ಇಗೋ, ನಾನು ಮರಗಳನ್ನು ಕಡಿಯುವ ನಿನ್ನ ಸೇವಕರಿಗೆ ಇಪ್ಪತ್ತು ಸಾವಿರ ಅಳತೆ ಗೋಧಿಯನ್ನೂ ಇಪ್ಪತ್ತು ಸಾವಿರ ಅಳತೆ ಜವೆಗೋಧಿ ಯನ್ನೂ ಇಪ್ಪತ್ತು ಸಾವಿರ ಅಳತೆ ದ್ರಾಕ್ಷಾರಸವನ್ನೂ ಇಪ್ಪತ್ತು ಸಾವಿರ ಅಳತೆ ಎಣ್ಣೆಯನ್ನೂ ಕೊಡುವೆನು ಅಂದನು.
Cross references
ಸೊಲೊ ಮೋನನು ಹೀರಾಮನಿಗೆ ಅವನ ಮನೆಯವರ ಆಹಾರ ಕ್ಕೋಸ್ಕರ ಇಪ್ಪತ್ತು ಸಾವಿರ ಅಳತೆ ಗೋಧಿಯನ್ನೂ ಇಪ್ಪತ್ತು ಅಳತೆ ಶುದ್ಧವಾದ ಎಣ್ಣೆಯನ್ನೂ ಕೊಟ್ಟನು. ಹೀಗೆಯೇ ಸೊಲೊಮೋನನು ಹೀರಾಮನಿಗೆ ಪ್ರತಿ ವರುಷ ಕೊಡುತ್ತಾ ಇದ್ದನು.
ಅದರ ದಪ್ಪವು ಕೈಯಷ್ಟಾಗಿಯೂ ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ಎರಡು ಸಾವಿರ ಕೊಳಗ ಹಿಡಿಯು ವದಾಗಿತ್ತು.
ಹತ್ತು ತಾಮ್ರದ ತೊಟ್ಟಿಗಳನ್ನು ಮಾಡಿದನು. ಒಂದೊಂದು ತೊಟ್ಟಿಯು ನಾಲ್ವತ್ತು ಕೊಳಗ ಹಿಡಿಯಿತು; ಒಂದೊಂದು ತೊಟ್ಟಿಯು ನಾಲ್ಕು ಮೊಳವು; ಆ ಹತ್ತು ಆಧಾರ ಗಳಲ್ಲಿಯೂ ಒಂದೊಂದರ ಮೇಲೆ ಒಂದೊಂದು ತೊಟ್ಟಿಯನ್ನು ಇಟ್ಟನು.
ಆಗ ಕರ್ತನು ಇಸ್ರಾಯೇಲಿನ ಮೇಲೆ ಅರಸನಾಗಿರಲು ತನ್ನನ್ನು ಸ್ಥಿರಪಡಿಸಿದನೆಂದು ದಾವೀದನು ತಿಳುಕೊಂಡನು. ಯಾಕಂದರೆ ಆತನ ಜನರಾದ ಇಸ್ರಾಯೇಲಿನ ನಿಮಿತ್ತ ತನ್ನ ರಾಜ್ಯವು ಮೇಲಕ್ಕೆ ಎತ್ತಲ್ಪಟ್ಟಿತ್ತು.
ನಿನ್ನ ಕರ್ತನಾದ ದೇವರಿಗೋಸ್ಕರ ಅರಸ ನಾಗಿರಲು ತನ್ನ ಸಿಂಹಾಸನದ ಮೇಲೆ ನಿನ್ನನ್ನು ಇರಿ ಸಲು ನಿನ್ನಲ್ಲಿ ಇಷ್ಟಪಟ್ಟ ನಿನ್ನ ದೇವರಾದ ಕರ್ತನು ಸ್ತುತಿಸಲ್ಪಡಲಿ. ನಿನ್ನ ದೇವರು ಇಸ್ರಾಯೇಲನ್ನು ಯುಗ ಯುಗಕ್ಕೂ ನಿಲ್ಲಿಸಲು ಅವರನ್ನು ಪ್ರೀತಿಮಾಡಿದ್ದರಿಂದ ನ್ಯಾಯವನ್ನೂ ನೀತಿಯನ್ನೂ ನಡಿಸಲು ಆತನು ನಿನ್ನನ್ನು ಅವರ ಮೇಲೆ ಅರಸನಾಗಿರಲು ಮಾಡಿದನು ಅಂದಳು.
ಪರಲೋಕದ ದೇವರ ನ್ಯಾಯಪ್ರಮಾಣದ ಶಾಸ್ತ್ರಿಯಾಗಿರುವ ಯಾಜ ಕನಾದ ಎಜ್ರನು ನಿಮ್ಮಿಂದ ಏನಾದರೂ ಕೇಳಿದರೆ ಬೆಳ್ಳಿಯು ನೂರು ತಲಾಂತಿನ ಮಟ್ಟಿಗೂ ಗೋಧಿಯು ನೂರು ಕೊಳಗದ ಮಟ್ಟಿಗೂ ದ್ರಾಕ್ಷಾರಸವು ನೂರು ಬುದ್ದಲಿಯ ವರೆಗೂ ಎಣ್ಣೆಯು ನೂರು ಬುದ್ದಲಿಯ ವರೆಗೂ ಉಪ್ಪು ಬೇಕಾದಷ್ಟು ತ್ವರೆಯಾಗಿ ಕೊಡಲ್ಪಡಲಿ.
ಅದೇ ಮನೆಯಲ್ಲಿದ್ದು ಅವರು ಕೊಟ್ಟದ್ದನ್ನು ತಿಂದು ಕುಡಿಯಿರಿ; ಯಾಕಂದರೆ ಕೆಲಸದವನು ತನ್ನ ಕೂಲಿಗೆ ಯೋಗ್ಯನು. ಮನೆಯಿಂದ ಮನೆಗೆ ಹೋಗ ಬೇಡಿರಿ;
ಅವರವರಿಗೆ ಸಲ್ಲ ತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು, ಯಾರಿಗೆ ಸುಂಕವೋ ಅವರಿಗೆ ಸುಂಕ ವನ್ನು, ಯಾರಿಗೆ ಭಯವೋ ಅವರಿಗೆ ಭಯವನ್ನು, ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆ ಯನ್ನು ಸಲ್ಲಿಸಿರಿ.