ಕಂಬಗಳ ಮೇಲಿರುವ ಎರಡು ಬೋದಿಗೆಗಳನ್ನೂ ಮುಚ್ಚತಕ್ಕದ್ದಾದ ಒಂದೊಂದು ಜಾಲರು ಹೆಣಿತಕ್ಕೆ ಎರಡು ಸಾಲು ದಾಳಿಂಬರ ಕಾಯಿಗಳನ್ನೂ ಜಾಲರು ಹಣಿತೆಗಳಿಗೆ ನಾನೂರು ದಾಳಿಂಬರ ಕಾಯಿಗಳನ್ನೂ ಮಾಡಿದನು.
Cross references
ನಿಲುವಂಗಿಯ ಅಂಚಿನ ಮೇಲೆ ನೀಲ ಧೂಮ್ರ ರಕ್ತವರ್ಣಗಳ ದಾಳಿಂಬರಗಳನ್ನು ಅದರ ಅಂಚಿನ ಸುತ್ತಲೂ ಮಾಡಿ ಅವುಗಳ ಮಧ್ಯದಲ್ಲಿ ಬಂಗಾರದ ಗಂಟೆಗಳನ್ನು ಸುತ್ತಲೂ ಇರಿಸ ಬೇಕು.
ಎರಡು ಸ್ತಂಭಗಳ ಮೇಲಿರುವ ಕುಂಭಗಳಲ್ಲಿ ಉನ್ನತ ಜಾಲರಿಯ ಕೆಲಸದ ಸವಿಾಪದಲ್ಲಿರುವ ಅದರ ಹೊಟ್ಟೆಯ ಎದುರಾಗಿ ಇನ್ನೂರು ದಾಳಿಂಬಗಳು ಸಾಲುಗಳಾಗಿ ಸುತ್ತಲೂ ಇದ್ದವು; ಮತ್ತೊಂದು ಕುಂಭಕ್ಕೂ ಹೀಗೆಯೇ ಇತ್ತು.
ಆ ಸ್ತಂಭಗಳನ್ನು ಮಂದಿರದ ದ್ವಾರಾಂಗಳದ ಮುಂದೆ ನಿಲ್ಲಿಸಿದನು. ಅವನು ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್ ಎಂದೂ ಎಡಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಬೋವಜ್ ಎಂದೂ ಹೆಸರಿಟ್ಟನು.
ಎರಡು ಜಾಲರಿಗಳಿಗೆ ನಾನೂರು ದಾಳಿಂಬಗಳೂ ಸ್ತಂಭಗಳ ಮೇಲೆ ಇರುವ ಎರಡು ಚಂಬುಗಳನ್ನು ಮುಚ್ಚುವಂತೆ ಒಂದು ಜಾಲರಿಗೆ ಎರಡು ಸಾಲಿನ ದಾಳಿಂಬಗಳೂ
ಅವನು ದೈವೋಕ್ತಿಯ ಸ್ಥಾನದಲ್ಲಿರುವ ಹಾಗೆ ಸರಪಣಿಗಳನ್ನು ಮಾಡಿ ಸ್ತಂಭಗಳ ತುದಿಗಳ ಮೇಲೆ ಇಟ್ಟು ನೂರು ದಾಳಿಂಬರ ಹಣ್ಣುಗಳನ್ನು ಮಾಡಿ ಸರಪಣಿಗಳ ಮೇಲೆ ಇರಿಸಿದನು.ಮಂದಿರದ ಮುಂದೆ ಆ ಸ್ತಂಭಗಳಲ್ಲಿ ಒಂದನ್ನು ಬಲಪಾರ್ಶ್ವದಲ್ಲಿಯೂ ಒಂದನ್ನು ಎಡ ಪಾರ್ಶ್ವದಲ್ಲಿಯೂ ನಿಲ್ಲಿಸಿದನು; ಬಲಪಾರ್ಶ್ವದಲ್ಲಿ ಇದ್ದ ಸ್ತಂಭಕ್ಕೆ ಯಾಕೀನ್ ಎಂದೂ ಎಡಪಾರ್ಶ್ವದಲ್ಲಿದ್ದ ಸ್ತಂಭಕ್ಕೆ ಬೋವಜ್ ಎಂದೂ ಹೆಸರಿಟ್ಟನು.
ನಿನ್ನ ಗಿಡಗಳಲ್ಲಿ ದಾಳಿಂಬರದ ವನವೂ ರಮ್ಯವಾದ ಫಲಕೊಡುವ ಗಿಡಗಳೂ ಕರ್ಪೂರವೂ ಜಟಾಮಾಂಸಿಯೂ ಕೂಡ ಇವೆ.