Home Bibles ☰ Books ಯೆರೆಮಿಯ 33:20 · ಕನ್ನಡ ಬೈಬಲ್
ಯೆರೆಮಿಯ 33:20 · ಕನ್ನಡ ಬೈಬಲ್

ಅವರ ಶತ್ರುಗಳ ಕೈಯಲ್ಲಿಯೂ ಅವರ ಪ್ರಾಣವನ್ನು ಹುಡುಕು ವವರ ಕೈಯಲ್ಲಿಯೂ ಒಪ್ಪಿಸುವೆನು: ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗುವವು.

Cross references

ಆದಿಕಾಂಡ 8:22

ಭೂಮಿಯು ಇರುವ ವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ತಂಪೂ ಶೆಕೆಯೂ ಬೇಸಿಗೆಯೂ ಚಳಿಗಾಲವೂ ಹಗಲೂ ರಾತ್ರಿಯೂ ನಿಂತು ಹೋಗವು ಎಂದು ಅಂದು ಕೊಂಡನು.

ಕೀರ್ತನೆಗಳು 89:37

ಚಂದ್ರನ ಹಾಗೆ ಅದು ಯುಗಯುಗಕ್ಕೂ, ಸ್ಥಿರವಾಗಿರುವದು; ಪರಲೋಕದಲ್ಲಿ ರುವ ಸಾಕ್ಷಿಯ ಹಾಗೆ ನಂಬಿಕೆ ಯುಳ್ಳದ್ದಾಗಿರುವದು ಸೆಲಾ.

ಕೀರ್ತನೆಗಳು 104:19

ನೇಮಿಸಿದ ಕಾಲಗಳಿಗೋಸ್ಕರ ಚಂದ್ರನನ್ನು ಉಂಟು ಮಾಡಿದ್ದಾನೆ; ಸೂರ್ಯನು ತನ್ನ ಅಸ್ತಮಾನ ವನ್ನು ತಿಳಿದಿದ್ದಾನೆ.

ಯೆಶಾಯ 54:9

ಇದು ನನಗೆ ನೋಹನ ಕಾಲದ ಪ್ರಳಯ ದಂತಿದೆ; ನೋಹನ ಕಾಲದ ಪ್ರಳಯವು ಇನ್ನು ಭೂಮಿಯ ಮೇಲೆ ಹರಿಯಗೊಡಿಸುವದಿಲ್ಲವೆಂದು ನಾನು ಪ್ರಮಾಣಮಾಡಿದ ಹಾಗೆಯೇ ಇನ್ನು ನಿನ್ನ ಮೇಲೆ ಕೋಪಗೊಳ್ಳುವದಿಲ್ಲ ಇಲ್ಲವೇ ನಿನ್ನನ್ನು ಗದರಿಸುವದಿಲ್ಲ ಎಂದು ಪ್ರಮಾಣಮಾಡಿದ್ದೇನೆ.

ಯೆಶಾಯ 66:22

ನಾನು ಉಂಟು ಮಾಡುವ ಹೊಸ ಆಕಾಶವೂ ಹೊಸ ಭೂಮಿಯೂ ನನ್ನ ಮುಂದೆ ನೆಲೆಯಾಗಿರುವ ಪ್ರಕಾರವೇ ನಿಮ್ಮ ಸಂತಾನವೂ ನಿಮ್ಮ ಹೆಸರೂ ನೆಲೆಯಾಗಿರುವದೆಂದು ಕರ್ತನು ಅನ್ನುತ್ತಾನೆ.

ಯೆರೆಮಿಯ 31:35

ತಮ್ಮ ಕುಮಾರ ಕುಮಾರ್ತೆಯರನ್ನು ಮೋಲೆಕನಿಗೆ ಬೆಂಕಿ ದಾಟಿಸುವ ಹಾಗೆ ಹಿನ್ನೋಮನ ಮಗನ ಉನ್ನತ ಸ್ಥಳಗಳನ್ನು ಕಟ್ಟಿಸಿದ್ದಾರೆ; ಅದನ್ನು ನಾನು ಅವರಿಗೆ ಆಜ್ಞಾಪಿಸಲಿಲ್ಲ; ಅಂಥಾ ಅಸಹ್ಯ ನಡಿಸಿ, ಯೆಹೂದ ವನ್ನು ಪಾಪ ಮಾಡಿಸುವದು ನನ್ನ ಮನಸ್ಸಿನೊಳಗೆ ಬರಲಿಲ್ಲ.

Interlinear

Choose Theme