Home Bibles ☰ Books 1 ಸಮುವೇಲ 31:6 · ಕನ್ನಡ ಬೈಬಲ್
1 ಸಮುವೇಲ 31:6 · ಕನ್ನಡ ಬೈಬಲ್

ಹೀಗೆ ಆ ದಿನ ಸೌಲನೂ ಅವನ ಮೂವರು ಮಕ್ಕಳೂ ಅವನ ಆಯುಧ ಹಿಡಿಯುವವನೂ ಎಲ್ಲಾ ಜನರೂ ಸತ್ತರು.

Cross references

1 ಸಮುವೇಲ 4:10

ಫಿಲಿಷ್ಟಿಯರು ಯುದ್ಧಮಾಡಿದರು. ಇಸ್ರಾಯೇಲ್ಯರು ಹೊಡೆಯಲ್ಪಟ್ಟು ಅವರು ತಮ್ಮ ತಮ್ಮ ಡೇರೆಗಳಿಗೆ ಓಡಿಹೋದರು. ಅಲ್ಲಿ ಮಹಾಸಂಹಾರ ವಾಯಿತು. ಯಾಕಂದರೆ ಇಸ್ರಾಯೇಲಿನ ಮೂವತ್ತು ಸಾವಿರ ಕಾಲಾಳುಗಳು ಮಡಿದರು.

1 ಸಮುವೇಲ 11:15

ಹಾಗೆಯೇ ಜನರೆಲ್ಲರು ಗಿಲ್ಗಾಲಿಗೆ ಹೋಗಿ ಆ ಸ್ಥಳದಲ್ಲಿ ಕರ್ತನ ಮುಂದೆ ಸೌಲನನ್ನು ಅರಸನನ್ನಾಗಿ ಮಾಡಿ ಕರ್ತನಿಗೆ ಸಮಾ ಧಾನದ ಬಲಿಗಳನ್ನು ಅರ್ಪಿಸಿದರು. ಅಲ್ಲಿ ಸೌಲನೂ ಸಮಸ್ತ ಇಸ್ರಾಯೇಲ್ಯರೂ ಬಹಳವಾಗಿ ಸಂತೋಷ ಪಟ್ಟರು.

1 ಸಮುವೇಲ 12:17

ಈ ದಿನ ಗೋಧಿಯ ಸುಗ್ಗಿ ಅಲ್ಲವೋ? ನೀವು ನಿಮಗೆ ಒಬ್ಬ ಅರಸನನ್ನು ಕೇಳಿದ್ದ ರಿಂದ ಕರ್ತನ ದೃಷ್ಟಿಗೆ ನೀವು ಮಾಡಿದ ನಿಮ್ಮ ಕೆಟ್ಟತ ನವು ಹೆಚ್ಚಾಗಿದೆ ಎಂದು ತಿಳುಕೊಂಡು ನೋಡುವ ಹಾಗೆ ನಾನು ಕರ್ತನಿಗೆ ಮೊರೆಯಿಡುವೆನು; ಆಗ ಆತನು ಗುಡುಗನ್ನೂ ಮಳೆಯನ್ನೂ ಕಳುಹಿಸುವನು.

1 ಸಮುವೇಲ 12:25

ಆದರೆ ನೀವು ಕೆಟ್ಟತನವನ್ನು ಇನ್ನೂ ಮಾಡಿದರೆ ನೀವೂ ನಿಮ್ಮ ಅರಸನೂ ನಾಶವಾಗುವಿರಿ ಅಂದನು.

1 ಸಮುವೇಲ 28:19

ಕರ್ತನು ನಿನ್ನ್ನ ಸಹಿತವಾಗಿ ಇಸ್ರಾಯೇಲ್ಯರನ್ನೂ ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿ ಕೊಡುವನು. ನಾಳೆ ನೀನೂ ನಿನ್ನ ಕುಮಾರರೂ ನನ್ನ ಸಂಗಡ ಇರುವಿರಿ. ಕರ್ತನು ಇಸ್ರಾಯೇಲ್‌ ಸೈನ್ಯವನ್ನು ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.

2 ಸಮುವೇಲ 1:12

ಸೌಲನೂ ಅವನ ಮಗನಾದ ಯೋನಾತಾನನೂ ಇಸ್ರಾಯೇಲಿನ ಮನೆಯವರೂ ಕರ್ತನ ಜನರೂ ಕತ್ತಿಯಿಂದ ಬಿದ್ದ ಕಾರಣ ಅವರಿ ಗೋಸ್ಕರ ಗೋಳಾಡಿ ಅತ್ತು ಸಾಯಂಕಾಲದ ವರೆಗೂ ಉಪವಾಸವಾಗಿದ್ದರು.

1 ದಿನವೃತ್ತಾಂತ 10:6

ಸೌಲನೂ ಅವನ ಮೂರು ಮಂದಿ ಕುಮಾರರೂ ಅವನ ಮನೆಯವರೆಲ್ಲರೂ ಒಟ್ಟಾಗಿ ಸತ್ತುಹೋದರು.

ಸಭಾಪ್ರಸಂಗಿ 9:1

ನಾನು ಇವೆಲ್ಲವುಗಳ ಮೇಲೆ ಮನಸ್ಸಿಟ್ಟು ಇವೆಲ್ಲವುಗಳಲ್ಲಿ ನಾನು ತೀರ್ಮಾನಿಸಿ ದ್ದೇನಂದರೆ--ನೀತಿವಂತನು ಮತ್ತು ಜ್ಞಾನಿ ಇವರ ಕೆಲಸಗಳು ದೇವರ ಕೈಯಲ್ಲಿವೆ; ಯಾವ ಮನುಷ್ಯನೂ ಅವರ ಮುಂದಿರುವ ಎಲ್ಲವುಗಳನ್ನು, ಅಂದರೆ ಪ್ರೀತಿ ಯನ್ನು ಅಥವಾ ದ್ವೇಷವನ್ನು ತಿಳಿಯಲಾರನು.

ಹೊಶೇಯ 13:10

ನಾನೇ ನಿನ್ನ ಅರಸನಾಗಿ ರುವೆನು; ನಿನ್ನ ಎಲ್ಲಾ ಪಟ್ಟಣಗಳಲ್ಲಿ ನಿನ್ನನ್ನು ರಕ್ಷಿಸುವ ಬೇರೆಯ ವನು ಎಲ್ಲಿದ್ದಾನೆ? ಮತ್ತು--ರಾಜನನ್ನೂ ಪ್ರಧಾನ ರನ್ನೂ ನನಗೆ ದಯಪಾಲಿಸು ಎಂದು ನೀನು ಹೇಳಿದ ನ್ಯಾಯಾಧಿಪತಿಗಳು ಎಲ್ಲಿದ್ದಾರೆ?

Interlinear

Choose Theme