ಅವರು ಬಂದು ಈ ಆಲಯದಲ್ಲಿ ಪ್ರಾರ್ಥನೆ ಮಾಡಿದರೆ ನಿನ್ನ ಜನರಾದ ಇಸ್ರಾಯೇಲಿನ ಪ್ರಕಾರ ಭೂಲೋಕ ದಲ್ಲಿರುವ ಸಮಸ್ತರೂ ನಿನಗೆ ಭಯಪಟ್ಟು ನಿನ್ನ ಹೆಸ ರನ್ನು ತಿಳಿಯುವ ಹಾಗೆಯೂ ನಾನು ಕಟ್ಟಿಸಿದ ಈ ಆಲಯವು ನಿನ್ನ ಹೆಸರಿನಿಂದ ಕರೆಯಲ್ಪಟ್ಟಿತೆಂದು ಅವರು ತಿಳಿಯುವ ಹಾಗೆಯೂ ನೀನು ವಾಸಮಾಡುವ ಸ್ಥಳವಾದ ಆಕಾಶದಿಂದ ಕೇಳಿ ಪರದೇಶಸ್ಥನು ನಿನಗೆ ಬೇಡಿದ ಎಲ್ಲಾದರ ಹಾಗೆ ಅನುಗ್ರಹಿಸು.
Cross references
ಅವರು ನನ್ನ ಹೆಸರನ್ನು ಇಸ್ರಾಯೇಲ್ ಮಕ್ಕಳ ಮೇಲೆ ಇಡಬೇಕು. ನಾನೇ ಅವರನ್ನು ಆಶೀರ್ವದಿಸುವೆನು.
ಕರ್ತನು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವನು; ನಾನು ನಿನ್ನನ್ನು ಹೊಡೆದುಬಿಟ್ಟು ನಿನ್ನ ತಲೆಯನ್ನು ತೆಗೆದು ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು.
ನನ್ನ ಜನರಾದ ಇಸ್ರಾಯೇಲ್ಯರನ್ನು ಐಗುಪ್ತ ದೇಶದಿಂದ ಬರಮಾಡಿದ ದಿನ ಮೊದಲು ಗೊಂಡು ನನ್ನ ನಾಮವು ಅದರಲ್ಲಿ ಇರುವ ನಿಮಿತ್ತ ಮಂದಿರವನ್ನು ಕಟ್ಟುವದಕ್ಕೆ ಇಸ್ರಾಯೇಲಿನ ಸಮಸ್ತ ಗೋತ್ರಗಳೊಳಗಿಂದ ಪಟ್ಟಣವನ್ನು ನಾನು ಆದು ಕೊಳ್ಳದೆ ನನ್ನ ಜನರಾದ ಇಸ್ರಾಯೇಲಿನ ಮೇಲೆ ಇರಲು ನಾನು ದಾವೀದನನ್ನು ಆದುಕೊಂಡೆನು ಅಂದನು.
ಆದದ ರಿಂದ ಅವರು ಅವುಗಳನ್ನು ನಾಶಮಾಡಿದ್ದಾರೆ. ಆದರೆ ಈಗ ನಮ್ಮ ದೇವರಾದ ಕರ್ತನೇ, ನೀನೊಬ್ಬನೇ ದೇವರಾದ ಕರ್ತನಾಗಿದ್ದೀ ಎಂದು ಭೂಮಿಯ ಎಲ್ಲಾ ರಾಜ್ಯಗಳೂ ತಿಳಿಯುವ ಹಾಗೆ ನಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸು ಎಂಬದೇ.
ಇಲ್ಲವೆ ನನ್ನ ಜನರ ಮಧ್ಯದಲ್ಲಿ ಜಾಡ್ಯವನ್ನು ಕಳುಹಿಸಿದರೂ ನನ್ನ ಹೆಸರಿನಿಂದ ಕರೆಯಲ್ಪಟ್ಟ ನನ್ನ ಜನರು ತಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥನೆ ಮಾಡಿ ನನ್ನ ಮುಖವನ್ನು ಹುಡುಕಿ ತಮ್ಮ ದುರ್ಮಾರ್ಗಗಳಿಂದ ತಿರುಗಿದರೆ ನಾನು ಆಕಾಶದಿಂದ ಕೇಳಿ ಅವರ ಪಾಪವನ್ನು ಮನ್ನಿಸಿ ಅವರ ದೇಶವನ್ನು ಗುಣಮಾಡುವೆನು.
ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು.
ಶಾಂತ ವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ನಾನು ಹೆಚ್ಚಿಸಲ್ಪಡುವೆನು.ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
ಆಗ ನಿನ್ನ ಮಾರ್ಗವೂ ನಿನ್ನ ರಕ್ಷಣೆಯ ಸ್ವಸ್ಥತೆಯೂ, ಭೂಮಿಯಲ್ಲಿ, ಎಲ್ಲಾ ಜನಾಂಗಗಳಿಗೆ ತಿಳಿಯಲ್ಪಡು ವದು.
ಓ ಕರ್ತನೇ, ನೀನು ಉಂಟುಮಾಡಿದ ಜನಾಂಗಗಳೆಲ್ಲಾ ಬಂದು ನಿನ್ನನ್ನು ಆರಾಧಿಸಿ ನಿನ್ನ ಹೆಸರನ್ನು ಘನಪಡಿ ಸುವರು.
ಓ ಕರ್ತನೇ, ನಿನ್ನ ಬಾಯಿಯ ಮಾತುಗಳನ್ನು ಕೇಳುವಾಗ ಭೂಮಿಯ ಅರಸರೆಲ್ಲರೂ ನಿನ್ನನ್ನು ಕೊಂಡಾಡುವರು.
ಆ ದಿನದಲ್ಲಿ ಹುಡುಕುವ ಅನ್ಯಜನರಿಗೆ ಇಷ ಯನ ಬೇರು ಒಂದು ಗುರುತಾಗಿ ನಿಲ್ಲುವದು; ಅವನ ವಿಶ್ರಾಂತಿ ವೈಭವವುಳ್ಳದ್ದಾಗಿರುವದು.
ಆತನೇ ಈಗ ಹೀಗನ್ನುತ್ತಾನೆ--ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬನ ಕುಲಗಳನ್ನು ಉನ್ನತಪಡಿ ಸುವದೂ ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರಿಗಿ ಬರಮಾಡುವದೂ ಅಲ್ಪ ಕಾರ್ಯವೇ; ನನ್ನ ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ದಯಪಾಲಿಸುವೆನು.
ಓ ಹೆರದವಳೇ, ನೀನು ಹರ್ಷಧ್ವನಿಗೈ! ಪ್ರಸವವೇದನೆಯನ್ನನುಭವಿಸದವಳೇ, ಆನಂದ ಸ್ವರವನ್ನೆತ್ತಿ ಗಟ್ಟಿಯಾಗಿ ಕೂಗು! ಮದುವೆ ಯಾದವಳಿಗಿಂತ ಆಗದವಳಿಗೆ ಮಕ್ಕಳು ಹೆಚ್ಚು ಎಂದು ಕರ್ತನು ಹೇಳುತ್ತಾನೆ.
ನಾನು ನಿಮ್ಮ ತಂದೆಗಳಿಗೆ ನನ್ನ ಮಾತನ್ನು ಕೇಳಿರೆಂದು ಖಂಡಿತವಾಗಿ ಹೇಳಿದೆನು. ಅವರನ್ನು ಐಗುಪ್ತದೇಶದೊಳಗಿಂದ ಮೇಲೆ ಬರ ಮಾಡಿದ ದಿನ ಮೊದಲುಗೊಂಡು ಇಂದಿನವರೆಗೂ ಬೆಳಿಗ್ಗೆ ಎದ್ದು ಖಂಡಿತವಾಗಿ ಹೇಳಿದೆನು,
ಏಳನೆಯ ದೂತನು ತುತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ-- ಈ ಲೋಕದ ರಾಜ್ಯಗಳು ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯಗಳಾದವು; ಆತನು ಯುಗ ಯುಗಾಂತರಗಳಲ್ಲಿಯೂ ಆಳುವನು ಎಂದು ಹೇಳಿ ದವು.