Home Bibles ☰ Books 2 ದಿನವೃತ್ತಾಂತ 3:16 · ಕನ್ನಡ ಬೈಬಲ್
2 ದಿನವೃತ್ತಾಂತ 3:16 · ಕನ್ನಡ ಬೈಬಲ್

ಅವನು ದೈವೋಕ್ತಿಯ ಸ್ಥಾನದಲ್ಲಿರುವ ಹಾಗೆ ಸರಪಣಿಗಳನ್ನು ಮಾಡಿ ಸ್ತಂಭಗಳ ತುದಿಗಳ ಮೇಲೆ ಇಟ್ಟು ನೂರು ದಾಳಿಂಬರ ಹಣ್ಣುಗಳನ್ನು ಮಾಡಿ ಸರಪಣಿಗಳ ಮೇಲೆ ಇರಿಸಿದನು.ಮಂದಿರದ ಮುಂದೆ ಆ ಸ್ತಂಭಗಳಲ್ಲಿ ಒಂದನ್ನು ಬಲಪಾರ್ಶ್ವದಲ್ಲಿಯೂ ಒಂದನ್ನು ಎಡ ಪಾರ್ಶ್ವದಲ್ಲಿಯೂ ನಿಲ್ಲಿಸಿದನು; ಬಲಪಾರ್ಶ್ವದಲ್ಲಿ ಇದ್ದ ಸ್ತಂಭಕ್ಕೆ ಯಾಕೀನ್‌ ಎಂದೂ ಎಡಪಾರ್ಶ್ವದಲ್ಲಿದ್ದ ಸ್ತಂಭಕ್ಕೆ ಬೋವಜ್‌ ಎಂದೂ ಹೆಸರಿಟ್ಟನು.

Cross references

1 ಅರಸುಗಳು 6:21

ಸೊಲೊಮೋನನು ಮನೆಯ ಒಳಭಾಗವನ್ನು ಶುದ್ಧ ಚಿನ್ನದಿಂದ ಹೊದಿಸಿ ದೈವೋಕ್ತಿಯ ಸ್ಥಾನದ ಮುಂದೆ ಚಿನ್ನದ ಸರಪಣಿಗಳಿಂದ ವಿಭಾಗವನ್ನು ಮಾಡಿ ಅದನ್ನು ಚಿನ್ನದಿಂದ ಹೊದಿಸಿದನು.

1 ಅರಸುಗಳು 7:20

ಎರಡು ಸ್ತಂಭಗಳ ಮೇಲಿರುವ ಕುಂಭಗಳಲ್ಲಿ ಉನ್ನತ ಜಾಲರಿಯ ಕೆಲಸದ ಸವಿಾಪದಲ್ಲಿರುವ ಅದರ ಹೊಟ್ಟೆಯ ಎದುರಾಗಿ ಇನ್ನೂರು ದಾಳಿಂಬಗಳು ಸಾಲುಗಳಾಗಿ ಸುತ್ತಲೂ ಇದ್ದವು; ಮತ್ತೊಂದು ಕುಂಭಕ್ಕೂ ಹೀಗೆಯೇ ಇತ್ತು.

2 ದಿನವೃತ್ತಾಂತ 4:12

ಎರಡು ಸ್ತಂಭಗಳನ್ನೂ ಎರಡು ಸ್ತಂಭ ಗಳ ಮೇಲಿರುವ ಬೋದಿಗೆಗಳನ್ನೂ ಬೋದಿಗೆಗಳ ಮೇಲೆ ಮುಚ್ಚುವ ಎರಡು ಜಾಲರು ಹಣಿತೆಗಳನ್ನೂ

2 ದಿನವೃತ್ತಾಂತ 4:13

ಕಂಬಗಳ ಮೇಲಿರುವ ಎರಡು ಬೋದಿಗೆಗಳನ್ನೂ ಮುಚ್ಚತಕ್ಕದ್ದಾದ ಒಂದೊಂದು ಜಾಲರು ಹೆಣಿತಕ್ಕೆ ಎರಡು ಸಾಲು ದಾಳಿಂಬರ ಕಾಯಿಗಳನ್ನೂ ಜಾಲರು ಹಣಿತೆಗಳಿಗೆ ನಾನೂರು ದಾಳಿಂಬರ ಕಾಯಿಗಳನ್ನೂ ಮಾಡಿದನು.

Interlinear

Choose Theme