Home Bibles 1 ಸಮುವೇಲ 4:2 · ಕನ್ನಡ ಬೈಬಲ್
1 ಸಮುವೇಲ 4:2 · ಕನ್ನಡ ಬೈಬಲ್

ಫಿಲಿಷ್ಟಿ ಯರು ಇಸ್ರಾಯೇಲಿಗೆ ಎದುರಾಗಿ ವ್ಯೂಹವನ್ನು ಕಟ್ಟಿ ಯುದ್ಧ ಮಾಡಿದಾಗ ಇಸ್ರಾಯೇಲ್ಯರು ಫಿಲಿಷ್ಟಿಯರ ಮುಂದೆ ಹೊಡೆಯಲ್ಪಟ್ಟರು. ಹೇಗಂದರೆ, ಫಿಲಿಷ್ಟಿಯರು ಯುದ್ಧರಂಗದಲ್ಲಿ ಹೆಚ್ಚುಕಡಿಮೆ ನಾಲ್ಕು ಸಾವಿರ ಜನರನ್ನು ಕೊಂದುಹಾಕಿದರು.

Cross references

ಲೇವ್ಯಕಾಂಡ 26:37

ಓಡಿಸುವವ ನಿಲ್ಲದೆ ಒಬ್ಬರ ಮೇಲೊಬ್ಬರು ಕತ್ತಿಯ ಭಯದಿಂದಾದ ಹಾಗೆ ಬೀಳುವರು; ನಿಮ್ಮ ಶತ್ರುಗಳಿಗೆದುರಾಗಿ ನಿಂತುಕೊಳ್ಳುವದು ನಿಮ್ಮಿಂದಾಗದು.

ಅಂಕೆಗಳ ಪುಸ್ತಕ 14:45

ಆಗ ಆ ಬೆಟ್ಟದಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಕಾನಾ ನ್ಯರೂ ಇಳಿದು ಅವರನ್ನು ಹೊಡೆದು ಹೊರ್ಮಾದ ವರೆಗೆ ಅಟ್ಟಿಬಿಟ್ಟರು.

ಯೆಹೋಶುವ 7:5

ಆಯಿ ಮನುಷ್ಯರು ಇವರಲ್ಲಿ ಹೆಚ್ಚು ಕಡಿಮೆ ಮೂವತ್ತಾರು ಮಂದಿಯನ್ನು ಹೊಡೆದು ಹಾಕಿದರು. ಬಾಗಲಿನಿಂದ ಪ್ರಾರಂಭಿಸಿ ಷೆಬಾರಿಮಿನ ವರೆಗೂ ಅವರನ್ನು ಹಿಂದಟ್ಟಿ ಇಳಿದು ಹೋಗುವ ವರೆಗೂ ಅವರನ್ನು ಹೊಡೆದರು. ಆದದ ರಿಂದ ಜನರ ಹೃದಯವು ಕರಗಿ ನೀರಿನಂತಾಯಿತು.

ಯೆಹೋಶುವ 7:12

ಆದದ ರಿಂದ ಇಸ್ರಾಯೇಲ್‌ ಮಕ್ಕಳು ತಮ್ಮ ಶತ್ರುಗಳ ಮುಂದೆ ನಿಲ್ಲಲಾರದೆ ತಮ್ಮ ಶತ್ರುಗಳಿಗೆ ಬೆನ್ನುಕೊಟ್ಟರು. ಯಾಕಂದರೆ ಅವರು ಶಾಪಕ್ಕೀಡಾದರು. ನೀವು ಶಾಪ ಕ್ಕೀಡಾದದ್ದನ್ನು ನಿಮ್ಮ ಮಧ್ಯದಲ್ಲಿಂದ ನಾಶಮಾಡದೆ ಇದ್ದರೆ ಇನ್ನು ಮೇಲೆ ನಾನು ನಿಮ್ಮ ಸಂಗಡ ಇರುವದಿಲ್ಲ.

1 ಸಮುವೇಲ 17:8

ಇದಲ್ಲದೆ ಖೇಡ್ಯ ಹಿಡಿಯುವವನು ಅವನ ಮುಂದೆ ನಡೆದನು. ಅವನು ನಿಂತು ಇಸ್ರಾ ಯೇಲ್‌ ಸೈನ್ಯದವರಿಗೆ ಕೂಗಿ ಹೇಳಿದ್ದೇನಂದರೆ--ಯಾಕೆ ನೀವು ವ್ಯೂಹ ಕಟ್ಟಲು ಹೊರಟಿರಿ? ನಾನು ಫಿಲಿಷ್ಟಿಯನಲ್ಲವೋ? ನೀವು ಸೌಲನ ಸೇವಕರ ಲ್ಲವೋ? ನೀವು ನಿಮಗೋಸ್ಕರ ಒಬ್ಬನನ್ನು ಆದು ಕೊಳ್ಳಿರಿ; ಅವನು ನನ್ನ ಮುಂದೆ ಬರಲಿ.

1 ಸಮುವೇಲ 17:21

ಇಸ್ರಾಯೇಲ್ಯರೂ ಫಿಲಿಷ್ಟಿ ಯರೂ ಸೈನ್ಯಕ್ಕೆದುರಾಗಿ ಸೈನ್ಯ ವ್ಯೂಹ ಕಟ್ಟಿಕೊಂಡಿದ್ದರು.

ಕೀರ್ತನೆಗಳು 44:9

ಆದರೆ ನೀನು ನಮ್ಮನ್ನು ತಳ್ಳಿಬಿಟ್ಟು ನಮ್ಮನ್ನು ಅವಮಾನಪಡಿಸುತ್ತೀ; ನಮ್ಮ ಸೈನ್ಯಗಳ ಸಂಗಡ ನೀನು ಹೊರಟುಹೋಗುವದಿಲ್ಲ.

ಕೀರ್ತನೆಗಳು 79:7

ಅವರು ಯಾಕೋಬನ್ನು ನುಂಗಿಬಿಟ್ಟಿದ್ದಾರೆ; ಅವನ ನಿವಾಸವನ್ನು ಹಾಳುಮಾಡಿದ್ದಾರೆ.

ಕೀರ್ತನೆಗಳು 106:40

ಆಗ ಕರ್ತನ ಕೋಪವು ಆತನ ಜನರಿಗೆ ವಿರೋಧವಾಗಿ ಉರಿ ಯಿತು; ಆತನು ತನ್ನ ಸ್ವಂತ ಬಾಧ್ಯತೆಯನ್ನು ಅಸಹ್ಯಿಸಿ ಕೊಂಡು

ವಿಲಾಪಗಳು 3:40

ನಾವು ನಮ್ಮ ಮಾರ್ಗಗಳನ್ನು ಶೋಧಿಸಿ ಪರೀಕ್ಷಿಸಿ ಕೊಂಡು ಮತ್ತೆ ಕರ್ತನ ಬಳಿಗೆ ತಿರುಗಿಕೊಳ್ಳೋಣ.

Interlinear

Choose Theme