Home Bibles 2 ದಿನವೃತ್ತಾಂತ 12:15 · ಕನ್ನಡ ಬೈಬಲ್
2 ದಿನವೃತ್ತಾಂತ 12:15 · ಕನ್ನಡ ಬೈಬಲ್

ರೆಹಬ್ಬಾಮನ ಕ್ರಿಯೆಗಳು ಮೊದಲನೆಯವು ಗಳೂ ಕಡೆಯವುಗಳೂ ಪ್ರವಾದಿಯಾದ ಶೆಮಾಯನ ಪುಸ್ತಕದಲ್ಲಿಯೂ ವಂಶಾವಳಿಗಳನ್ನು ಕುರಿತು ಬರೆದ ದರ್ಶಿಯಾದ ಇದ್ದೋನ ಪುಸ್ತಕದಲ್ಲಿಯೂ ಬರೆಯ ಲ್ಪಟ್ಟವಲ್ಲವೇ? ಇದಲ್ಲದೆ ರೆಹಬ್ಬಾಮನಿಗೂ ಯಾರೊ ಬ್ಬಾಮನಿಗೂ ಯಾವಾಗಲೂ ಯುದ್ಧಉಂಟಾಗಿತ್ತು.ರೆಹಬ್ಬಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿ ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು; ಅವನ ಮಗ ನಾದ ಅಬೀಯನು ಅವನಿಗೆ ಬದಲಾಗಿ ಆಳಿದನು.

Cross references

1 ಅರಸುಗಳು 12:22

ಆದರೆ ದೇವರ ವಾಕ್ಯವು ದೇವರ ಮನುಷ್ಯ ನಾಗಿರುವ ಶೆಮಾಯನಿಗೆ ಉಂಟಾಯಿತು; ಏನಂದರೆ

1 ಅರಸುಗಳು 14:29

ಆದರೆ ರೆಹಬ್ಬಾಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಯೆಹೂದ ಅರಸುಗಳ ವೃತ್ತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?

1 ದಿನವೃತ್ತಾಂತ 29:29

ಆದರೆ ಅರಸನಾದ ದಾವೀದನ ಕ್ರಿಯೆಗಳು ಮೊದಲಿನಿಂದ ಕೊನೆಯ ವರೆಗೆ ಅವನ ಸಮಸ್ತ ಆಳಿಕೆಯೂ ಅವನ ಪರಾಕ್ರಮವೂ ಅವನ ಮೇಲೆಯೂ ಇಸ್ರಾಯೇಲಿನ ಮೇಲೆಯೂ ದೇಶಗಳ ಸಮಸ್ತ ರಾಜ್ಯಗಳ ಮೇಲೆಯೂ ಗತಿಸಿದ ಕಾಲಗಳೂಇಗೋ, ದರ್ಶಿಯಾದ ಸಮುವೇಲನ ಪುಸ್ತಕ ದಲ್ಲಿಯೂ ಪ್ರವಾದಿಯಾದ ನಾತಾನನ ಪುಸ್ತಕ ದಲ್ಲಿಯೂ ದರ್ಶಿಯಾದ ಗಾದನ ಪುಸ್ತಕದಲ್ಲಿಯೂ ಬರೆಯಲ್ಪಟ್ಟಿವೆ.

2 ದಿನವೃತ್ತಾಂತ 9:29

ಸೊಲೊಮೋನನ ಮಿಕ್ಕಾದ ಕ್ರಿಯೆಗಳು, ಮೊದ ಲನೆಯವುಗಳೂ ಕಡೆಯವುಗಳೂ ಪ್ರವಾದಿಯಾದ ನಾತಾನನ ಪುಸ್ತಕದಲ್ಲಿಯೂ ಶೀಲೋವಿನವನಾದ ಅಹೀಯನ ಪ್ರವಾದನೆಯಲ್ಲಿಯೂ ದರ್ಶಿಯಾದ ಇದ್ದೋವನು ನೆಬಾಟನ ಮಗನಾದ ಯಾರೊಬ್ಬಾಮ ನಿಗೆ ವಿರೋಧವಾಗಿ ಹೇಳಿದ ದರ್ಶನಗಳಲ್ಲಿಯೂ ಅವು ಬರೆಯಲ್ಪಟ್ಟವಲ್ಲವೋ?

2 ದಿನವೃತ್ತಾಂತ 11:2

ಕರ್ತನ ವಾಕ್ಯವು ದೇವರ ಮನುಷ್ಯನಾಗಿರುವ ಶೆಮಾಯನಿಗೆ ಉಂಟಾಯಿತು;

2 ದಿನವೃತ್ತಾಂತ 12:5

ಆಗ ಪ್ರವಾದಿಯಾದ ಶೆಮಾಯನು ರೆಹಬ್ಬಾಮನ ಬಳಿಗೂ ಶೀಶಕನ ನಿಮಿತ್ತ ಯೆರೂಸಲೇಮಿನಲ್ಲಿ ಕೂಡಿಕೊಂಡ ಯೆಹೂದದ ಪ್ರಧಾನರ ಬಳಿಗೂ ಬಂದು ಅವರಿಗೆನೀವು ನನ್ನನ್ನು ಬಿಟ್ಟುಬಿಟ್ಟದ್ದರಿಂದ ನಾನು ನಿಮ್ಮನ್ನು ಶೀಶಕನ ಕೈಯಲ್ಲಿ ಬಿಟ್ಟುಬಿಟ್ಟೆನೆಂದು ಕರ್ತನು ಹೇಳು ತ್ತಾನೆ ಅಂದನು.

2 ದಿನವೃತ್ತಾಂತ 13:1

ಅರಸನಾದ ಯಾರೊಬ್ಬಾಮನ ಹದಿನೆಂಟನೇ ವರುಷದಲ್ಲಿ ಅಬೀಯನು ಯೆಹೂದದ ಮೇಲೆ ಆಳಲು ಆರಂಭಿಸಿದನು.

2 ದಿನವೃತ್ತಾಂತ 13:2

ಅವನು ಯೆರೂಸಲೇಮಿನಲ್ಲಿ ಮೂರು ವರುಷ ಆಳಿದನು. ಅವನ ತಾಯಿಯ ಹೆಸರು ವಿಾಕಾಯ, ಗಿಬೆಯದ ಊರೀಯೇಲನ ಮಗಳು.

2 ದಿನವೃತ್ತಾಂತ 13:22

ಅಬೀ ಯನ ಮಿಕ್ಕಾದ ಕ್ರಿಯೆಗಳೂ ಅವನ ನಡತೆಗಳೂ ಮಾತುಗಳೂ ಪ್ರವಾದಿಯಾದ ಇದ್ದೋನನ ವರ್ತ ಮಾನಗಳಲ್ಲಿ ಬರೆಯಲ್ಪಟ್ಟಿವೆ.

2 ದಿನವೃತ್ತಾಂತ 16:11

ಇಗೋ, ಆಸನ ಕಾರ್ಯಗಳು ಮೊದಲನೆಯವುಗಳೂ ಕಡೆಯವುಗಳೂ ಯೆಹೂ ದದ ಇಸ್ರಾಯೇಲಿನ ಅರಸರ ಪುಸ್ತಕದಲ್ಲಿ ಬರೆದಿವೆ.

2 ದಿನವೃತ್ತಾಂತ 20:34

ಯೆಹೋಷಾಫಾಟನ ಇತರ ಕ್ರಿಯೆಗಳು, ಮೊದಲನೆಯವುಗಳೂ ಕಡೆಯವುಗಳೂ ಇಗೋ, ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಹೇಳಲ್ಪಟ್ಟ ಹನಾನೀಯ ಮಗನಾದ ಯೇಹೂವಿನ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

2 ದಿನವೃತ್ತಾಂತ 28:26

ಅವನ ಇತರ ಕ್ರಿಯೆಗಳೂ ಅವನ ಸಕಲ ಮಾರ್ಗಗಳೂ--ಮೊದಲನೆಯವುಗಳೂ ಕಡೆಯವು ಗಳೂ ಇಗೋ, ಯೆಹೂದದ ಇಸ್ರಾಯೇಲ್ಯರ ಅರಸು ಗಳ ಪುಸ್ತಕದಲ್ಲಿ ಬರೆಯಲ್ಪಟ್ಟವೆ.ಆಹಾಜನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ಅವನನ್ನು ಯೆರೂಸಲೇಮ್‌ ಪಟ್ಟಣದಲ್ಲಿ ಹೂಣಿಟ್ಟರು; ಆದರೆ ಇಸ್ರಾಯೇಲಿನ ಅರಸುಗಳ ಸಮಾಧಿಯ ಸ್ಥಳದಲ್ಲಿ ಅವನನ್ನು ತರಲಿಲ್ಲ. ಅವನ ಮಗನಾದ ಹಿಜ್ಕೀಯನು ಅವನಿಗೆ ಬದಲಾಗಿ ಆಳಿದನು.

2 ದಿನವೃತ್ತಾಂತ 35:27

ಅವನ ಕ್ರಿಯೆಗಳೂ ಮೊದಲನೆಯವುಗಳೂ ಕಡೆ ಯವುಗಳೂ ಇಸ್ರಾಯೇಲ್‌ ಯೆಹೂದದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

Interlinear

Choose Theme