ಕರ್ತನು ತಿರಿಗಿ ಶೀಲೋವಿನಲ್ಲಿ ಕಾಣಿಸಿಕೊಂಡನು. ಕರ್ತನು ಶೀಲೋವಿನಲ್ಲಿ ತನ್ನ ವಾಕ್ಯದಿಂದ ಸಮು ವೇಲನಿಗೆ ತನ್ನನ್ನು ಪ್ರಕಟಿಸಿಕೊಂಡನು.
Cross references
ಕರ್ತನು ಅಬ್ರಾಮನಿಗೆ ಕಾಣಿಸಿಕೊಂಡು--ನಿನ್ನ ಸಂತತಿಗೆ ನಾನು ಈ ದೇಶವನ್ನು ಕೊಡುವೆನು ಅಂದನು. ಆಗ ಅವನು ಅಲ್ಲಿ ತನಗೆ ಕಾಣಿಸಿಕೊಂಡ ಕರ್ತನಿಗೆ ಬಲಿಪೀಠವನ್ನು ಕಟ್ಟಿದನು.
ಇವುಗಳಾದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಕರ್ತನ ವಾಕ್ಯವು ಬಂದು--ಅಬ್ರಾಮನೇ, ಭಯಪಡಬೇಡ; ನಾನೇ ನಿನ್ನ ಗುರಾಣಿಯೂ ನಿನ್ನ ಅತ್ಯಧಿಕವಾದ ಬಹುಮಾನವೂ ಆಗಿದ್ದೇನೆ.
ಆತನು--ನನ್ನ ಮಾತುಗಳನ್ನು ಈಗ ಕೇಳಿರಿ--ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಕರ್ತನಾದ ನಾನು ದರ್ಶನದಲ್ಲಿ ಅವನಿಗೆ ತಿಳಿಯಪಡಿಸುವೆನು, ಸ್ವಪ್ನದಲ್ಲಿ ಅವನ ಸಂಗಡ ಮಾತನಾಡುವೆನು.
ನೀವೆಲ್ಲರು ಈಹೊತ್ತು ನಿಮ್ಮ ದೇವರಾದ ಕರ್ತನ ಮುಂದೆ ನಿಂತಿದ್ದೀರಿ;
ಬಾಲಕನಾದ ಸಮುವೇಲನು ಏಲಿಯ ಮುಂದೆ ಕರ್ತನಿಗೆ ಸೇವೆ ಮಾಡಿಕೊಂಡಿ ದ್ದನು. ಆ ದಿನಗಳಲ್ಲಿ ಕರ್ತನ ವಾಕ್ಯವು ವಿರಳವಾಗಿತ್ತು; ಅಲ್ಲಿ ಪ್ರಕಟವಾದ ದೇವದರ್ಶನವಿರಲಿಲ್ಲ.
ಅದಕ್ಕ ವನು--ಇಗೋ, ನಾನು ಇಲ್ಲಿ ಇದ್ದೇನೆ ಎಂದು ಹೇಳಿ ಏಲಿಯ ಬಳಿಗೆ ಓಡಿಹೋಗಿ,--ಇಗೋ, ಇಲ್ಲಿ ಇದ್ದೇನೆ; ನೀನು ನನ್ನನ್ನು ಕರೆದಿಯಲ್ಲಾ ಅಂದನು.
ಆಗ ಕರ್ತನು ಬಂದು ನಿಂತು ಮೊದಲಿನ ಹಾಗೆಯೇಸಮುವೇಲನೇ, ಸಮುವೇಲನೇ ಎಂದು ಕರೆದನು. ಅದಕ್ಕೆ ಸಮುವೇಲನು--ಮಾತನಾಡು; ನಿನ್ನ ದಾಸನು ಕೇಳುತ್ತಾನೆ ಅಂದನು.
ಆದರೆ ಸೌಲನು ಬರುವದಕ್ಕೆ ಒಂದು ದಿವಸ ಮುಂಚೆ ಕರ್ತನು ಸಮುವೇಲನ ಕಿವಿಯಲ್ಲಿ ತಿಳಿಯ ಪಡಿಸಿದ್ದೇನಂದರೆ--
ಆದರೆ ನಿಮ್ಮ ಎಲ್ಲಾ ಕೇಡುಗಳಿಂದಲೂ ಇಕ್ಕಟ್ಟುಗಳಿಂದಲೂ ನಿಮ್ಮನ್ನು ತಪ್ಪಿಸಿ ರಕ್ಷಿಸಿದ ನಿಮ್ಮ ದೇವರನ್ನು ನೀವು ಈ ದಿವಸದಲ್ಲಿ ತಿರಸ್ಕರಿಸಿ ಆತನಿಗೆ--ನಮ್ಮ ಮೇಲೆ ಒಬ್ಬ ಅರಸನನ್ನು ನೇಮಿಸು ಎಂದು ಹೇಳಿದಿರಿ. ಆದದ ರಿಂದ ಈಗ ಕರ್ತನ ಮುಂದೆ ನಿಮ್ಮ ಗೋತ್ರಗಳ ಪ್ರಕಾರವಾಗಿಯೂ ನಿಮ್ಮ ಸಹಸ್ರಗಳ ಪ್ರಕಾರವಾ ಗಿಯೂ ಕಾಣಿಸಿಕೊಳ್ಳಿರಿ ಅಂದನು.
ನಿಶ್ಚಯ ವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಮರ್ಮ ವನ್ನು ತಿಳಿಸದೆ ಕರ್ತನಾದ ದೇವರು ಏನನ್ನೂ ಮಾಡು ವದಿಲ್ಲ.
ಕಳೆದ ಕಾಲದಲ್ಲಿ ಪಿತೃಗಳ ಸಂಗಡ ಪ್ರವಾದಿಗಳ ಮುಖಾಂತರ ನಾನಾ ಸಮಯಗಳಲ್ಲಿ ವಿಧವಿಧವಾದ ರೀತಿಯಲ್ಲಿ ಮಾತನಾಡಿದ ದೇವರು