Home Bibles 2 ದಿನವೃತ್ತಾಂತ 18:4 · ಕನ್ನಡ ಬೈಬಲ್
2 ದಿನವೃತ್ತಾಂತ 18:4 · ಕನ್ನಡ ಬೈಬಲ್

ಆದರೆ ಯೆಹೋಷಾಫಾಟನು ಇಸ್ರಾಯೇಲಿನ ಅರಸನಿಗೆ--ದಯಮಾಡಿ ಈ ಹೊತ್ತು ಕರ್ತನ ವಾಕ್ಯವನ್ನು ವಿಚಾರಿಸು ಅಂದನು.

Cross references

1 ಸಮುವೇಲ 23:2

ಆದದರಿಂದ ದಾವೀದನು--ನಾನು ಈ ಫಿಲಿಷ್ಟಿ ಯರನ್ನು ಹೊಡೆಯಲು ಹೋಗಲೋ ಎಂದು ಕರ್ತ ನನ್ನು ಕೇಳಿದನು; ಅದಕ್ಕೆ ಕರ್ತನು--ನೀನು ಹೋಗಿ ಫಿಲಿಷ್ಟಿಯರನ್ನು ಹೊಡೆದು ಕೆಯಾಲಾವನ್ನು ರಕ್ಷಿಸು ಅಂದನು.

1 ಸಮುವೇಲ 23:4

ದಾವೀ ದನು ತಿರಿಗಿ ಕರ್ತನನ್ನು ಕೇಳಿದನು. ಅದಕ್ಕೆ ಕರ್ತನು ಪ್ರತ್ಯುತ್ತರವಾಗಿ--ನೀನೆದ್ದು ಕೆಯಾಲಾಕ್ಕೆ ಹೋಗು; ನಾನು ಫಿಲಿಷ್ಟಿಯರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡು ವೆನು ಅಂದನು.

1 ಸಮುವೇಲ 23:9

ಸೌಲನು ತನಗೆ ಕೇಡನ್ನು ಮಾಡಲು ಗುಟ್ಟಾಗಿ ಯೋಚಿಸುತ್ತಿದ್ದಾನೆಂದು ದಾವೀದನು ತಿಳಿದಿ ದ್ದರಿಂದ ಯಾಜಕನಾದ ಎಬ್ಯಾತಾರನಿಗೆ--ಎಫೋದನ್ನು ಇಲ್ಲಿಗೆ ತಕ್ಕೊಂಡು ಬಾ ಅಂದನು.

2 ಸಮುವೇಲ 2:1

ಇದಾದ ಮೇಲೆ ದಾವೀದನು ಕರ್ತನನ್ನು -- ಯೆಹೂದದ ಪಟ್ಟಣಗಳಲ್ಲಿ ಯಾವದಕ್ಕಾದರೂ ಹೋಗಲೋ ಎಂದು ಕೇಳಿದನು. ಕರ್ತನು ಅವನಿಗೆ--ಹೋಗು ಅಂದನು. ದಾವೀ ದನು--ನಾನು ಎಲ್ಲಿಗೆ ಹೋಗಲಿ ಎಂದು ಕೇಳಿದಕ್ಕೆ ಆತನು -- ಹೆಬ್ರೋನಿಗೆ ಅಂದನು.

2 ಸಮುವೇಲ 5:19

ಆಗ ದಾವೀದನು--ನಾನು ಫಿಲಿಷ್ಟಿಯರ ಮೇಲೆ ಹೋಗ ಬೇಕೋ? ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡು ವಿಯೋ ಎಂದು ಕರ್ತನನ್ನು ಕೇಳಿದನು. ಅದಕ್ಕೆ ಕರ್ತನು ದಾವೀದನಿಗೆ--ಹೋಗು; ಫಿಲಿಷ್ಟಿಯರನ್ನು ನಿನ್ನ ಕೈ ಯಲ್ಲಿ ಖಂಡಿತಾ ಕೊಡುವೆನು ಎಂದು ಹೇಳಿದನು.

2 ಸಮುವೇಲ 5:23

ದಾವೀ ದನು ಕರ್ತನನ್ನು ಕೇಳಿಕೊಂಡಾಗ ಆತನು ಅವನಿಗೆನೀನು ಹೋಗದೆ ಅವರ ಹಿಂದುಗಡೆ ಸುತ್ತಿಕೊಂಡು ಹೋಗಿ ಹಿಪ್ಪಲಿ ಗಿಡಗಳಿಗೆದುರಾಗಿ ಅವರ ಮೇಲೆ ಬರಬೇಕು.

1 ಅರಸುಗಳು 22:5

ಆದರೆ ಯೆಹೂಷಾಫಾಟನು ಇಸ್ರಾಯೇಲಿನ ಅರಸ ನಿಗೆ--ನೀನು ದಯಮಾಡಿ ಇಂದು ಕರ್ತನ ವಾಕ್ಯವನ್ನು ವಿಚಾರಿಸು ಅಂದನು.

2 ದಿನವೃತ್ತಾಂತ 34:26

ಆದರೆ ಕರ್ತನಿಂದ ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ--ನೀನು ಕೇಳಿದ ಮಾತುಗ ಳನ್ನು ಕುರಿತು ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--

ಕೀರ್ತನೆಗಳು 27:4

ಒಂದ ನ್ನೇ ಕರ್ತನಿಂದ ಬಯಸಿದೆನು, ಅದನ್ನೇ ಹುಡುಕುವೆನು; ಕರ್ತನ ರಮ್ಯತೆಯನ್ನು ದೃಷ್ಟಿಸುವದೂ ಆತನ ಮಂದಿರ ದಲ್ಲಿ ವಿಚಾರಿಸುವದೂ ನನ್ನ ಜೀವನದ ದಿನಗಳಲ್ಲೆಲ್ಲಾ ಕರ್ತನ ಆಲಯದಲ್ಲಿ ವಾಸಮಾಡುವದೂ ಆಗಿದೆ.

ಯೆರೆಮಿಯ 21:2

ಹೇಗಂದರೆ--ದಾವೀ ದನ ಸಿಂಹಾಸನದ ಮೇಲೆ ಕೂತುಕೊಳ್ಳುವ ಯೆಹೂದದ ಅರಸನೇ, ನೀನೂ ನಿನ್ನ ಸೇವಕರೂ ಈ ಬಾಗಿಲುಗಳಿಂದ ಪ್ರವೇಶಿಸುವ ನಿನ್ನ ಜನರೂ ಕರ್ತನ ವಾಕ್ಯವನ್ನು ಕೇಳಲಿ, ಕರ್ತನು ಹೇಳುವದೇನಂದರೆ--

ಯೆಹೆಜ್ಕೇಲ 20:3

ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ ಅವ ರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನ ಬಳಿಗೆ ವಿಚಾರಣೆಗಾಗಿ ಬಂದಿರೋ? ನನ್ನ ಜೀವದಾಣೆ, ನಾನು ನಿಮ್ಮಿಂದ ವಿಚಾರಿಸಲ್ಪಡುವದಿಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ.

Interlinear

Choose Theme