ಆಗ ತೂರಿನ ಅರಸನಾದ ಹಿರಾಮನು ಪ್ರತ್ಯು ತ್ತರವನ್ನು ಬರೆದು ಸೊಲೊಮೋನನಿಗೆ ಕಳುಹಿಸಿಕರ್ತನು ತನ್ನ ಜನರನ್ನು ಪ್ರೀತಿ ಮಾಡಿದ್ದರಿಂದ ಆತನು ನಿನ್ನನ್ನು ಅವರ ಮೇಲೆ ಅರಸನಾಗಲು ಮಾಡಿದ್ದಾನೆ ಎಂದು ಹೇಳಿದನು.
Cross references
ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು.
ನೀವು ಎಲ್ಲಾ ಜನಗಳಿಗಿಂತ ಹೆಚ್ಚಾಗಿರುವ ಕಾರಣ ಕರ್ತನು ನಿಮ್ಮನ್ನು ಪ್ರೀತಿಸಿ ಆರಿಸಿಕೊಳ್ಳಲಿಲ್ಲ; ನೀವು ಎಲ್ಲಾ ಜನಗಳಿಗಿಂತ ಬಹಳ ಸ್ವಲ್ಪ.
ನಿನ್ನನ್ನು ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂಡ್ರಿಸುವ ಹಾಗೆ ನಿನ್ನಲ್ಲಿ ಇಷ್ಟಪಟ್ಟ ನಿನ್ನ ದೇವರಾದ ಕರ್ತನು ಸ್ತುತಿಸಲ್ಪಡಲಿ. ಕರ್ತನು ಯುಗಯುಗಕ್ಕೂ ಇಸ್ರಾಯೇಲನ್ನು ಪ್ರೀತಿ ಮಾಡಿದ್ದರಿಂದ ನ್ಯಾಯವನ್ನೂ ನೀತಿಯನ್ನೂ ನಡಿಸಲು ಆತನು ನಿನ್ನನ್ನು ಅರಸನಾಗ ಮಾಡಿದನು ಅಂದಳು.
ನಿನ್ನ ಕರ್ತನಾದ ದೇವರಿಗೋಸ್ಕರ ಅರಸ ನಾಗಿರಲು ತನ್ನ ಸಿಂಹಾಸನದ ಮೇಲೆ ನಿನ್ನನ್ನು ಇರಿ ಸಲು ನಿನ್ನಲ್ಲಿ ಇಷ್ಟಪಟ್ಟ ನಿನ್ನ ದೇವರಾದ ಕರ್ತನು ಸ್ತುತಿಸಲ್ಪಡಲಿ. ನಿನ್ನ ದೇವರು ಇಸ್ರಾಯೇಲನ್ನು ಯುಗ ಯುಗಕ್ಕೂ ನಿಲ್ಲಿಸಲು ಅವರನ್ನು ಪ್ರೀತಿಮಾಡಿದ್ದರಿಂದ ನ್ಯಾಯವನ್ನೂ ನೀತಿಯನ್ನೂ ನಡಿಸಲು ಆತನು ನಿನ್ನನ್ನು ಅವರ ಮೇಲೆ ಅರಸನಾಗಿರಲು ಮಾಡಿದನು ಅಂದಳು.
ಆತನ ನಾಮವು ಎಂದೆಂದಿಗೂ ಇರುವದು; ಸೂರ್ಯನು ಇರುವವರೆಗೂ ಆತನ ಹೆಸರು ಇರು ವದು. ಮನುಷ್ಯರು ಆತನಲ್ಲಿ ಆಶೀರ್ವಾದ ಹೊಂದು ವರು. ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತ ನೆಂದು ಕರೆಯುವರು.
ಅವನು ನಮ್ಮ ಜನಾಂಗವನ್ನು ಪ್ರೀತಿಸುವದಲ್ಲದೆ ನಮಗಾಗಿ ಒಂದು ಸಭಾಮಂದಿರವನ್ನು ಕಟ್ಟಿಸಿದ್ದಾನೆ ಎಂದು ಬೇಡಿಕೊಂಡರು.