Home Bibles ಮಾರ್ಕ 9:39 · ಕನ್ನಡ ಬೈಬಲ್
ಮಾರ್ಕ 9:39 · ಕನ್ನಡ ಬೈಬಲ್

ಆದರೆ ಯೇಸು--ಅವನಿಗೆ ಅಡ್ಡಿಮಾಡಬೇಡಿರಿ; ಯಾಕಂದರೆ ನನ್ನ ಹೆಸರಿನಲ್ಲಿ ಅದ್ಭುತಕಾರ್ಯವನ್ನು ಮಾಡಿ ನನ್ನ ವಿಷಯದಲ್ಲಿ ಹಗುರಾಗಿ ಕೆಟ್ಟದ್ದನ್ನು ಮಾತನಾಡುವ ಒಬ್ಬನಾದರೂ ಇಲ್ಲ.

Cross references

ಕೀರ್ತನೆಗಳು 109:20

ಇದು ನನ್ನ ಪ್ರಾಣಕ್ಕೆ ವಿರೋಧವಾಗಿ ಕೇಡು ಮಾತಾಡುವ ನನ್ನ ಎದುರಾಳಿಗಳಿಗೆ ಕರ್ತನಿಂದ ಪ್ರತಿಫಲವಾಗಿರಲಿ.

ಮತ್ತಾಯ 7:22

ಆ ದಿನದಲ್ಲಿ--ಕರ್ತನೇ, ಕರ್ತನೇ ನಿನ್ನ ಹೆಸರಿನಲ್ಲಿ ನಾವು ಪ್ರವಾದಿಸಲಿಲ್ಲವೇ? ಮತ್ತು ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ಇದಲ್ಲದೆ ನಿನ್ನ ಹೆಸರಿನಲ್ಲಿ ಬಹಳ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಬಹಳ ಜನರು ನನಗೆ ಹೇಳುವರು.

ಮತ್ತಾಯ 13:28

ಅವನು ಅವರಿಗೆ--ಒಬ್ಬ ವೈರಿ ಯು ಇದನ್ನು ಮಾಡಿದ್ದಾನೆ ಅಂದನು. ಆದರೆ ಸೇವಕರು ಅವನಿಗೆ--ಹಾಗಾದರೆ ನಾವು ಹೋಗಿ ಅವುಗಳನ್ನು ಕೂಡಿಸುವಂತೆ ನೀನು ಇಷ್ಟಪಡುತ್ತೀಯೋ ಎಂದು ಕೇಳಿದರು.

ಮಾರ್ಕ 10:13

ಆಗ ಕೆಲವರು ಚಿಕ್ಕ ಮಕ್ಕಳನ್ನು ಆತನು ಮುಟ್ಟಬೇಕೆಂದು ಆತನ ಬಳಿಗೆ ಅವುಗಳನ್ನು ತಂದರು; ಆದರೆ ಆತನ ಶಿಷ್ಯರು ತಂದವರನ್ನು ಗದರಿಸಿದರು.

ಅಪೋಸ್ತಲರ ಕೃತ್ಯಗಳು 19:13

ಆಗ ದೆವ್ವ ಬಿಡಿಸುವವರಾಗಿ ದೇಶಸಂಚಾರ ಮಾಡುತ್ತಿದ್ದ ಯೆಹೂದ್ಯರಲ್ಲಿ ಕೆಲವರು ದುರಾತ್ಮ ಹಿಡಿದವ ರಿಗೆ--ಪೌಲನು ಸಾರುವ ಯೇಸುವಿನ ಆಣೆ ಎಂದು ನಾವು ನಿಮಗೆ ಹೇಳುತ್ತೇವೆ ಎಂದು ಕರ್ತನಾದ ಯೇಸುವಿನ ಹೆಸರನ್ನು ಪ್ರಯೋಗ ಮಾಡುವದಕ್ಕೆ ತೊಡಗಿದರು.

1 ಕೊರಿಂಥದವರಿಗೆ 9:27

ಆದರೆ ನಾನು ಬೇರೆಯವರಿಗೆ ಸಾರಿದ ಮೇಲೆ ಯಾವ ವಿಧದಲ್ಲಿಯೂ ನಾನು ಭ್ರಷ್ಠನಾಗದಂತೆ ನನ್ನ ದೇಹವನ್ನು ಅಧೀನತೆಯಲ್ಲಿಟ್ಟು ಅದನ್ನು ಸ್ವಾಧೀನಪಡಿಸಿಕೊಳ್ಳುತ್ತೇನೆ.

1 ಕೊರಿಂಥದವರಿಗೆ 12:3

ಹೀಗಿರುವದರಿಂದ ನಾನು ನಿಮಗೆ ತಿಳಿಸುವದೇನಂದರೆ, ದೇವರಾತ್ಮನಿಂದ ಮಾತನಾಡುವ ಯಾವ ಮನುಷ್ಯನಾದರೂ ಯೇಸು ವನ್ನು ಶಾಪಗ್ರಸ್ತನೆಂದು ಹೇಳುವದಿಲ್ಲ; ಪವಿತ್ರಾತ್ಮ ನಿಂದಲೇ ಹೊರತು ಯಾವ ಮನುಷ್ಯನಾದರೂ ಯೇಸುವನ್ನು ಕರ್ತನೆಂದು ಹೇಳಲಾರನು.

1 ಕೊರಿಂಥದವರಿಗೆ 13:1

ನಾನು ಮನುಷ್ಯರ ಮತ್ತು ದೂತರ ಭಾಷೆಗಳನ್ನು ಆಡುವವನಾದರೂ ಪ್ರೀತಿ ಯಿಲ್ಲದವನಾಗಿದ್ದರೆ ನಾದಕೊಡುವ ಕಂಚೂ ಗಣಗಣಿ ಸುವ ತಾಳವೂ ಆಗಿದ್ದೇನೆ.

ಫಿಲಿಪ್ಪಿಯವರಿಗೆ 1:18

ಹೇಗಾದರೇನು? ಯಾವ ರೀತಿಯಿಂದಾದರೂ ಅಂದರೆ ಕಪಟದಿಂದಾ ಗಲಿ ಇಲ್ಲವೆ ಸತ್ಯದಿಂದಾಗಲಿ ಕ್ರಿಸ್ತನನ್ನು ಪ್ರಸಿದ್ಧಿಪಡಿ ಸುವದುಂಟು; ಇದಕ್ಕೆ ನಾನು ಸಂತೋಷಿಸುತ್ತೇನೆ ಹೌದು, ಮುಂದೆಯೂ ಸಂತೋಷಿಸುವೆನು.

Interlinear

Choose Theme