Home Bibles 2 ದಿನವೃತ್ತಾಂತ 34:13 · ಕನ್ನಡ ಬೈಬಲ್
2 ದಿನವೃತ್ತಾಂತ 34:13 · ಕನ್ನಡ ಬೈಬಲ್

ಇದಲ್ಲದೆ ಹೊರೆಗಾರರ ಮೇಲೆಯೂ ಬೇರೆ ಬೇರೆ ಸೇವೆಯ ಕೆಲಸವನ್ನು ಮಾಡುವವರ ಮೇಲೆಯೂ ಅವರು ವಿಚಾರಕರಾಗಿದ್ದರು. ಲೇವಿಯವರಲ್ಲಿ ಕೆಲವರು ರಾಯಸದವರೂ ಯಜಮಾನರೂ ದ್ವಾರಪಾಲಕರೂ ಆಗಿದ್ದರು.

Cross references

1 ದಿನವೃತ್ತಾಂತ 9:17

ದ್ವಾರಪಾಲಕರು ಯಾರಂದರೆ -- ಶಲ್ಲೂಮನೂ ಅಕ್ಕೂಬನೂ ಟಲ್ಮೋನನೂ ಅಹೀಮಾನನೂ ಇವರ ಸಹೋದರರೂ. ಇವರಲ್ಲಿ ಶಲ್ಲೂಮನು ಮುಖ್ಯಸ್ಥ ನಾಗಿದ್ದನು.

1 ದಿನವೃತ್ತಾಂತ 15:18

ಅವರ ಸಂಗಡ ಎರಡನೇ ತರಗತಿಯ ತಮ್ಮ ಸಹೋದರರಾಗಿರುವ ಜೆಕರ್ಯ ನನ್ನೂ ಬೇನ್‌ನನ್ನೂ ಯಾಜೀಯೇಲನನ್ನೂ ಶೆವಿಾರಾ ಮೋತನನ್ನೂ ಯೆಹೀಯೇಲನನ್ನೂ ಉನ್ನಿಯನ್ನೂ ಎಲೀಯಾಬನನ್ನೂ ಬೆನಾಯನನ್ನೂ ಮಾಸೇಯನನ್ನೂ ಮತ್ತಿತ್ಯನನ್ನೂ ಎಲೀಫೆಲೇಹುವನ್ನೂ ಮಿಕ್ನೇಯನನ್ನೂ ದ್ವಾರಪಾಲಕರಾದ ಒಬೇದೆದೋಮನನ್ನೂ ಯೆಗೀ ಯೇಲನನ್ನೂ ನೇಮಿಸಿದರು.

1 ದಿನವೃತ್ತಾಂತ 16:38

ಒಬೇದೆದೋಮನನ್ನೂ ಅವನ ಸಹೋ ದರರಾದ ಅರವತ್ತೆಂಟು ಮಂದಿಯನ್ನೂ; ದ್ವಾರಪಾಲಕ ರಾದ ಯೆದುತೂನನ ಮಗನಾದ ಒಬೇದೆದೋಮ ನನ್ನೂ ಹೋಸನನ್ನೂ.

1 ದಿನವೃತ್ತಾಂತ 16:42

ಅವರ ಸಂಗಡ ಶಬ್ದ ಮಾಡ ಬೇಕಾದವರಿಗೋಸ್ಕರ ತುತೂರಿಗಳೂ ತಾಳಗಳೂ ದೇವರ ಗೀತ ವಾದ್ಯಗಳೂ ಸಹಿತವಾಗಿ ಹೇಮಾನನೂ ಯೆದುತೂನನೂ, ಮತ್ತು ಯೆದುತೂನನ ಕುಮಾರರು ದ್ವಾರಪಾಲಕರಾಗಿದ್ದರು.ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗೆ ಹೋದರು; ದಾವೀದನು ತನ್ನ ಮನೆಯವರನ್ನು ಆಶೀ ರ್ವದಿಸುವದಕ್ಕೆ ಹಿಂತಿರುಗಿದನು.

1 ದಿನವೃತ್ತಾಂತ 23:4

ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಕರ್ತನ ಮನೆಯ ಕೆಲಸವನ್ನು ನಡಿಸುವವರಾಗಿದ್ದರು; ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿ ಪತಿಗಳೂ ಆಗಿದ್ದರು.

1 ದಿನವೃತ್ತಾಂತ 23:5

ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು; ನಾಲ್ಕು ಸಾವಿರ ಮಂದಿ ಸ್ತುತಿಸುವದಕ್ಕೆ ದಾವೀದನು ಸಿದ್ಧಮಾಡಿದ ವಾದ್ಯಗಳಿಂದ ಕರ್ತನನ್ನು ಸ್ತುತಿಸಿದರು.

1 ದಿನವೃತ್ತಾಂತ 26:1

ದ್ವಾರಪಾಲಕರ ವರ್ಗಗಳನ್ನು ಕುರಿತು ಏನಂದರೆ--ಕೊರಹೀಯರೊಳಗೆ ಆಸಾ ಫನ ಕುಮಾರರಲ್ಲಿ ಒಬ್ಬನಾಗಿರುವ ಕೋರೆಯನ ಮಗನಾದ ಮೆಷೆಲೆಮ್ಯನು.

1 ದಿನವೃತ್ತಾಂತ 26:29

ಇಚ್ಹಾರ್ಯರಲ್ಲಿ ಕೆನನ್ಯನೂ ಅವನ ಕುಮಾರರೂ ಪಾರುಪತ್ಯಗಾರರಿಗೋಸ್ಕರವೂ ನ್ಯಾಯಾಧಿಪತಿಗಳಿ ಗೋಸ್ಕರವೂ ಇಸ್ರಾಯೇಲಿನ ಮೇಲೆ ಹೊರಗಿನ ಕಾರ್ಯಗಳನ್ನು ನೋಡಲು ಇಡಲ್ಪಟ್ಟಿದ್ದರು.

2 ದಿನವೃತ್ತಾಂತ 2:10

ಇಗೋ, ನಾನು ಮರಗಳನ್ನು ಕಡಿಯುವ ನಿನ್ನ ಸೇವಕರಿಗೆ ಇಪ್ಪತ್ತು ಸಾವಿರ ಅಳತೆ ಗೋಧಿಯನ್ನೂ ಇಪ್ಪತ್ತು ಸಾವಿರ ಅಳತೆ ಜವೆಗೋಧಿ ಯನ್ನೂ ಇಪ್ಪತ್ತು ಸಾವಿರ ಅಳತೆ ದ್ರಾಕ್ಷಾರಸವನ್ನೂ ಇಪ್ಪತ್ತು ಸಾವಿರ ಅಳತೆ ಎಣ್ಣೆಯನ್ನೂ ಕೊಡುವೆನು ಅಂದನು.

2 ದಿನವೃತ್ತಾಂತ 2:18

ಅವರಲ್ಲಿ ಎಪ್ಪತ್ತು ಸಾವಿರ ಮಂದಿಯನ್ನು ಹೊರೆಹೊರುವದಕ್ಕೂ ಎಂಭತ್ತು ಸಾವಿರ ಮಂದಿಯನ್ನು ಬೆಟ್ಟದಲ್ಲಿ ಕಲ್ಲು ಕಡಿಯುವ ದಕ್ಕೂ ಮೂರು ಸಾವಿರದ ಆರು ನೂರು ಮಂದಿ ಯನ್ನು ಕೆಲಸದವರ ಮೇಲೆ ಮೇಲ್ವಿಚಾರಣೆಗಾಗಿಯೂ ಇರಿಸಿದನು.

2 ದಿನವೃತ್ತಾಂತ 8:10

ಇವರು ಅರಸ ನಾದ ಸೊಲೊಮೋನನ ಅಧಿಪತಿಗಳಲ್ಲಿ ಪ್ರಧಾನ ರಾಗಿದ್ದರು. ಜನರನ್ನು ಆಳುವವರು ಇನ್ನೂರ ಐವತ್ತು ಮಂದಿ ಇದ್ದರು.

2 ದಿನವೃತ್ತಾಂತ 8:14

ಅವನು ತನ್ನ ತಂದೆಯಾದ ದಾವೀದನ ಕ್ರಮದ ಪ್ರಕಾರ ಅವರ ಸೇವೆಗೆ ಯಾಜಕರ ಸರದಿ ಗಳನ್ನೂ ಪ್ರತಿ ದಿವಸಕ್ಕೆ ಬೇಕಾದ ಕಾರ್ಯದ ಪ್ರಕಾರ ಯಾಜಕರ ಮುಂದೆ ಸ್ತುತಿಸುವದಕ್ಕೂ ಸೇವೆಮಾಡು ವದಕ್ಕೂ ತಮ್ಮ ವಿಚಾರಗಳಲ್ಲಿ ಲೇವಿಯರನ್ನೂ ಸೇವೆಯ ಬಾಗಲಲ್ಲಿ ತಮ್ಮ ಸರದಿಗಳಾಗಿ ದ್ವಾರಪಾಲಕರನ್ನೂ ನೇಮಿಸಿದನು. ದೇವರ ಮನುಷ್ಯನಾದ ದಾವೀದನು ಹಾಗೆಯೇ ನೇಮಿಸಿದ್ದನು.

2 ದಿನವೃತ್ತಾಂತ 19:11

ಇಗೋ, ಪ್ರಧಾನ ಯಾಜಕನಾದ ಅಮರ್ಯನು ಕರ್ತನ ಸಮಸ್ತ ಕಾರ್ಯಗಳಲ್ಲಿಯೂ ಯೆಹೂದದ ಮನೆಯ ನಾಯಕ ನಾಗಿರುವ ಇಷ್ಮಾಯೇಲನ ಮಗನಾದ ಜೆಬದ್ಯನು ಅರಸನ ಸಮಸ್ತ ಕಾರ್ಯಗಳಲ್ಲಿಯೂ ಇದ್ದಾರೆ. ಇದ ಲ್ಲದೆ ಲೇವಿಯರೂ ನಿಮ್ಮ ಮುಂದೆ ಅಧಿಕಾರಿಗಳಾಗಿ ರುವರು. ನೀವು ಬಲಗೊಂಡು ಕೆಲಸ ನಡಿಸಿರಿ; ಕರ್ತನು ಒಳ್ಳೆಯವರ ಸಂಗಡ ಇರುವನು ಅಂದನು.

ಎಜ್ರಾ 7:6

ಈ ಎಜ್ರನು ಇಸ್ರಾ ಯೇಲ್‌ ದೇವರಾಗಿರುವ ಕರ್ತನು ಕೊಟ್ಟ ಮೋಶೆಯ ನ್ಯಾಯಪ್ರಮಾಣದಲ್ಲಿ ನುರಿತ ಶಾಸ್ತ್ರಿಯಾಗಿದ್ದನು. ಇವನ ಮೇಲೆ ಅವನ ದೇವರಾಗಿರುವ ಕರ್ತನ ಕೈ ಇದ್ದ ಪ್ರಕಾರವೇ ಅರಸನು ಇವನಿಗೆ ಕೇಳಿದ್ದನ್ನೆಲ್ಲಾ ಕೊಟ್ಟನು.

ನೆಹೆಮ್ಯ 4:10

ಆಗ ಯೆಹೂದದವರು--ಹೊರೆ ಹೊರುವವರ ಬಲವು ಕಡಿಮೆಯಾಗಿ ಮಣ್ಣು ಬಹಳವಾಗಿದೆ; ಗೋಡೆಯನ್ನು ನಾವು ಕಟ್ಟಲಾರೆವು ಅಂದರು.

ಯೆರೆಮಿಯ 8:8

ಅವರ ನಾಲಿಗೆ ಎಸೆದ ಬಾಣದಂತಿದೆ, ಅದು ಮೋಸವನ್ನಾಡುತ್ತದೆ. ತನ್ನ ಬಾಯಿಂದ ತನ್ನ ನೆರೆಯವರ ಸಂಗಡ ಸಮಾಧಾನವಾಗಿ ಮಾತನಾಡಿ ಹೃದಯದಲ್ಲಿ ಅವನಿಗೆ ಹೊಂಚುಹಾಕುತ್ತಾನೆ.

ಮತ್ತಾಯ 26:3

ಆಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಜನರ ಹಿರಿಯರೂ ಒಟ್ಟಾಗಿ ಸೇರಿ ಕಾಯಫನೆಂಬ ಮಹಾಯಾಜಕನ ಭವನಕ್ಕೆ ಬಂದು

Interlinear

Choose Theme