1 ಸಮುವೇಲ 3:10 · ಕನ್ನಡ ಬೈಬಲ್
ಆಗ ಕರ್ತನು ಬಂದು ನಿಂತು ಮೊದಲಿನ ಹಾಗೆಯೇಸಮುವೇಲನೇ, ಸಮುವೇಲನೇ ಎಂದು ಕರೆದನು. ಅದಕ್ಕೆ ಸಮುವೇಲನು--ಮಾತನಾಡು; ನಿನ್ನ ದಾಸನು ಕೇಳುತ್ತಾನೆ ಅಂದನು.
Cross references
ಯೆಹೋಶುವ 5:14
ಅದಕ್ಕೆ ಅವನು--ಅಲ್ಲ; ನಾನು ಈಗ ಕರ್ತನ ಸೈನ್ಯದ ಅಧಿಪತಿ ಯಾಗಿ ಬಂದಿದ್ದೇನೆ ಅಂದನು; ಆಗ ಯೆಹೋಶುವನು ಬೋರಲು ಬಿದ್ದು ಆತನನ್ನು ಆರಾಧಿಸಿ ಆತನಿಗೆನನ್ನ ಒಡೆಯನು ತನ್ನ ಸೇವಕನಿಗೆ ಏನು ಹೇಳುತ್ತಾನೆ ಅಂದನು.ಅದಕ್ಕೆ ಕರ್ತನ ಸೈನ್ಯದ ಅಧಿಪತಿಯು ಯೆಹೋಶುವನಿಗೆ--ನಿನ್ನ ಕಾಲಿನಿಂದ ಕೆರಗಳನ್ನು ತೆಗೆದುಹಾಕು; ನೀನು ನಿಂತಿರುವ ಸ್ಥಳವು ಪರಿಶುದ್ಧ ವಾದದ್ದು ಅಂದನು. ಹಾಗೆಯೇ ಯೆಹೋಶುವನು ಮಾಡಿದನು.
1 ಸಮುವೇಲ 3:4
ಅದಕ್ಕ ವನು--ಇಗೋ, ನಾನು ಇಲ್ಲಿ ಇದ್ದೇನೆ ಎಂದು ಹೇಳಿ ಏಲಿಯ ಬಳಿಗೆ ಓಡಿಹೋಗಿ,--ಇಗೋ, ಇಲ್ಲಿ ಇದ್ದೇನೆ; ನೀನು ನನ್ನನ್ನು ಕರೆದಿಯಲ್ಲಾ ಅಂದನು.
1 ಸಮುವೇಲ 3:8
ಕರ್ತನು ಮತ್ತೆ ಮೂರನೇ ಸಾರಿ--ಸಮುವೇಲನೇ ಎಂದು ಕರೆದನು. ಅವನು ಎದ್ದು ಏಲಿಯ ಬಳಿಗೆ ಹೋಗಿ--ಇಗೋ, ಇದ್ದೇನೆ; ನೀನು ನನ್ನನ್ನು ಕರೆದಿಯಲ್ಲಾ ಅಂದನು. ಆಗ ಕರ್ತನು ಹುಡುಗನನ್ನು ಕರೆಯುತ್ತಾನೆಂದು ಏಲಿಯು ಗ್ರಹಿಸಿಕೊಂಡನು.