Home Bibles ಯೆಶಾಯ 54:1 · ಕನ್ನಡ ಬೈಬಲ್
ಯೆಶಾಯ 54:1 · ಕನ್ನಡ ಬೈಬಲ್

ಓ ಹೆರದವಳೇ, ನೀನು ಹರ್ಷಧ್ವನಿಗೈ! ಪ್ರಸವವೇದನೆಯನ್ನನುಭವಿಸದವಳೇ, ಆನಂದ ಸ್ವರವನ್ನೆತ್ತಿ ಗಟ್ಟಿಯಾಗಿ ಕೂಗು! ಮದುವೆ ಯಾದವಳಿಗಿಂತ ಆಗದವಳಿಗೆ ಮಕ್ಕಳು ಹೆಚ್ಚು ಎಂದು ಕರ್ತನು ಹೇಳುತ್ತಾನೆ.

Cross references

1 ಸಮುವೇಲ 2:5

ತೃಪ್ತಿಪಟ್ಟವರು ರೊಟ್ಟಿಗೋಸ್ಕರ ಕೂಲಿ ಕೆಲಸಕ್ಕೆ ಹೋಗುತ್ತಾರೆ; ಹಸಿದವರು ತಿಂದು ತೃಪ್ತರಾದರು; ಬಂಜೆಯಾದವಳು ಏಳು ಮಂದಿ ಮಕ್ಕಳನ್ನು ಹೆತ್ತಳು, ಅನೇಕ ಮಂದಿ ಮಕ್ಕಳನ್ನು ಹೆತ್ತವಳು ಬಲಹೀನ ಳಾದಳು.

ಕೀರ್ತನೆಗಳು 67:3

ಓ ದೇವರೇ, ಜನರು ನಿನ್ನನ್ನು ಕೊಂಡಾಡಲಿ. ಜನರೆಲ್ಲಾ ನಿನ್ನನ್ನು ಕೊಂಡಾಡಲಿ.

ಕೀರ್ತನೆಗಳು 98:3

ತನ್ನ ಕರುಣೆ ಯನ್ನೂ ಸತ್ಯತೆಯನ್ನೂ ಇಸ್ರಾಯೇಲಿನ ಮನೆಗೋಸ್ಕರ ಜ್ಞಾಪಕ ಮಾಡಿಕೊಂಡಿದ್ದಾನೆ; ಭೂಮಿಯ ಕೊನೆಗಳೆಲ್ಲಾ ನಮ್ಮ ದೇವರ ರಕ್ಷಣೆಯನ್ನು ನೋಡಿವೆ.

ಕೀರ್ತನೆಗಳು 113:9

ಬಂಜೆಯಾದವಳನ್ನು ಮಕ್ಕಳ ಸಂತೋಷ ವುಳ್ಳ ತಾಯಿಯಾಗಿ ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾನೆ ಕರ್ತನನ್ನು ಸ್ತುತಿಸಿರಿ.

ಪರಮಗೀತ 8:8

ನಮಗೆ ಚಿಕ್ಕವಳಾದ ಒಬ್ಬ ಸಹೋದರಿ ಇದ್ದಾಳೆ; ಅವಳಿಗೆ ಸ್ತನಗಳಿಲ್ಲ. ಅವಳು ಕೇಳಲ್ಪಡುವ ದಿವಸದಲ್ಲಿ ನಾವು ನಮ್ಮ ಸಹೋದರಿಗೋಸ್ಕರ ಏನು ಮಾಡುವ?

ಯೆಶಾಯ 42:10

ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ಅದರ ನಿವಾಸಿಗಳೇ, ಕರ್ತನಿಗೆ ಹೊಸ ಹಾಡನ್ನು ಹಾಡಿರಿ. ಭೂಮಿಯ ಕಟ್ಟಕಡೆಯಿಂದ ಆತನಿಗೆ ಸ್ತೋತ್ರ ಮಾಡಿರಿ.

ಯೆಶಾಯ 44:23

ಓ ಆಕಾಶಗಳೇ, ಹಾಡಿರಿ; ಕರ್ತನು ತಾನೇ ಅದನ್ನು ಮಾಡಿದ್ದಾನೆ. ಭೂಮಿಯ ಅಧೋಭಾಗವೇ, ಆರ್ಭ ಟಿಸು; ಪರ್ವತಗಳೇ, ಓ ವನವೇ, ಅದರಲ್ಲಿರುವ ಎಲ್ಲಾ ಮರಗಳೇ, ಉತ್ಸಾಹ ಧ್ವನಿಮಾಡಿರಿ; ಯಾಕಂದರೆ ಕರ್ತನು ಯಾಕೋಬನ್ನು ವಿಮೋಚಿಸಿದ್ದಾನೆ. ಇಸ್ರಾ ಯೇಲಿನಲ್ಲಿ ತನ್ನನ್ನು ಮಹಿಮೆಪಡಿಸಿದ್ದಾನೆ.

ಯೆಶಾಯ 49:13

ಆಕಾಶವೇ, ಹರ್ಷಿಸು; ಭೂಮಿಯೇ, ಉಲ್ಲಾಸಪಡು! ಪರ್ವತ ಗಳೇ ಹರ್ಷಧ್ವನಿಗೈಯಿರಿ. ಯಾಕಂದರೆ ಕರ್ತನು ತನ್ನ ಜನರನ್ನು ಆದರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.

ಯೆಶಾಯ 49:20

ನೀನು ಕಳಕೊಂಡ ಮಕ್ಕಳ ಸ್ಥಳವು ನನಗೆ ಇಕ್ಕಟ್ಟಾಯಿತು; ನಾನು ವಾಸಿಸುವದಕ್ಕೆ ಸ್ಥಳ ಕೊಡು ಎಂದು ಹೇಳುವರು.

ಯೆಶಾಯ 55:12

ನೀವು ಆನಂದದೊಡನೆ ಹೋಗುವಿರಿ ಸಮಾಧಾನದಿಂದ ನಡಿಸಲ್ಪಡುವಿರಿ; ಪರ್ವತಗಳು ಮತ್ತು ಗುಡ್ಡಗಳು ನಿಮ್ಮ ಮುಂದೆ ಹರ್ಷಧ್ವನಿಗೈಯುವವು. ಹೊಲದ ಮರಗಳೆಲ್ಲಾ ಚಪ್ಪಾಳೆ ಹೊಡೆಯುವವು.ಮುಳ್ಳಿಗೆ ಬದಲಾಗಿ ಫರ್‌ (ತುರಾಯಿ) ಮರವು ಮತ್ತು ದತ್ತೂರಿಗೆ ಬದಲಾಗಿ ಸುವಾಸನೆ ಬೀರುವ ಮರವು ಹುಟ್ಟುವವು; ಅದು ಕರ್ತನ ಹೆಸರಿಗಾಗಿ ಮತ್ತು ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವದು.

ಯೆಶಾಯ 62:4

ಇನ್ನು ಮೇಲೆ ನೀನು ಬಿಡಲ್ಪಟ್ಟವಳೆಂದು ಹೇಳಲ್ಪಡುವದಿಲ್ಲ, ಇಲ್ಲವೆ ನಿನ್ನ ದೇಶಕ್ಕೆ ಹಾಳಾದದ್ದೆಂದು ಹೇಳಲ್ಪಡುವದಿಲ್ಲ: ಆದರೆ ನೀನು (ಹೆಫ್ಜೀಬಾ) ಮೆಚ್ಚಿದವಳೆಂದೂ ನಿನ್ನ ದೇಶವು (ಬೆಯೂಲಾ) ಮದುವೆಯಾದದ್ದೆಂದೂ ಕರೆಯಲ್ಪ ಡುವದು; ಯಾಕಂದರೆ ಕರ್ತನು ನಿನ್ನಲ್ಲಿ ಉಲ್ಲಾಸಿಸು ವನು; ನಿನ್ನ ದೇಶವು ಮದುವೆಯಾಗುವದು.

ಸೆಫನ್ಯ 3:14

ಓ ಚೀಯೋನಿನ ಕುಮಾರ್ತೆಯೇ, ಹಾಡು; ಇಸ್ರಾಯೇಲೇ ಆರ್ಭಟಿಸು; ಯೆರೂಸಲೇಮಿನ ಕುಮಾರ್ತೆಯೇ, ಪೂರ್ಣಹೃದಯ ದಿಂದ ಸಂಭ್ರಮಿಸಿ ಉಲ್ಲಾಸಪಡು.

ಜೆಕರ್ಯ 9:9

ಚೀಯೋನ್‌ ಕುಮಾರ್ತೆಯೇ, ಬಹಳವಾಗಿ ಉಲ್ಲಾಸಪಡು; ಯೆರೂಸಲೇಮಿನ ಕುಮಾರ್ತೆಯೇ, ಆರ್ಭಟಿಸು; ಇಗೋ, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನೀತಿವಂತನಾಗಿಯೂ ರಕ್ಷಿಸುವಾತ ನಾಗಿಯೂ ದೀನನಾಗಿಯೂ ಕತ್ತೆಯ ಮೇಲೆ ಹೌದು, ಕತ್ತೆಯ ಮರಿಯ ಮೇಲೆ ಹತ್ತಿದವನಾಗಿಯೂ ಬರು ತ್ತಾನೆ.

ಗಲಾತ್ಯದವರಿಗೆ 4:27

ಯಾಕಂದರೆ--ಬಂಜೆಯೇ, ಹೆರದವಳೇ, ಸಂತೋಷಿಸು; ಪ್ರಸವ ವೇದನೆ ಪಡದವಳೇ, ಸ್ವರವೆತ್ತಿ ಕೂಗು; ಯಾಕಂದರೆ ಗಂಡನುಳ್ಳವಳಿಗಿಂತ ಬಿಡಲ್ಪಟ್ಟವಳಿಗೆ ಎಷ್ಟೋ ಹೆಚ್ಚು ಮಕ್ಕಳಿದ್ದಾರೆಂದು ಬರೆದದೆ.

ಹೆಬ್ರಿಯರಿಗೆ 11:11

ಇದಲ್ಲದೆ ಸಾರಳು ಸಹ ವಾಗ್ದಾನ ಮಾಡಿದಾತ ನನ್ನು ನಂಬತಕ್ಕವನೆಂದು ತೀರ್ಮಾನಿಸಿ ತಾನು ಪ್ರಾಯ ವಿಾರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿ ಯಾಗುವದಕ್ಕೆ ಶಕ್ತಿಯನ್ನು ಹೊಂದಿ ಒಂದು ಮಗುವನ್ನು ಹೆತ್ತಳು.

ಪ್ರಕಟನೆ 7:9

ಇದಾದ ಮೇಲೆ ಇಗೋ, ನಾನು ನೋಡಲಾಗಿ ಸಮಸ್ತ ಜನಾಂಗ ಕುಲ ಪ್ರಜೆ ಭಾಷೆಗಳೊಳಗಿಂದ ಯಾರೂ ಎಣಿಸಲಾಗದಂತ ಮಹಾ ಸಮೂಹವು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡವರಾಗಿ ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡು ಸಿಂಹಾಸನದ ಮುಂದೆಯೂ ಕುರಿಮರಿಯಾದಾತನ ಮುಂದೆಯೂ

Interlinear

Choose Theme