Home Bibles 2 ದಿನವೃತ್ತಾಂತ 13:15 · ಕನ್ನಡ ಬೈಬಲ್
2 ದಿನವೃತ್ತಾಂತ 13:15 · ಕನ್ನಡ ಬೈಬಲ್

ಇದಲ್ಲದೆ ಯೆಹೂದದ ಮನುಷ್ಯರು ಆರ್ಭಟಿಸಿದರು; ಯೆಹೂದದ ಮನುಷ್ಯರು ಆರ್ಭಟಿ ಸಿದಾಗ ಏನಾಯಿತಂದರೆ, ದೇವರು ಅಬೀಯನ ಮತ್ತು ಯೆಹೂದದವರ ಮುಂದೆ ಯಾರೊಬ್ಬಾಮ ನನ್ನೂ ಸಮಸ್ತ ಇಸ್ರಾಯೇಲನ್ನೂ ಹೊಡೆದನು.

Cross references

ಅಂಕೆಗಳ ಪುಸ್ತಕ 32:4

ಕರ್ತನು ಇಸ್ರಾಯೇಲ್ಯರ ಸಭೆಯ ಮುಂದೆ ಹೊಡೆದ ದೇಶವೂ ಪಶುಗಳ ದೇಶವಾಗಿದೆ; ನಿನ್ನ ಸೇವಕರಿಗೆ ಪಶುಗಳು ಉಂಟು.

ಯೆಹೋಶುವ 6:16

ಏಳನೇ ಸಾರಿ ಯಾಜಕರು ತುತೂರಿಗಳನ್ನು ಊದುವಾಗ ಆದದ್ದೇನಂದರೆ, ಯೆಹೋಶುವನು ಜನರಿಗೆ--ಆರ್ಭಟಿಸಿರಿ; ಕರ್ತನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ ಅಂದನು.

ಯೆಹೋಶುವ 6:20

ಹೀಗೆ ಯಾಜಕರು ತುತೂರಿಗಳನ್ನು ಊದಿದಾಗ ಜನರು ಆರ್ಭಟಿಸಿದರು. ತುತ್ತೂರಿಯ ಶಬ್ದವನ್ನು ಜನರು ಕೇಳಿದಾಗ ಮಹಾ ಆರ್ಭಟವಾಗಿ ಆರ್ಭಟಿಸುತ್ತಲೇ ಗೋಡೆಯು ನೆಲಸಮವಾಗಿ ಕೆಳಗೆ ಬಿತ್ತು; ಹೀಗೆ ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಏರಿಹೋದನು. ಆಗ ಪಟ್ಟಣವು ಅವರಿಗೆ ಸ್ವಾಧೀನ ವಾಯಿತು.

ಯೆಹೋಶುವ 11:8

ಕರ್ತನು ಅವರನ್ನು ಇಸ್ರಾಯೇಲಿನ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವರು ಅವರನ್ನು ಹೊಡೆದು ದೊಡ್ಡ ಚೀದೋನಿನವರೆಗೂ ಮಿಸ್ರೆಫೋತ್ಮಯೀಮಿನ ವರೆಗೂ ಮೂಡಲಲ್ಲಿರುವ ಮಿಚ್ಪೆಯ ತಗ್ಗಿನ ವರೆಗೂ ಹಿಂದಟ್ಟಿ ಅವರಲ್ಲಿ ಒಬ್ಬನ ನ್ನಾದರೂ ಉಳಿಸದೆ ಅವರನ್ನು ಹೊಡೆದುಬಿಟ್ಟರು.

ನ್ಯಾಯಾಧಿಪತಿಗಳು 4:15

ಕರ್ತನು ಸೀಸೆರನನ್ನೂ ಅವನ ಎಲ್ಲಾ ರಥಗಳನ್ನೂ ಎಲ್ಲಾ ಸೈನ್ಯವನ್ನೂ ಬಾರಾಕನ ಮುಂದೆ ಕತ್ತಿಯಿಂದ ಚದರಿಸಿದನು.

ನ್ಯಾಯಾಧಿಪತಿಗಳು 7:18

ನಾನೂ ನನ್ನ ಸಂಗಡ ಇರುವವ ರೆಲ್ಲರೂ ತುತೂರಿಯನ್ನು ಊದುವಾಗ ನೀವೆಲ್ಲರೂ ದಂಡಿನ ಸುತ್ತಲೂ ಎಲ್ಲಾ ಕಡೆಯಲ್ಲೂ ತುತೂರಿಗಳನ್ನು ಊದಿ ಕರ್ತನ ಕತ್ತಿ, ಗಿದ್ಯೋನನ ಕತ್ತಿ ಎಂದು ಹೇಳಿರಿ ಅಂದನು.

2 ಅರಸುಗಳು 5:1

ಅರಾಮ್ಯರ ಅರಸನ ಸೈನ್ಯಾಧಿಪತಿಯಾದ ನಾಮಾನನು ತನ್ನ ಯಜಮಾನನ ಮುಂದೆ ದೊಡ್ಡವನಾಗಿಯೂ ಘನವುಳ್ಳವನಾಗಿಯೂ ಇದ್ದನು. ಕರ್ತನು ಅವನಿಂದ ಅರಾಮ್ಯರಿಗೆ ಬಿಡುಗಡೆಯನ್ನು ಉಂಟುಮಾಡಿದ್ದನು; ಇದಲ್ಲದೆ ಅವನು ಪರಾಕ್ರಮ ಶಾಲಿಯಾಗಿದ್ದನು. ಆದರೆ ಅವನು ಕುಷ್ಠರೋಗಿಯಾ ಗಿದ್ದನು.

2 ದಿನವೃತ್ತಾಂತ 14:11

ಆಗ ಆಸನು ತನ್ನ ದೇವರಾದ ಕರ್ತನನ್ನು ಕರೆದು--ಕರ್ತನೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯಕೊಡು ವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು; ಯಾಕಂದರೆ ನಾವು ನಿನ್ನ ಮೇಲೆ ಆತುಕೊಂಡಿ ದ್ದೇವೆ; ನಿನ್ನ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ; ಓ ಕರ್ತನೇ, ನಿನ್ನ ಹೊರತು ಬೇರೆ ಯಾರೂ ಇಲ್ಲ, ನೀನೇ ನಮ್ಮ ದೇವರು; ಮನುಷ್ಯನು ನಿನ್ನೆದುರಿನಲ್ಲಿ ಬಲಗೊಳ್ಳದಿರಲಿ ಅಂದನು.

2 ದಿನವೃತ್ತಾಂತ 14:12

ಆಗ ಕರ್ತನು ಕೂಷಿಯರನ್ನು ಆಸನ ಮುಂದೆಯೂ ಯೆಹೂ ದದವರ ಮುಂದೆಯೂ ಹೊಡೆದನು. ಆದದರಿಂದ ಕೂಷಿಯರು ಓಡಿಹೋದರು.

2 ದಿನವೃತ್ತಾಂತ 20:21

ಅವನು ಜನರ ಸಂಗಡ ಆಲೋಚನೆ ಮಾಡಿದ ತರುವಾಯ ಸೈನ್ಯದ ಮುಂದೆ ಅವರು ಹೊರಡುವಾಗ ಪರಿಶುದ್ಧತ್ವದ ಪ್ರಭೆಯನ್ನು ಸ್ತುತಿಸುವದಕ್ಕೆ ಕರ್ತನನ್ನು ಕೊಂಡಾಡಿರಿ, ಯಾಕಂದರೆ ಆತನ ಕೃಪೆಯು ಯುಗ ಯುಗಕ್ಕೂ ಇರುವದೆಂದು ಹೇಳುವದಕ್ಕೆ ಕರ್ತ ನಿಗೆ ಸಂಗೀತಗಾರರನ್ನು ನೇಮಿಸಿದನು.

2 ದಿನವೃತ್ತಾಂತ 20:22

ಅವರು ಹಾಡುವದಕ್ಕೂ ಸ್ತುತಿಸುವದಕ್ಕೂ ಆರಂಭಿಸಿದಾಗಲೇ ಕರ್ತನು ಯೆಹೂದದ ಮೇಲೆ ಬಂದ ಅಮ್ಮೋನ್‌, ಮೋವಾಬ್‌, ಸೇಯಾರ್‌ ಪರ್ವತಗಳ ಮಕ್ಕಳಿಗೆ ವಿರೋಧವಾಗಿ ಹೊಂಚಿಕೊಳ್ಳುವವರನ್ನು ಇಟ್ಟಿದ್ದ ರಿಂದ ಅವರು ಹೊಡೆಯಲ್ಪಟ್ಟಿದ್ದರು.

ಕೀರ್ತನೆಗಳು 47:1

ಎಲ್ಲಾ ಜನರೇ, ನೀವು ನಿಮ್ಮ ಕೈಗಳನ್ನು ತಟ್ಟಿರಿ; ಜಯಾರ್ಭಟದಿಂದ ದೇವರಿಗೆ ಧ್ವನಿಗೈಯಿರಿ.

ಕೀರ್ತನೆಗಳು 47:5

ದೇವರು ಮಹಾಧ್ವನಿಯಿಂದ, ಕರ್ತನು ತುತೂ ರಿಯ ಶಬ್ದದಿಂದ, ಮೇಲೆ ಹೋಗಿದ್ದಾನೆ.

ಕೀರ್ತನೆಗಳು 118:4

ಆತನ ಕರುಣೆಯು ಯುಗಯುಗಕ್ಕೂ ಇದೆ ಎಂದು ಕರ್ತನಿಗೆ ಭಯಪಡುವವರು ಹೇಳಲಿ.

ಯೆಶಾಯ 37:36

ಆಗ ಕರ್ತನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಹೊಡೆದನು. ಇನ್ನೂ ಮೊಬ್ಬಿರು ವಾಗಲೇ ಎದ್ದಾಗ ಇಗೋ, ಅವರು ಸತ್ತ ಹೆಣಗಳಾ ಗಿದ್ದರು.

Interlinear

Choose Theme