ಯೋತಾಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಯುದ್ಧಗಳೂ ಅವನ ಮಾರ್ಗಗಳೂ ಇಗೋ, ಅವು ಇಸ್ರಾಯೇಲ್ ಯೆಹೂದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
Cross references
ಯೋತಾಮನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
ಯೆಹೋಷಾಫಾಟನ ಇತರ ಕ್ರಿಯೆಗಳು, ಮೊದಲನೆಯವುಗಳೂ ಕಡೆಯವುಗಳೂ ಇಗೋ, ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಹೇಳಲ್ಪಟ್ಟ ಹನಾನೀಯ ಮಗನಾದ ಯೇಹೂವಿನ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
ಆದರೆ ಅಮಚ್ಯನ ಮಿಕ್ಕಾದ ಕ್ರಿಯೆಗಳು, ಮೊದಲನೆಯವು ಗಳೂ ಕಡೆಯವುಗಳೂ ಇಗೋ, ಅವು ಯೆಹೂದ ಇಸ್ರಾಯೇಲ್ಯರ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
ಉಜ್ಜೀಯನ ಮಿಕ್ಕಾದ ಕ್ರಿಯೆಗಳನ್ನು, ಮೊದಲನೆ ಯವುಗಳನ್ನೂ ಕಡೆಯವುಗಳನ್ನೂ ಆಮೋಚನ ಮಗ ನಾದ ಯೆಶಾಯನು ಬರೆದನು. ಉಜ್ಜೀಯನು ತನ್ನ ಪಿತೃಗಳ ಸಂಗಡ ಮಲಗಿದನು;ಅವರು ಅರಸುಗಳಿಗೆ ಇದ್ದ ಸ್ಮಶಾನ ಭೂಮಿಯಲ್ಲಿ ಅವನ ಪಿತೃಗಳ ಸಂಗಡ ಅವನನ್ನು ಹೂಣಿಟ್ಟರು. ಯಾಕಂದರೆ--ಅವನು ಕುಷ್ಠ ರೋಗವುಳ್ಳವನು ಅಂದುಕೊಂಡರು. ಅವನ ಮಗ ನಾದ ಯೋತಾಮನು ಅವನಿಗೆ ಬದಲಾಗಿ ಆಳಿದನು.
ಹಿಜ್ಕೀಯನ ಮಿಕ್ಕಾದ ಕಾರ್ಯಗಳೂ ಅವನ ಒಳ್ಳೆಯತನವೂ ಇಗೋ, ಅವು ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನ ದರ್ಶನದ ಪುಸ್ತಕ ದಲ್ಲಿಯೂ ಯೆಹೂದ ಇಸ್ರಾಯೇಲ್ ಅರಸುಗಳ ಪುಸ್ತಕದಲ್ಲಿಯೂ ಬರೆಯಲ್ಪಟ್ಟಿವೆ.ಹಿಜ್ಕೀಯನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ದಾವೀದನ ಮಕ್ಕಳ ಸಮಾಧಿಗಳಲ್ಲಿರುವ ಶ್ರೇಷ್ಠವಾದದರಲ್ಲಿ ಅವ ನನ್ನು ಹೂಣಿಟ್ಟರು. ಅವನ ಮರಣದಲ್ಲಿ ಸಮಸ್ತ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಅವನನ್ನು ಘನಪಡಿಸಿದರು. ಅವನ ಮಗನಾದ ಮನ ಸ್ಸೆಯು ಅವನಿಗೆ ಬದಲಾಗಿ ಆಳಿದನು.