ್ಲ.
ಯೆರೂಸಲೇಮಿನ ನಿವಾಸಿಗಳು ಅವನಿಗೆ ಬದಲಾಗಿ ಅವನ ಚಿಕ್ಕ ಮಗನಾದ ಅಹಜ್ಯ ನನ್ನು ಅರಸನಾಗಿ ಮಾಡಿದರು. ದಂಡಿಗೆ ಬಂದ ಅರಬ್ಬಿಯರ ಗುಂಪು ಹಿರಿಯರನ್ನೆಲ್ಲಾ ಕೊಂದುಹಾಕಿ ದರು. ಹೀಗೆ ಯೆಹೋರಾಮನ ಮಗನಾದ ಅಹಜ್ಯನು ಯೆಹೂದದ ಅರಸನಾಗಿ ಆಳಿದನು.