Home Bibles 1 ಸಮುವೇಲ 23:4 · ಕನ್ನಡ ಬೈಬಲ್
1 ಸಮುವೇಲ 23:4 · ಕನ್ನಡ ಬೈಬಲ್

ದಾವೀ ದನು ತಿರಿಗಿ ಕರ್ತನನ್ನು ಕೇಳಿದನು. ಅದಕ್ಕೆ ಕರ್ತನು ಪ್ರತ್ಯುತ್ತರವಾಗಿ--ನೀನೆದ್ದು ಕೆಯಾಲಾಕ್ಕೆ ಹೋಗು; ನಾನು ಫಿಲಿಷ್ಟಿಯರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡು ವೆನು ಅಂದನು.

Cross references

ಯೆಹೋಶುವ 8:7

ಆಗ ನೀವು ಹೊಂಚಿಕೊಳ್ಳುವ ಸ್ಥಳದಿಂದ ಎದ್ದು ಬಂದು ಪಟ್ಟಣವನ್ನು ಸ್ವಾಧೀನ ಮಾಡಿಕೊಳ್ಳಬೇಕು; ಯಾಕಂದರೆ ನಿಮ್ಮ ದೇವರಾದ ಕರ್ತನು ಅದನ್ನು ನಿಮ್ಮ ಕೈಗೆ ಒಪ್ಪಿಸಿ ಕೊಡುವನು.

ನ್ಯಾಯಾಧಿಪತಿಗಳು 6:39

ಗಿದ್ಯೋನನು ದೇವರಿಗೆ--ನಾನು ಇನ್ನೊಂದು ಸಾರಿ ಮಾತನಾಡುವದರಿಂದ ನಿನ್ನ ಕೋಪವು ನನ್ನ ಮೇಲೆ ಉರಿಯಬಾರದು. ಉಣ್ಣೆ ಯಿಂದ ಇನ್ನೊಂದು ಸಾರಿ ನಾನು ನಿನ್ನನ್ನು ಶೋಧಿಸು ವೆನು. ಉಣ್ಣೆ ಮಾತ್ರವೇ ಒಣಗುವ ಹಾಗೆಯೂ ಭೂಮಿಯಲ್ಲೆಲ್ಲಾ ಮಂಜು ಇರುವ ಹಾಗೆಯೂ ಅಪ್ಪಣೆ ಆಗಲಿ ಅಂದನು.ಹಾಗೆಯೇ ದೇವರು ಆ ರಾತ್ರಿ ಯಲ್ಲಿ ಮಾಡಿದನು. ಉಣ್ಣೆ ಮಾತ್ರವೇ ಒಣಗಿ ಭೂಮಿಯಲ್ಲೆಲ್ಲಿಯೂ ಮಂಜು ಇತ್ತು.

ನ್ಯಾಯಾಧಿಪತಿಗಳು 7:7

ಆಗ ಕರ್ತನು ಗಿದ್ಯೋನನಿಗೆ--ನೆಕ್ಕಿ ಕುಡಿದ ಆ ಮುನ್ನೂರು ಜನರಿಂದ ನಾನು ನಿಮ್ಮನ್ನು ರಕ್ಷಿಸಿ ಮಿದ್ಯಾನ್ಯರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನು; ಇತರ ಜನರೆಲ್ಲಾ ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ ಅಂದನು.

ನ್ಯಾಯಾಧಿಪತಿಗಳು 7:9

ಅದೇ ರಾತ್ರಿಯಲ್ಲಿ ಆದದ್ದೇನಂದರೆ, ಕರ್ತನು ಅವನಿಗೆ--ನೀನು ಎದ್ದು ದಂಡಿಗೆ ಇಳಿದು ಹೋಗು; ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ.

1 ಸಮುವೇಲ 10:22

ಆದದರಿಂದ ಅವನು ಈಗ ಇಲ್ಲಿ ಬರುವನೋ ಎಂದು ಕರ್ತನನ್ನು ವಿಚಾರಿಸಿದರು. ಕರ್ತನು--ಇಗೋ, ಅವನು ಸಾಮಗ್ರಿ ಯಲ್ಲಿ ಅಡಗಿಕೊಂಡಿದ್ದಾನೆ ಎಂದು ಹೇಳಿದನು.

1 ಸಮುವೇಲ 28:6

ಸೌಲನು ಕರ್ತನನ್ನು ಕೇಳಿಕೊಂಡಾಗ ಕರ್ತನು ಅವನಿಗೆ ಸ್ವಪ್ನಗ ಳಿಂದಲಾದರೂ ಊರೀಮಿನಿಂದಲಾದರೂ ಪ್ರವಾದಿ ಗಳಿಂದಲಾದರೂ ಪ್ರತ್ಯುತ್ತರಕೊಡಲಿಲ್ಲ.

1 ಸಮುವೇಲ 30:8

ದಾವೀದನು ಕರ್ತನಿಗೆ--ನಾನು ಆ ದಂಡಿನ ಹಿಂದೆ ಬೆನ್ನಟ್ಟಲೋ? ನಾನು ಅವರನ್ನು ಹಿಂದಟ್ಟಬಹುದೋ ಎಂದು ಕೇಳಿದನು. ಅದಕ್ಕೆ ಆತನು--ನೀನು ಹಿಂದಟ್ಟು; ನಿಶ್ಚಯವಾಗಿ ನೀನು ಅವರನ್ನು ಹಿಂದಟ್ಟಿ ಎಲ್ಲರನ್ನು ಬಿಡಿಸಿಕೊಳ್ಳುವಿ ಅಂದನು.

2 ಸಮುವೇಲ 5:19

ಆಗ ದಾವೀದನು--ನಾನು ಫಿಲಿಷ್ಟಿಯರ ಮೇಲೆ ಹೋಗ ಬೇಕೋ? ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡು ವಿಯೋ ಎಂದು ಕರ್ತನನ್ನು ಕೇಳಿದನು. ಅದಕ್ಕೆ ಕರ್ತನು ದಾವೀದನಿಗೆ--ಹೋಗು; ಫಿಲಿಷ್ಟಿಯರನ್ನು ನಿನ್ನ ಕೈ ಯಲ್ಲಿ ಖಂಡಿತಾ ಕೊಡುವೆನು ಎಂದು ಹೇಳಿದನು.

2 ಅರಸುಗಳು 3:18

ಇದಲ್ಲದೆ ಇದು ಕರ್ತನ ದೃಷ್ಟಿಗೆ ಅಲ್ಪವಾಗಿರುವದು; ಆತನು ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿ ಕೊಡುವನು.

1 ದಿನವೃತ್ತಾಂತ 14:10

ದಾವೀ ದನು--ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗ ಬೇಕೋ? ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿ ಕೊಡು ವಿಯೋ ಎಂದು ದೇವರನ್ನು ವಿಚಾರಿಸಿದನು. ಕರ್ತನು ಅವನಿಗೆ--ಹೋಗು; ನಾನು ಅವರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನು ಅಂದನು.

Interlinear

Choose Theme