ಆದರೆ ಕರ್ತನು ದಾವೀದನ ಸಂಗಡ ಮಾಡಿದ ಒಡಂಬಡಿಕೆಗೋಸ್ಕರವೂ ಆತನು ಅವನಿಗೂ ಅವನ ಮಕ್ಕಳಿಗೂ ಸರ್ವಕಾಲಕ್ಕೂ ಬೆಳಕನ್ನು ಕೊಡು ವೆನೆಂದು ಹೇಳಿದ್ದರಿಂದಲೂ ಆತನು ದಾವೀದನ ಮನೆಯನ್ನು ನಾಶಮಾಡಲು ಮನಸ್ಸಿಲ್ಲದೆ ಇದ್ದನು.
Cross references
ಇದಲ್ಲದೆ ಕರ್ತನು ನಿನಗೆ ತಿಳಿಸುವದೇನಂದರೆ, ನಾನು ನಿನಗೆ ಮನೆಯನ್ನು ಕಟ್ಟುವೆನು. ನಿನ್ನ ದಿವಸಗಳು ಪೂರ್ತಿ ಯಾಗಿ ನೀನು ನಿನ್ನ ಪಿತೃಗಳ ಸಂಗಡ ಮಲಗಿಕೊಂಡಿ ರುವಾಗ ನಿನ್ನ ಕರುಳುಗಳಿಂದ ಹೊರಡುವ ನಿನ್ನ ಸಂತತಿಯನ್ನು ನಿನ್ನ ತರುವಾಯ ಎಬ್ಬಿಸಿ ನಾನು ಅವನ ರಾಜ್ಯವನ್ನು ಸ್ಥಿರಮಾಡುವೆನು.
ಆದರೆ ಚೆರೂಯಳ ಮಗನಾದ ಅಬೀಷೈಯು ಅವನಿಗೆ ಸಹಾಯವಾಗಿ ಬಂದು ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿ ದನು. ಆಗ ದಾವೀದನ ಜನರು ಅವನಿಗೆ--ನೀನು ಇಸ್ರಾಯೇಲಿನ ಬೆಳಕನ್ನು ಆರಿಸಿಬಿಡದ ಹಾಗೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಹೊರಡಬೇಡ ಎಂದು ಅವನಿಗೆ ಆಣೆಯಿಟ್ಟರು.
ನನ್ನ ಮನೆ ದೇವರ ಸಮ್ಮುಖದಲ್ಲಿ ಹಾಗೆಯೇ ಅಲ್ಲದಿದ್ದರೂ ನನ್ನ ಸಂಗಡ ನಿತ್ಯವಾದ ಒಡಂಬಡಿಕೆ ಯನ್ನು ಮಾಡಿದ್ದಾನೆ; ಎಲ್ಲಾದರ ವಿಷಯ ಸಿದ್ಧವಾದ ದ್ದಾಗಿಯೂ ಸ್ಥಿರವಾದದ್ದಾಗಿಯೂ ಅದೆ. ಆತನು ಅದನ್ನು ಬೆಳೆಯದೆ ಇದ್ದರೂ ನನ್ನ ಎಲ್ಲಾ ರಕ್ಷಣೆಯೂ ನನ್ನ ಎಲ್ಲಾ ಅಭಿಲಾಷೆಯೂ ಅದೇ.
ಇದಲ್ಲದೆ ರಾಜ್ಯವನ್ನೆಲ್ಲಾ ನಾನು ಕಸಕೊಳ್ಳದೆ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ನಾನು ಆದುಕೊಂಡ ಯೆರೂಸಲೇಮಿಗೋಸ್ಕರವಾಗಿಯೂ ನಿನ್ನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು ಅಂದನು.
ಅಲ್ಲಿ ನನ್ನ ಹೆಸರನ್ನಿಡಲು ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ನನ್ನ ಮುಂದೆ ನನ್ನ ಸೇವಕನಾದ ದಾವೀದನಿಗೆ ಯಾವಾಗಲೂ ಬೆಳಕು ಉಂಟಾಗುವ ಹಾಗೆ ಅವನ ಮಗನಿಗೆ ಒಂದು ಗೋತ್ರ ವನ್ನು ಕೊಡುವೆನು.
ಕರ್ತನು ದಾವೀದನಿಗೂ ಅವನ ಮಕ್ಕಳಿಗೂ ನಿರಂತರವಾಗಿ ದೀಪವನ್ನು ಕೊಡುವೆನೆಂದು ಅವನಿಗೆ ವಾಗ್ದಾನ ಮಾಡಿದ ಹಾಗೆ ತನ್ನ ಸೇವಕನಾದ ದಾವೀದನ ನಿಮಿತ್ತ ಯೆಹೂದವನ್ನು ಕೆಡಿಸಲು ಮನಸ್ಸಿಲ್ಲದೆ ಇದ್ದನು.
ಆದಕಾರಣ ಇಸ್ರಾಯೇಲಿನ ದೇವರಾದ ಓ ಕರ್ತನೇ,--ನಿನ್ನ ಮಕ್ಕಳು ತಮ್ಮ ಮಾರ್ಗಕ್ಕೆ ಜಾಗ್ರತೆಯಾಗಿದ್ದು ನೀನು ನನ್ನ ಮುಂದೆ ನಡೆದ ಹಾಗೆ ಅವರು ನನ್ನ ನ್ಯಾಯ ಪ್ರಮಾಣದ ಪ್ರಕಾರ ನಡೆದರೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ಕುಳಿತುಕೊ ಳ್ಳಲು ನಿನಗೆ ಮನುಷ್ಯನು ಕೊರತೆಯಾಗುವದಿಲ್ಲವೆಂದು ನೀನು ನನ್ನ ತಂದೆಯೂ ನಿನ್ನ ಸೇವಕನೂ ದಾವೀದನಿಗೆ ಹೇಳಿದ್ದನ್ನು ನಡಿಸು.
ಆದರೆ ಅರಸನ ಮಗಳಾದ ಯೆಹೋಷಬತಳು ಅಹಜ್ಯನ ಮಗನಾದ ಯೆಹೋವಾಷನನ್ನು ತಕ್ಕೊಂಡು ಕೊಂದುಹಾಕಲ್ಪಟ್ಟ ಅರಸನ ಮಕ್ಕಳ ಮಧ್ಯದಿಂದ ಅವನನ್ನು ಕದ್ದುಕೊಂಡು ಅವನನ್ನೂ ಅವನ ದಾದಿ ಯನ್ನೂ ಮಲಗುವ ಕೋಣೆಯಲ್ಲಿ ಇರಿಸಿದಳು. ಹೀಗೆ ಅತಲ್ಯಳು ಅವನನ್ನು ಕೊಲ್ಲದ ಹಾಗೆ ಅರಸನಾದ ಯೆಹೋರಾಮನ ಕುಮಾರ್ತೆಯಾಗಿರುವ ಯಾಜ ಕನಾದ ಯೆಹೋಯಾದನ ಹೆಂಡತಿಯಾಗಿರುವ ಯೆಹೋಷಬತಳು ಬಚ್ಚಿಟ್ಟಳು.ಹೀಗೆಯೇ ಇವನು ಅವರ ಸಂಗಡ ದೇವರ ಆಲಯದಲ್ಲಿ ಆರು ವರುಷ ಬಚ್ಚಿಟ್ಟುಕೊಂಡಿದ್ದನು. ಆದರೆ ಅತಲ್ಯಳು ದೇಶದ ಮೇಲೆ ಆಳುತ್ತಿದ್ದಳು.
ಎಂದೆಂದಿಗೂ ಅವನಿಗೋ ಸ್ಕರ ನನ್ನ ಕರುಣೆಯನ್ನು ಕಾದಿಡುವೆನು. ನನ್ನ ಒಡಂಬಡಿಕೆಯು ಅವನೊಂದಿಗೆ ದೃಢವಾಗಿರುವದು.
ನಿನ್ನ ಸೇವಕನ ಒಡಂಬಡಿಕೆಯನ್ನು ಅಸಡ್ಡೆಮಾಡಿ, ಅವನ ಕಿರೀಟವನ್ನು ನೆಲಕ್ಕೆ ಹಾಕಿ ಹೊಲೆ ಮಾಡಿದ್ದೀ.
ಕರ್ತನು ದಾವೀದನಿಗೆ ಸತ್ಯದ ಆಣೆ ಇಟ್ಟಿದ್ದಾನೆ; ಅದರಿಂದ ತಿರುಗಿಕೊಳ್ಳನು; ಅದು--ನಿನ್ನ ಸಂತಾನ ವನ್ನು ನಿನ್ನ ಸಿಂಹಾಸನದ ಮೇಲೆ ಇರಿಸು ವದು.
ಅಲ್ಲಿ ದಾವೀದನಿಗೆ ಕೊಂಬನ್ನು ಮೊಳಿಸುವೆನು; ನನ್ನ ಅಭಿಷಿಕ್ತನಿಗೆ ದೀಪವನ್ನು ಸಿದ್ಧಮಾಡಿದ್ದೇನೆ.ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ.
ನಾವು ಯೆಹೂದಕ್ಕೆ ವಿರೋಧವಾಗಿ ಹೋಗಿ ಅದನ್ನು ವ್ಯಥೆಪಡಿಸಿ ಅದರಲ್ಲಿ ನಮಗಾಗಿ ಮಾಡಿ ಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿ ಅದರ ಮಧ್ಯದಲ್ಲಿ ಒಬ್ಬ ಅರಸನನ್ನು ಅಂದರೆ ಟಾಬೇಲನ ಮಗನನ್ನು ನೇಮಿಸಿಕೊಳ್ಳೋಣ ಎಂದು ಹೇಳುವರು
ಅವರ ಶತ್ರುಗಳ ಕೈಯಲ್ಲಿಯೂ ಅವರ ಪ್ರಾಣವನ್ನು ಹುಡುಕು ವವರ ಕೈಯಲ್ಲಿಯೂ ಒಪ್ಪಿಸುವೆನು: ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗುವವು.
ಆತನು ತನ್ನ ಸೇವಕನಾದ ದಾವೀದನ ಮನೆತನದಲ್ಲಿ ನಮಗಾಗಿ ರಕ್ಷಣೆಯ ಕೊಂಬನ್ನು ಎತ್ತಿ ದ್ದಾನೆ.
ಕತ್ತಲೆಯಲ್ಲಿಯೂ ಮರಣದ ನೆರಳಿನಲ್ಲಿಯೂ ಕೂತವರಿಗೆ ಬೆಳಕನ್ನು ಕೊಡುವದಕ್ಕೂ ನಮ್ಮ ಪಾದಗಳನ್ನು ಸಮಾಧಾನದ ಮಾರ್ಗದಲ್ಲಿ ನಡಿಸುವದಕ್ಕೂ ಆಗುವದು ಎಂದು ಹೇಳಿದನು.ಆ ಬಾಲಕನು ಬೆಳೆದು ಆತ್ಮದಲ್ಲಿ ಬಲಗೊಂಡನು. ತನ್ನನ್ನು ಇಸ್ರಾಯೇಲಿಗೆ ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯದಲ್ಲಿದ್ದನು.