Home Bibles 2 ದಿನವೃತ್ತಾಂತ 20:34 · ಕನ್ನಡ ಬೈಬಲ್
2 ದಿನವೃತ್ತಾಂತ 20:34 · ಕನ್ನಡ ಬೈಬಲ್

ಯೆಹೋಷಾಫಾಟನ ಇತರ ಕ್ರಿಯೆಗಳು, ಮೊದಲನೆಯವುಗಳೂ ಕಡೆಯವುಗಳೂ ಇಗೋ, ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಹೇಳಲ್ಪಟ್ಟ ಹನಾನೀಯ ಮಗನಾದ ಯೇಹೂವಿನ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

Cross references

1 ಅರಸುಗಳು 14:19

ಯಾರೊಬ್ಬಾಮನ ಮಿಕ್ಕಾದ ಕ್ರಿಯೆಗಳೂ ಅವನು ಯುದ್ಧ ಮಾಡಿದ್ದೂ ಆಳಿದ್ದೂ--ಇಗೋ, ಇವು ಇಸ್ರಾಯೇಲ್ಯರ ಅರಸುಗಳ ವೃತಾಂತಗಳ ಪುಸ್ತಕ ದಲ್ಲಿ ಬರೆಯಲ್ಪಟ್ಟಿವೆ.

1 ಅರಸುಗಳು 16:1

ಬಾಷನಿಗೆ ವಿರೋಧವಾಗಿ ಹನಾನೀಯ ಮಗನಾದ ಯೇಹುವಿಗೆ ಕರ್ತನ ವಾಕ್ಯ ಉಂಟಾಗಿ ಹೇಳಿದ್ದೇನಂದರೆ--ನಾನು ನಿನ್ನನ್ನು ಧೂಳಿ ಯಲ್ಲಿಂದ ಮೇಲೆತ್ತಿ ನಿನ್ನನ್ನು ನನ್ನ ಜನರಾದ ಇಸ್ರಾ ಯೇಲಿನ ಮೇಲೆ ನಾಯಕನಾಗಿ ಇರಿಸಿದೆನು.

1 ಅರಸುಗಳು 16:7

ಇದಲ್ಲದೆ ಬಾಷನು ಯಾರೂಬ್ಬಾಮನ ಮನೆ ಯವರ ಹಾಗಿದ್ದು ಅವನನ್ನು ಕೊಂದುಹಾಕಿ ತನ್ನ ದುಷ್ಕೃತ್ಯಗಳಿಂದ ಕರ್ತನಿಗೆ ಕೋಪವನ್ನು ಎಬ್ಬಿಸಿ ಕರ್ತನ ಸಮ್ಮುಖದಲ್ಲಿ ತಾನು ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತ ಅವನಿಗೆ ವಿರೋಧವಾಗಿಯೂ ಅವನ ಮನೆಗೆ ವಿರೋಧವಾಗಿಯೂ ಹನಾನೀಯ ಮಗನಾಗಿರುವ ಪ್ರವಾದಿಯಾದ ಯೇಹುವಿನ ಮುಖಾಂತರ ಕರ್ತನ ವಾಕ್ಯ ಉಂಟಾಯಿತು.

2 ದಿನವೃತ್ತಾಂತ 12:15

ರೆಹಬ್ಬಾಮನ ಕ್ರಿಯೆಗಳು ಮೊದಲನೆಯವು ಗಳೂ ಕಡೆಯವುಗಳೂ ಪ್ರವಾದಿಯಾದ ಶೆಮಾಯನ ಪುಸ್ತಕದಲ್ಲಿಯೂ ವಂಶಾವಳಿಗಳನ್ನು ಕುರಿತು ಬರೆದ ದರ್ಶಿಯಾದ ಇದ್ದೋನ ಪುಸ್ತಕದಲ್ಲಿಯೂ ಬರೆಯ ಲ್ಪಟ್ಟವಲ್ಲವೇ? ಇದಲ್ಲದೆ ರೆಹಬ್ಬಾಮನಿಗೂ ಯಾರೊ ಬ್ಬಾಮನಿಗೂ ಯಾವಾಗಲೂ ಯುದ್ಧಉಂಟಾಗಿತ್ತು.ರೆಹಬ್ಬಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿ ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು; ಅವನ ಮಗ ನಾದ ಅಬೀಯನು ಅವನಿಗೆ ಬದಲಾಗಿ ಆಳಿದನು.

2 ದಿನವೃತ್ತಾಂತ 13:22

ಅಬೀ ಯನ ಮಿಕ್ಕಾದ ಕ್ರಿಯೆಗಳೂ ಅವನ ನಡತೆಗಳೂ ಮಾತುಗಳೂ ಪ್ರವಾದಿಯಾದ ಇದ್ದೋನನ ವರ್ತ ಮಾನಗಳಲ್ಲಿ ಬರೆಯಲ್ಪಟ್ಟಿವೆ.

2 ದಿನವೃತ್ತಾಂತ 16:7

ಅದೇ ಕಾಲದಲ್ಲಿ ಪ್ರವಾದಿಯಾದ ಹನಾನಿಯು ಯೆಹೂದದ ಅರಸನಾದ ಆಸನ ಬಳಿಗೆ ಬಂದು ಅವನಿಗೆ -- ನೀನು ನಿನ್ನ ದೇವರಾದ ಕರ್ತನ ಮೇಲೆ ಆತುಕೊಳ್ಳದೆ ಅರಾಮಿನ ಅರಸನ ಮೇಲೆ ಆತು ಕೊಂಡದ್ದರಿಂದ ಅರಾಮಿನ ಅರಸನ ಸೈನ್ಯವು ನಿನ್ನ ಕೈಯಿಂದ ತಪ್ಪಿಸಿಕೊಂಡಿತು.

2 ದಿನವೃತ್ತಾಂತ 16:11

ಇಗೋ, ಆಸನ ಕಾರ್ಯಗಳು ಮೊದಲನೆಯವುಗಳೂ ಕಡೆಯವುಗಳೂ ಯೆಹೂ ದದ ಇಸ್ರಾಯೇಲಿನ ಅರಸರ ಪುಸ್ತಕದಲ್ಲಿ ಬರೆದಿವೆ.

2 ದಿನವೃತ್ತಾಂತ 19:2

ಆಗ ಪ್ರವಾದಿಯಾಗಿರುವ ಹನಾನೀಯ ಮಗನಾದ ಯೇಹೂ ಅವನನ್ನು ಎದುರುಗೊಳ್ಳಲು ಹೋದನು. ಅರಸನಾದ ಯೆಹೋಷಾಫಾಟನಿಗೆ ಅವನು--ದುಷ್ಟ ನಿಗೆ ಸಹಾಯ ಕೊಡುವವನಾಗಿ ಕರ್ತನನ್ನು ಹಗೆ ಮಾಡುವವರನ್ನು ಪ್ರೀತಿಮಾಡಬಹುದೋ? ಆದ ಕಾರಣ ನಿನ್ನ ಮೇಲೆ ಕರ್ತನ ಸನ್ನಿಧಿಯಿಂದ ರೌದ್ರ ಉಂಟು.

2 ದಿನವೃತ್ತಾಂತ 25:26

ಆದರೆ ಅಮಚ್ಯನ ಮಿಕ್ಕಾದ ಕ್ರಿಯೆಗಳು, ಮೊದಲನೆಯವು ಗಳೂ ಕಡೆಯವುಗಳೂ ಇಗೋ, ಅವು ಯೆಹೂದ ಇಸ್ರಾಯೇಲ್ಯರ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?

Interlinear

Choose Theme